ಕಲ್ಪ ಮೀಡಿಯಾ ಹೌಸ್ | ಕೆ ಆರ್ ಪೇಟೆ |
ತಾಲ್ಲೂಕು ಕಸಬಾ ಹೋಬಳಿ ಚೌಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಜಯಲಕ್ಷ್ಮಿಶಂಕರೇಗೌಡ ಹಾಗೂ ನೂತನ ಉಪಾಧ್ಯಕ್ಷರಾಗಿ ಮಧುಹರೀಶ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನ ಬಯಸಿ ವಿಜಯಲಕ್ಷ್ಮಿ ಶಂಕರೇಗೌಡ ಉಪಾಧ್ಯಕ್ಷ ಸ್ಥಾನ ಬಯಸಿ ಮಧುಹರೀಶ್ ನಾಮಪತ್ರವನ್ನು ಸಲ್ಲಿಸಿದರೆ ಬಿಟ್ಟರೆ ಉಳಿದ ಯಾವ ಸದಸ್ಯರು ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಚುನಾವಣಾ ಅಧಿಕಾರಿ ಸಂತೋಷ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಹೆಸರನ್ನು ಘೋಷಿಸಿದರು.
ನೂತನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನೂತನ ನಿರ್ದೇಶಕರನ್ನು ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿ ಆರ್ ನಾಗರಾಜು ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿ ಆರ್ ನಾಗರಾಜು ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಶಸ್ವಿಯಾಗಿ ನಡೆಸಿಕೊಟ್ಟ ಗ್ರಾಮದ ಎಲ್ಲಾ ಮುಖಂಡರು, ನಮಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ಬರುತ್ತಿರುವ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ ಬಿ ಹರೀಶ್ ಅವರಿಗೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಸುಸೂತ್ರವಾಗಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಿಕೊಟ್ಟ ಚುನಾವಣಾ ಅಧಿಕಾರಿಗಳಿಗೆ ಅಭಿನಂದನೆ ಗ್ರಾಮದ ಪರವಾಗಿ ಸಲ್ಲಿಸುತ್ತೇನೆ.ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಎಲ್ಲರಿಗಿಂತ ಅತಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ನಿಭಾಯಿಸಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡಿ ನಂತರ ರಾಜಕಾರಣ ಬದಿಗೊತ್ತಿ ಸಂಘದ ಶ್ರೇಯೋಭಿವೃದ್ಧಿಗೆ ಗ್ರಾಮದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಭೇದ ಮಾಡದೇ ಪಕ್ಷಾತೀತವಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಸಿ ಆರ್ ನಾಗರಾಜು ಸಲಹೆ ನೀಡಿದರು.
ಬಳಿಕ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿಶಂಕರೇಗೌಡ ಮಾತನಾಡಿ ನನ್ನನ್ನು ಸಂಘದ ಆಡಳಿತ ಮಂಡಳಿಯ ಅದ್ಯಕ್ಷೆಯಾಗಲು ಸಹಕಾರ ಮಾಡಿದ ಗ್ರಾಮದ ಮುಖಂಡರು, ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.ನನ್ನ ಅಧಿಕಾರದ ಅವಧಿಯಲ್ಲಿ ನನ್ನ ಶಕ್ತಿ ಮೀರಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ.ಸಂಘವು ಅಭಿವೃದ್ಧಿ ಹೊಂದಬೇಕಾದರೆ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು.ಸಂಘ ನಮ್ಮದು ಎಂಬ ಭಾವನೆ ಇಟ್ಟುಕೊಂಡಾಗ ಮಾತ್ರ ಸಂಘವು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘದ ನೂತನ ನಿರ್ದೇಶಕರುಗಳಾದ ಪ್ರೇಮ, ಮಂಜುಳಾ, ನಾಗರತ್ನ, ಮಧು, ವನಜಾಕ್ಷಿ, ವಿಜಯಲಕ್ಷ್ಮಿ, ಹೇಮಾವತಿ, ಲಕ್ಷ್ಮಮ್ಮ ನಾಗರತ್ನ, ನಂದಿನಿ, ನಾಗರತ್ನ ಅವರುಗಳನ್ನು ಗ್ರಾಮದ ಮುಖಂಡರಾದ ಸಂಜೀವಪ್ಪ, ಶಂಕರೇಗೌಡ, ನಾಗರಾಜು, ಗೋಪಾಲ್, ಮಂಜೇಗೌಡ, ಯೋಗಣ್ಣ,ನಾಗರಾಜು, ವೆಂಕಟೇಶ, ಕೃಷ್ಣೇಗೌಡ (ಕಿಟ್ಟಿ), ಕೃಷ್ಣೇಗೌಡ, ಹರೀಶ್, ಮೋಹನ್, ಶ್ರೀನಿವಾಸ್, ಚೇತನ, ಗೋವಿಂದರಾಜು, ಲೋಕೇಶ್, ಅರವಿಂದ್, ಮೋಹನ್, ಮಂಜು, ಪ್ರವೀಣ್, ಕುಮಾರ್, ರಾಜಯ್ಯ, ರಾಜೇಗೌಡ, ಸಂಜಯ್ ಕಾರ್ಯದರ್ಶಿ ರಂಜಿತಾ ಸುರೇಶ್, ರತ್ನಮ್ಮ ಸುಬ್ಬೇಗೌಡ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















