ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
8 ಭಾಷೆಗಳಲ್ಲಿ ತಯಾರಾಗಿರುವ ಬಹುಭಾಷಾ ಚಲನಚಿತ್ರ `ವಿಲಕ್ಷ’ ಚಾಪ್ಟರ್-1 `Vilaksha’ Chapter-1 ಆ.14ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂಜಯ್ ಕಾಡೂರು ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ವಿಲಕ್ಷ’ ಸಿನಿಮಾವು ಒಂದು ವಿಶೇಷವಾಗಿದ್ದು, ಕಲಾವಿದರ ಸಮಸ್ಯೆ ಮತ್ತು ನಿರ್ಮಾಪಕರಿಗೆ ಆಗುವ ಹೊರೆಯನ್ನು ಉಳಿಸುವ ನಿಟ್ಟಿನಲ್ಲಿ ಎಐ ಮೂಲಕ ಇದೇ ಪ್ರಥಮ ಬಾರಿಗೆ ಚಿತ್ರವನ್ನು ನಿರ್ಮಿಸಲಾಗಿದೆ. ಎಐ ಡೆವಲಪ್‍ಮೆಂಟನ್ನೇ ಮೂಲವಾಗಿಟ್ಟುಕೊಂಡು ಸುಮಾರು 13ಜನರ ನುರಿತ ಯುವಕರ ತಂಡ ಇದನ್ನು ದೃಶ್ಯಮಾಧ್ಯಮ ರೂಪಕ್ಕೆ ತಂದಿದ್ದು, ಇದು ಬಹುಶಃ ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಮೊದಲ ಎನಿಸುತ್ತದೆ. ಎಐ ಆದರೂ ಕೂಡ ನೈಜಚಿತ್ರದಂತೆ ಬಳಸಿಕೊಂಡು ನಿಜರೂಪಕ್ಕೆ ಪಾತ್ರಗಳನ್ನು ತೋರಿಸುವ ವಿನೂತನ ಪ್ರಯತ್ನ ಮಾಡಲಾಗಿದೆ ಎಂದರು.
ತುಳುನಾಡಿನ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರ ಮಂದಾರ್ತಿಯಲ್ಲಿ ಭಕ್ತರೊಬ್ಬರ ಜೀವನದಲ್ಲಿ ನಡೆಯುವ ದೈವಿಕ ಪವಾಡಗಳು, ಜಾನಪದ ಆಚರಣೆ, ತುಳುನಾಡಿನ ಸಂಸ್ಕøತಿ, ಆಚಾರ-ವಿಚಾರಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ವ್ಯಾಪಾರೀಕರಣಕ್ಕಾಗಿ ಈ ಎಲ್ಲಾ ಸಂಸ್ಕøತಿಗಳು ನೈಜ ಸ್ವರೂಪವನ್ನು ಕಳೆದುಕೊಂಡು ಅಪಹಾಸ್ಯಕ್ಕೆ ಗುರಿಯಾಗುತ್ತಿದೆ. ಅದನ್ನು ತಪ್ಪಿಸಲು ನೆಲಮೂಲ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ವಿಲಕ್ಷ ಚಿತ್ರತಂಡ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಚಾಪ್ಟರ್-2 ಕೂಡ ಮಾಡುವ ಉದ್ದೇಶ ನಮಗಿದೆ ಎಂದರು.
ಚಿತ್ರದ ನಾಯಕನಾಗಿ ಬೆಂಗಳೂರಿನ ನಿಖಿಲ್ ಮೈಸೂರಿನ ಯುವಕ ಕಲಾವಿದ ಚಂದುವಿರಾಜ್, ತೀರ್ಥಹಳ್ಳಿಯ ಪ್ರತಾಪ್‍ಶೆಟ್ಟಿ, ಕೇರಳದ ಆದರ್ಶ್ ಸುರೇಶ್, ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಿರಿಯ ಕಲಾವಿದರು ಹಾಗೂ ಹೊಸಮುಖಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ನಿಖಿಲ್, ಸಹನಟ ಪ್ರತಾಪ್ ಶೆಟ್ಟಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















