ಕಲ್ಪ ಮೀಡಿಯಾ ಹೌಸ್ | ಸಿನೆಮಾ ಸುದ್ಧಿ |
ಆರ್ ಅಂಡ್ ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿ ಡಿ.ಎನ್.ನಾಗೀರೆಡ್ಡಿ ಕಥೆ-ನಿರ್ಮಾಣ, ಆರ್.ಅನಂತರಾಜು ನಿರ್ದೇಶನ, ವಿಜಯರಾಘವೇಂದ್ರ Vijaya Raghavendra ಅಭಿನಯಿಸಿರುವ ’ಶ್ರೀಮತಿ ಸಿಂಧೂರ’ Shrimathi Sindoora ಚಿತ್ರದ ಟೀಸರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ನಾಯಕಿ ಪ್ರಿಯಾಹೆಗಡೆ, ಹೊಸ ಪರಿಚಯ ಡಿ.ಎನ್.ಲಿಯೋ ಮನೋಜ್, ಸಹ ನಿರ್ಮಾಪಕ ಡಿ.ಎನ್.ಜೈ ನಾರಾಯಾಣ್, ಸಾಹಿತಿ ಕವಿರಾಜ್, ಕಲಾವಿದರುಗಳಾದ ಗಣೇಶ್‌ರಾವ್ ಕೇಸರಕರ್, ರೇಷ್ಮಾ.ವಿ.ಗೌಡ, ಪ್ರಸನ್ನಬಾಗೀನ, ಉಗ್ರಂ ರವಿ, ಮಾಸ್ಟರ್ ಮೌರ್ಯ, ನೃತ್ಯ ಸಂಯೋಜಕ ಫೈವ್‌ಸ್ಟಾರ್ ಗಣೇಶ್, ಗಂಗಾಧರ್ ಅನುಭವಗಳನ್ನು ನೆನಪು ಮಾಡಿಕೊಂಡರು.+
ನಂತರ ಮಾತನಾಡಿದ ನಿರ್ಮಾಪಕರು, ಇದು ನನಗೆ ಇಪ್ಪತ್ತು ವರ್ಷದ ಕನಸು. ಸಿನಿಮಾ ಕಾರ್ಮಿಕರಿಗೆ ಏನಾದರೂ ಕೆಲಸ ಕೊಡಬೇಕೆಂಬ ಒಳ್ಳೆಯ ಉದ್ದೇಶದಿಂದ ಬಂಡವಾಳ ಹೂಡಿದ್ದೇನೆ. ಚಿತ್ರದಲ್ಲಿ ’ಹೂ ಮಳೆ’ ಹಾಡಿದೆ. ಇಂದು ಜೋರಾಗಿ ಮಳೆ ಬರುತ್ತಿದೆ. ಆದರೂ ಮಾಧ್ಯಮದವರು ಬಂದಿರುವುದು ಖುಷಿ ತಂದಿದೆ. ಆಂಜನೇಯನ ಹಾಡು ಸಿನಿಮಾದ ಹೈಲೈಟ್. ಕೈಲಾಶ್‌ಖೇರ್ ಹಾಡಿ ಇದು ಕೇವಲ ಕರ್ನಾಟಕ ಮಾತ್ರವಲ್ಲ. ಸಾರೆ ಇಂಡಿಯಾಗೆ ಹಾಡಿದ್ದೇನೆಂದು ಸಂತಸ ಪಟ್ಟರು. ಹುಡುಗಿಯೊಬ್ಬಳು ಮದುವೆ ಆದರೆ ಶ್ರೀಮತಿ ಆಗುತ್ತಾಳೆ. ಸಿಂಧೂರ ಎನ್ನುವುದು ಆಕೆಗೆ ಸಿಗುವ ಗೌರವ. ಅದೇ ರೀತಿ ಜವಬ್ದಾರಿ ಹುಡುಗನೊಬ್ಬ ಇಷ್ಟಪಟ್ಟ ಹುಡುಗಿಯನ್ನು ಮದುವೆ ಆಗುತ್ತಾನೆ. ಮುಂದೆ ಆತನಿಗೆ ಅನೇಕ ತಿರುವುಗಳು ಬರುತ್ತದೆ. ಇದರಿಂದ ಅವನು ಯಾವ ದಿಕ್ಕಿಗೆ ಹೋಗುತ್ತಾನೆ. ಏನೆಲ್ಲಾ ಬದಲಾವಣೆಗಳು ಆಗುತ್ತದೆ. ಸಂಸಾರದಲ್ಲಿ ದೈವಭಕ್ತಿ ಇರಬೇಕು. ನಾವು ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ. ಇದೊಂದು ಪಕ್ಕಾ ಕೌಟಂಬಿಕ ಮನರಂಜನೆಯಿಂದ ಕೂಡಿದ ಸಿನಿಮಾ ಎನ್ನಬಹುದು.
