ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಮಲ್ಲೇಶ್ವರ 8ನೇ ಕ್ರಾಸ್‌ನಲ್ಲಿರುವ ಶ್ರೀ ಆಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ನಡೆಯುತ್ತಿರುವ 26ನೇ ಶ್ರೀರಾಮನವಮಿ ಸಂಗೀತೋತ್ಸವ – 2026 ಭಕ್ತಿ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಅದ್ಭುತ ಸಂಗಮವಾಗಿ ಗಮನಸೆಳೆಯುತ್ತಿದೆ. ಮಾರ್ಚ್ 27ರವರೆಗೆ ನಡೆಯುವ ಈ ಮಹೋತ್ಸವದಲ್ಲಿ ಪ್ರತಿದಿನವೂ ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು, ಭಜನೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಭಕ್ತರನ್ನು ಆಕರ್ಷಿಸುತ್ತಿವೆ.
‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ – ಮಾರ್ಚ್ 22ರ ವಿಶೇಷ ಆಕರ್ಷಣೆ
ಮಾರ್ಚ್ 22, ಭಾನುವಾರ ಸಂಜೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ‘ಪ್ರಣವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾ ದೇವಸ್ಥಾನದ ಪ್ರಧಾನ ಅರ್ಚಕರಾದ ಕಡ್ಡಿ ಎಸ್. ಜಯತೀರ್ಥಾಚಾರ್ಯರು ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು:
- ಡಾ. ಗುರುರಾಜ ಪೋಶೆಟ್ಟಿಹಳ್ಳಿ – ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರು
- ವಿ. ಮಾಲತಿ ಶಿಂಗ್ಲಾಚಾರ್ – ಸಂಗೀತ ಕ್ಷೇತ್ರ
- ವಿ. ರಾಮಲಿಂಗಂ – ಯೋಗ ಮತ್ತು ನೃತ್ಯ ಕ್ಷೇತ್ರ
ಪ್ರಶಸ್ತಿ ಪ್ರದಾನ ನಂತರ ರವೀಂದ್ರ ನರಹರಿ ತಂಡದವರಿಂದ ಸೂತ್ರದ ಬೊಂಬೆ ಆಟ (ಪಪೆಟ್ ಶೋ) ಪ್ರದರ್ಶನ ನಡೆಯಲಿದೆ. ಇದು ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಮನರಂಜನೆ ನೀಡುವ ವಿಶೇಷ ಕಾರ್ಯಕ್ರಮವಾಗಿದೆ.
ಸಂಗೀತೋತ್ಸವದ ಕಾರ್ಯಕ್ರಮಗಳ ಸರಣಿ
ಸಂಗೀತೋತ್ಸವದಲ್ಲಿ ಖ್ಯಾತ ಕಲಾವಿದರು ಮತ್ತು ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ:
- ಮಾ. 23 – ಡಾ. ಅಂಬಿಕಾ ಶಾಸ್ತ್ರಿ ಮತ್ತು ವೃಂದ
- ಮಾ. 24 – ಹೆಚ್.ಎಸ್. ಕಾರ್ತಿಕೇಯ ಶರ್ಮ ಮತ್ತು ವೃಂದ
- ಮಾ. 25 – ‘ಲಯ ರಂಜನಿ’ – ಜಿ.ಎಸ್. ನಾಗರಾಜ್ ಮತ್ತು ವೃಂದ
- ಮಾ. 26 – ಜಯರಂಗ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಗಾಯನ
- ಮಾ. 27 – ಡಾ. ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿಗಳ ಶಿಷ್ಯವೃಂದ
ಸಂಯುಕ್ತ ಆಯೋಜನೆ
ಈ ಮಹೋತ್ಸವವನ್ನು ಕೆಳಗಿನ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿವೆ:
- ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಶನ್ (ರಿ.)
- ಶಿವ–ಶ್ರೀಕಾಂತ ಸಂಗೀತ ಪ್ರತಿಷ್ಠಾನ (ರಿ.)
- ಸಪ್ತಗಿರಿ ಭಜನಾ ಮಂಡಳಿ (ರಿ.)
- ದಾಸ ಸಾಹಿತ್ಯ ಪ್ರಾಜೆಕ್ಟ್ (ಟಿ.ಟಿ.ಡಿ.)
- ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















