ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2023-25ರ ಸಾಲಿನಲ್ಲಿ ನಡೆಸಿದ ಎಂಎಸ್’ಸಿ ಕ್ಲಿನಿಕಲ್ ಸೈಕಾಲಜಿ ಕೋರ್ಸ್ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಮಾನಸ ಟ್ರಸ್ಟ್’ನ ಕಟೀಲು ಅಶೋಕ್ ಪೈ ಸ್ಮಾರಕ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ಏಳು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ವಿಶ್ವವಿದ್ಯಾಲಯವು ಫಲಿತಾಂಶಗಳನ್ನು ಪ್ರಕಟಿಸಿದ್ದು, 10ರಲ್ಲಿ 7 ರ‍್ಯಾಂಕ್’ಗಳನ್ನು ಅಶೋಕ್ ಪೈ ಕಾಲೇಜು ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ.
ಉನ್ನತ ಶ್ರೇಣಿಯಲ್ಲಿ ಯಶಸ್ವಿಯಾಗಿ ರ‍್ಯಾಂಕ್‌ಗಳನ್ನು ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ, ಅವರಿಗೆ ತರಬೇತಿ ನೀಡಿದ ಶಿಕ್ಷಕರಿಗೆ ಮಾನಸ ಟ್ರಸ್ಟ್ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.
ಜಿಲ್ಲೆಯ ಪ್ರತಿಷ್ಠಿತ ಮಾನಸ ಟ್ರಸ್ಟ್ ಅನೇಕ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಶ್ರೇಷ್ಠ ಗುಣಮಟ್ಟದ ಸಂಸ್ಥೆಗಳನ್ನು ಆರಂಭಿಸಿ ಇಂದಿನ ಅವಶ್ಯಕತೆಗಳಿಗೆ ತಕ್ಕ ವಿವಿಧ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಕಟೀಲು ಅಶೋಕ್ ಪೈ ಸ್ಮಾರಕ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆಯ ವಿಶೇಷವಾದ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂಎಸ್‌ಸಿ ಹಾಗೂ ಎಂಫಿಲ್ ಕೋರ್ಸ್’ಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿವರು:
-
ನಯನ - 2ನೇ ರ‍್ಯಾಂಕ್ -
ಈಶಾ ಜೈನ್ - 3ನೇ ರ‍್ಯಾಂಕ್ -
ರಜಿಯಸೇಹ್ರಿಷ್ - 3ನೇ ರ‍್ಯಾಂಕ್ -
ರಾಜೇಶ್ವರಿ ನೇಜಿಕಾರ್ - 4ನೇ ರ‍್ಯಾಂಕ್ -
ಉಷಾ ಉಮೇಶ್ ಸಿಂದಗಿ - 6ನೇ ರ‍್ಯಾಂಕ್ -
ಅನನ್ಯಾಎಸ್ - 9ನೇ ರ‍್ಯಾಂಕ್ -
ಪ್ರಣಮ್ಯ ಜಿ ಆರ್ - 9ನೇ ರ‍್ಯಾಂಕ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















