ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಂಧಿಬಜಾರ್‌ನ ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮವನ್ನು ಏ.4ರ ಸಂಜೆ 6 ಗಂಟೆಗೆ ಅಲ್ಲಮಪ್ರಭು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರ್ಯವೈಶ್ಯ ಸ್ನೇಹಿತರ ಬಳಗದ ನೇತೃತ್ವದಲ್ಲಿ ಏ.2ರಿಂದ 5ರವರೆಗೆ ಅಲ್ಲಮಪ್ರಭು ಮೈದಾನದಲ್ಲಿ `ಶೆಟ್ಟರ ಸಂತೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಏ.4ರಂದು ನಮ್ಮ ಸಂಘದ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ ಎಂದರು.
ಸುವರ್ಣಮಹೋತ್ಸವದ ಅಂಗವಾಗಿ ಸುಮಾರು 80 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅಂದು ಸಂಘದ ಸ್ಥಾಪಕ ಅಧ್ಯಕ್ಷರಾದ ಕಮಲಾ ಮಂಜುನಾಥ್ ಹಾಗೂ 50 ವರ್ಷದಲ್ಲಿ 35 ಅಧ್ಯಕ್ಷರಾಗಿದ್ದು, ಅವರೆಲ್ಲರಿಗೂ ಸಹ ಸನ್ಮಾನಿಸಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಸತ್ಯವತಿ ಡಿ.ಹೆಚ್.ಶಂಕರಮೂರ್ತಿ, ಜಯಲಕ್ಷ್ಮೀ ಕೆ.ಎಸ್.ಈಶ್ವರಪ್ಪ, ತೇಜಸ್ವಿನಿ ಬಿ.ವೈ.ರಾಘವೇಂದ್ರ, ಉಷಾ ರಾಣಿ ಎಸ್.ಎನ್.ಚನ್ನಬಸಪ್ಪ ಹಾಗೂ ನಮಿತಾ ಡಾ.ಧನಂಜಯಸರ್ಜಿ ಆಗಮಿಸಲಿದ್ದು, ವಿಶೇಷ ಆಹ್ವಾನಿತರಾಗಿ ಅಖಿಲ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷೆ ಉಮಾ ಸಾಯಿರಾಂ, ಸಂಘದ ಸ್ಥಾಪಕ ಅಧ್ಯಕ್ಷ ಕಮಲಾ ಮಂಜುನಾಥ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಆರ್ಯವೈಶ್ಯ ಮಹಾಜನ ಸಮಿತಿಯ ಅಧ್ಯಕ್ಷ ಎಸ್.ಕೆ.ಶೇಷಾಚಲ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕವಿತಾ ಸಂತೋಷ್, ಕಾರ್ಯದರ್ಶಿ ನಮ್ರತಾ ಪ್ರಶಾಂತ್, ಶುಭಾ, ದೀಪಾ, ಜಯಶ್ರೀ, ಸುಮಾ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















