ಕಲ್ಪ ಮೀಡಿಯಾ ಹೌಸ್ | ಶಿರಸಿ |
ಮಲೆನಾಡಿನ ಸಾಂಪ್ರದಾಯಿಕ ಆತಿಥ್ಯದೊಂದಿಗೆ ಸೇವೆ ನೀಡಲಿದೆ. ಉತ್ತರ ಕನ್ನಡದ ಹಸಿರು ಸಿರಿಯ ನಡುವೆ ನೆಲೆಸಿರುವ ಈ ತಾಣವು ಆರಾಮದಾಯಕ ಮತ್ತು ಸೊಗಸಾದ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಬಯಸುವವರಿಗಾಗಿ ಇಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ 40 ಐಷಾರಾಮಿ ಕೊಠಡಿಗಳು ಮತ್ತು ಸೂಟ್‌ಗಳಿವೆ.
ಪ್ರವಾಸೋದ್ಯಮ #Tourism ದೃಷ್ಟಿಯಿಂದ ಉತ್ತರ ಕನ್ನಡ #UttaraKannada ಅತ್ಯುತ್ತಮವಾಗಿದ್ದು, ಇಲ್ಲನ ಪ್ರವಾಸಿ ತಾಣಗಳನ್ನು ವೈಭವೀಕರಿಸುವುದರೊಂದಿಗೆ ಉತ್ತರ ಕನ್ನಡ ಸಂಸ್ಕೃತಿ, ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಿರಸಿಯಲ್ಲಿ #Sirsi ತನ್ನ ನೂತನ ‘ಎಸೆನ್ಷಿಯಾ ರೆಸಾರ್ಟ್ ಮತ್ತು ಸ್ಪಾ’ ಮೂಲಕ ಸೇವೆ ನೀಡಲು ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.
ಈ ಕುರಿತಂತೆ ತಾಲೂಕಿನ ಎಕ್ಕಂಬಿ ಬಳಿಯ ಎಸೆನ್ಷಿಯಾ ರೆಸಾರ್ಟ್ ಆಂಡ್ ಸ್ಪಾದಲ್ಲಿ #EssentiaResortandSpa ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸೆನ್ಷಿಯಾ ಗ್ರೂಪ್ ಆಫ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್‌ನ ಸಿಇಒ ಮೊಹಮ್ಮದ್ ಪರ್ವೇಜ್ ಅವರು, ಪ್ರಕೃತಿಯ ಶಾಂತತೆ ಮತ್ತು ಉದ್ಭುತ ವಿನ್ಯಾಸದಲ್ಲಿ ನಿರ್ಮಾಣವಾದ ಈ ರೆಸಾರ್ಟ್, ಪ್ರವಾಸಿಗರಿಗೆ ಒಂದು ವಿಶಿಷ್ಟ ಅನುಭವ ನೀಡಲು ಸಜ್ಜಾಗಿದೆ ಎಂದರು.
ಮಲೆನಾಡಿನ ಸಾಂಪ್ರದಾಯಿಕ ಆತಿಥ್ಯದೊಂದಿಗೆ ಸೇವೆ ನೀಡಲಿದೆ. ಉತ್ತರ ಕನ್ನಡದ ಹಸಿರು ಸಿರಿಯ ನಡುವೆ ನೆಲೆಸಿರುವ ಈ ತಾಣವು ಆರಾಮದಾಯಕ ಮತ್ತು ಸೊಗಸಾದ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಬಯಸುವವರಿಗಾಗಿ ಇಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ 40 ಐಷಾರಾಮಿ ಕೊಠಡಿಗಳು ಮತ್ತು ಸೂಟ್‌ಗಳಿವೆ. ಎಸೆನ್ಷಿಯಾ ಸಮೂಹದ ವಿಶಿಷ್ಟ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಪ್ರತಿಯೊಂದು ಜಾಗವೂ ಅತಿಥಿಗಳಿಗೆ ಆಪ್ತತೆಯ ಅನುಭವ ನೀಡುತ್ತದೆ ಎಂದರು.
ನಗರಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವ ಎಸೆನ್ಷಿಯಾ, ಪ್ರವಾಸೋದ್ಯಮದ ಅಗಾಧ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ತನ್ನ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುತ್ತಿದೆ. ಪ್ರಾದೇಶಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಮೆಟ್ರೋ ನಗರಗಳ ಆಚೆಗೂ ಬ್ರ್ಯಾಂಡ್ ಅನ್ನು ಬಲಪಡಿಸುವ ಉದ್ದೇಶದಿಂದ ಶಿರಸಿ, ನಾಗ್ಪುರ ಮತ್ತು ಸಕಲೇಶಪುರಗಳಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್‌ನ ಸ್ಥಾನಮಾನವನ್ನು ಗಟ್ಟಿಗೊಳಿಸುವ ಗುರಿಯನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಓಂಕಾರ್ ಜಂಗಲ್ ರೆಸಾರ್ಟ್ ಮಾಲೀಕ ರವಿ ಪೂಜಾರಿ, ಎಸೆನ್ಷಿಯಾ ಗ್ರೂಪ್‌ನ ಕಾರ್ತಿಕೇಯನ್, ಜನರಲ್ ಮ್ಯಾನೇಜರ್ ಪ್ರತಾಪ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















