ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದಾಗಿ ರೈಲು ಸಂಖ್ಯೆ 17347/17348 ಎಸ್’ಎಸ್’ಎಸ್ ಹುಬ್ಬಳ್ಳಿ – ಚಿತ್ರದುರ್ಗ – ಎಸ್’ಎಸ್’ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್’ಪ್ರೆಸ್ ರೈಲುಗಳ ಸಂಚಾರವನ್ನು ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವಿನ ಭಾಗಶಃ ರದ್ದತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಈ ಮೊದಲು 31.03.2026ರವರೆಗೆ ಸೂಚಿಸಲಾಗಿದ್ದ ಈ ಭಾಗಶಃ ರದ್ದತಿಯು, ಈಗ 03.04.2026 ರಿಂದ 30.09.2026ರವರೆಗೆ ಜಾರಿಯಲ್ಲಿರುತ್ತದೆ ಎಂದಿದೆ.
ಅದರಂತೆ, ರೈಲು ಸಂಖ್ಯೆ 17347 ಎಸ್’ಎಸ್’ಎಸ್ ಹುಬ್ಬಳ್ಳಿ – ಚಿತ್ರದುರ್ಗ ದೈನಂದಿನ ಕಾಯ್ದಿರಿಸದ ಎಕ್ಸ್’ಪ್ರೆಸ್ ರೈಲು ಚಿತ್ರದುರ್ಗದ ಬದಲಿಗೆ ಚಿಕ್ಕಜಾಜೂರು ನಿಲ್ದಾಣದಲ್ಲಿಯೇ ಕೊನೆಗೊಳ್ಳಲಿದೆ. ಹಾಗೆಯೇ, ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್’ಎಸ್’ಎಸ್ ಹುಬ್ಬಳ್ಳಿ ದೈನಂದಿನ ಕಾಯ್ದಿರಿಸದ ಎಕ್ಸ್’ಪ್ರೆಸ್ ಚಿತ್ರದುರ್ಗದ ಬದಲಿಗೆ ಚಿಕ್ಕಜಾಜೂರು ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ.
ಆದ್ದರಿಂದ, ಮೇಲಿನ ಅವಧಿಯಲ್ಲಿ ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಡುವಿನ ರೈಲು ಸೇವೆಗಳು ಭಾಗಶಃ ರದ್ದಾಗಿರುತ್ತವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