Also read: ರಾಯರ ಸನ್ನಿಧಿಯಲ್ಲಿ ಸಂಧ್ಯಾ-ಸೌಮ್ಯಾ ಯುಗಳ ಗಾಯನ
ಗಂಗಾಧರ್ ಹೇಳಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ನೋಡಿಕೊಂಡಿದ್ದಾರೆ. ಅಪ್ಪು ಜತೆ ಸಿನಿಮಾ ಮಾಡಲು ನಾನು, ಗಂಗೂ ಯೋಜನೆ ಹಾಕಿಕೊಂಡಿದ್ದೇವು. ಅದು ಆಗದಿದ್ದರೂ, ಕುಟುಂಬದ ಕುಡಿ ವಿಜಯ್ ಅವರೊಂದಿಗೆ ಮಾಡಿರುವುದು ಖುಷಿ ಕೊಟ್ಟಿದೆ. ಇಂತಹ ಕುಟುಂಬದ ಮೇಲೆ ನೀಚ ಚೇತನ್ ಮಾತನಾಡಿರುವುದನ್ನು ಖಂಡಿಸುತ್ತೇನೆ. ಒಂದು ವೇಳೆ ಸಿನಿಮಾ ಗೆದ್ದರೆ, ಲಾಭವನ್ನು ಸಿನಿಮಾಕ್ಕೆ ದುಡಿದವರೆಲ್ಲರಿಗೂ ಹಂಚುತ್ತೇನೆಂದು ಡಿ.ಎನ್.ನಾಗೀರೆಡ್ಡಿ ಭರವಸೆ ನೀಡಿದರು.
ನಿರ್ಮಾಪಕರು ಹರಸಾಹಸ ಮಾಡಿದ್ದಾರೆ. ಮನೆಗೆ ಬಂದು ನಿರ್ದೇಶಕರು, ಗಂಗಾಧರ್ ಸಾರಾಂಶ ಹೇಳಿದಾಗ, ಸಿನಿಮಾ ನೋಡಿದಂತೆ ಭಾಸವಾಯಿತು. ಈಗಿನ ಸಿನಿಮಾಗಳ ಟ್ರೆಂಡ್ ಹೊಡಿ, ಬಡಿ, ಹಾರರ್, ಥ್ರಿಲ್ಲರ್ ಎಂದು ಹೇಳುತ್ತದೆ. ಇವುಗಳ ಮಧ್ಯೆ ಅಪ್ಪಟ ಕುಟುಂಬಸಮೇತ ಮನಸ್ಸಿಗೆ ಮುದ ನೀಡುವ ಚಿತ್ರ ಇದಾಗಿದೆ. ಇದನ್ನು ಯಾವುದೇ ಕ್ಯಾಟಗರಿಗೆ ಬೇಕಾದರೂ ಸೇರಿಸಬಹುದು. ಯಾವ ಕಾಲಕ್ಕಾದರೂ ಜನರು ಇಂತಹ ಚಿತ್ರವನ್ನು ಇಷ್ಟಪಡುತ್ತಾರೆ. ಗ್ರಾಫಿಕ್ಸ್ ಕಣ್ಣಿಗೆ ತಂಪುಕೊಡುತ್ತದೆಂದು ನಾಯಕ ವಿಜಯರಾಘವೇಂದ್ರ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಕೈ ಜೋಡಿಸಿದ್ದರಿಂದಲೇ ಚಿತ್ರವು ಇಲ್ಲಿಗೆ ಬಂದು ನಿಂತಿದೆ. ಜನತೆಗೆ ಖಂಡಿತ ಸಿಂಧೂರ ಇಷ್ಟವಾಗುತ್ತದೆ. ಈಕೆಯ ಸುತ್ತ ಸಿನಿಮಾ ಸಾಗುತ್ತದೆ. ನಿರ್ಮಾಪಕರ ಶ್ರಮಕ್ಕೆ ಫಲ ಸಿಗುತ್ತದೆ. ಹೊಸಪೆಟೆ ಮೂಲದ ಮಾರುತಿ 6.4 ಎತ್ತರದ ವಿಶ್ವ ದೇಹದಾರ್ಡ್ಯ ಪಟು ಆಂಜನೇಯ ಸ್ವಾಮಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಡಿಗೆರೆ, ಸಕಲೇಶಪುರ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ ಎಂದು ಆರ್.ಅನಂತರಾಜು ಮಾಹಿತಿ ಬಿಚ್ಚಿಟ್ಟರು.
ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್ ಗ್ಯಾಪ್ ನಂತರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್ ಅವರದಾಗಿದೆ.
ಲೇಖನ: ರಾಘವೇಂದ್ರ ಅಡಿಗ ಎಚ್ಚೆನ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















