ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಗವಾನ್ ಶ್ರೀ 1008 ಮಹಾವೀರ ಸ್ವಾಮಿಯ 2625ನೇ ಜಯಂತ್ಯೋತ್ಸವದ ಅಂಗವಾಗಿ ಬಸವೇಶ್ವರ ನಗರದ ಶ್ರೀ ಆದಿನಾಥ ಜಿನಮಂದಿರದಲ್ಲಿ ದಿಗಂಬರ ಜೈನ ಸಂಘದ ವತಿಯಿಂದ ಮಹಾವೀರ ಜಯಂತಿಯನ್ನು #Mahaveera Jayanthi ಅದ್ಧೂರಿಯಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆಚರಿಸಲಾಯಿತು.
ಬೆಳಿಗ್ಗೆ ಸ್ವಾಮಿಗೆ ರಾಜಬೀದಿ ಉತ್ಸವ, ಬಳಿಕ ಪಂಚಾಮೃತ ಅಭಿಷೇಕ, ಜಿನ ಶಿಶುವಿನ ನಾಮಕರಣ ಮಹೋತ್ಸವ, ತೊಟ್ಟಿಲು ಸೇವೆ ಮತ್ತು ಧಾರ್ಮಿಕಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಬಲ್ಕೀಶ್‌ಬಾನು ಆಗಮಿಸಿದ್ದರು. ಸುಂದರ್‌ಪ್ರಭು ಎಂ. ಮಹಾವೀರ ಸ್ವಾಮಿಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯರಾಜ್ ಬಿ.ಪಾಂಡಿ ವಹಿಸಿದ್ದರು.
ಪ್ರಿಯಕಾರಿಣಿ ಮಹಿಳಾ ಸಮಾಜ ಮತ್ತು ಜೈನ್ ಮಿಲನ್ ಶಿವಮೊಗ್ಗ ಕಾರ್ಯಕ್ರಮಕ್ಕೆ ಸಹಯೋಗ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















