ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳಲ್ಲಿ ಭಾರಿ ಕಡಿತವಾಗಲಿದ್ದು, ತೃತೀಯ ಭಾಷೆಯ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರಲು ತೀರ್ಮಾನಿಸಲಾಗಿದೆ.
ಕೆ.ಆರ್. ವೃತ್ತದಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ #Minister Machu Bangarappa ತಿಳಿಸಿದ್ದಾರೆ.
ಇದುವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು #SSLC Exam ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಈ ವರ್ಷದಿಂದ ಇದನ್ನು 525 ಅಂಕಗಳಿಗೆ ಸೀಮಿತಗೊಳಿಸಲಾಗಿದೆ. ತೃತೀಯ ಭಾಷೆಯ (ಹೆಚ್ಚಾಗಿ ಹಿಂದಿ) ಅಂಕಗಳನ್ನು ಒಟ್ಟು ಮೊತ್ತದಿಂದ ಕೈಬಿಡಲಾಗಿದೆ. ಇನ್ನು ಹಿಂದಿ ಮಾತ್ರ ತೃತೀಯ ಭಾಷೆಯಲ್ಲ. ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಸೇರಿದಂತೆ ತೃತೀಯ ಭಾಷೆಯಾಗಿ ತೆಗೆದುಕೊಂಡ ಎಲ್ಲಾ ಭಾಷೆಗಳ ಪರೀಕ್ಷೆ ನಡೆಯಲಿದೆ. ಆದರೆ ಅಂಕಗಳ ಬದಲಾಗಿ ಗ್ರೇಡ್ ನೀಡಲಾಗುತ್ತದೆ.
ತೃತೀಯ ಭಾಷೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ ಬದಲಿಗೆ A, B, C, D ಎಂಬ ಗ್ರೇಡ್‌ಗಳನ್ನು ನೀಡಲಾಗುವುದು. ಅಂಕಗಳನ್ನು ಪರಿಗಣಿಸದಿದ್ದರೂ, ವಿದ್ಯಾರ್ಥಿಗಳು ತೃತೀಯ ಭಾಷೆಯ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಮಾರ್ಚ್ 31ರಂದು ತೃತೀಯ ಭಾಷೆಯ ಪರೀಕ್ಷೆ ನಡೆಯಲಿದೆ.
ಸದ್ಯಕ್ಕೆ ಈ ನಿಯಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















