ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ಪವಾಡ ಎಂಬಂತೆ ನಟ ವಿಜಯ್ #ActorVijay ನೇತೃತ್ವದ ಟಿವಿಕೆ ಪಕ್ಷ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ.
10.35 ರ ವೇಳೆಗೆ ನಟ ವಿಜಯ್ ಅವರ ಟಿವಿಕೆ #TVK ಪಕ್ಷ 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತಾರೂಢ ಡಿಎಂಕೆ ಪಕ್ಷ 46 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇನ್ನು, ಎಡಿಎಂಕೆ ಪಕ್ಷ 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
Also Read>> ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ದಾಖಲೆ | ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ | ಟಿಎಂಸಿಗೆ ಆಘಾತ
ಚುನಾವಣೆ ಹಾಗೂ ಚುನಾವಣೆಯ ನಂತರ ಟಿವಿಕೆ ಮೂಲಕ ನಟ ವಿಜಯ್ ಕೇವಲ ಕೆಲವು ಕ್ಷೇತ್ರಗಳಲ್ಲಿ ಮತ ಒಡೆಯಲು ಸಾಧ್ಯವಷ್ಟೆ. ಬದಲಾಗಿ, ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಇವೆಲ್ಲವನ್ನೂ ಮೀರಿ ಅಚ್ಚರಿ ಎಂಬಂತೆ ಮುನ್ನಡೆಯಲ್ಲಿ 105 ಕ್ಷೇತ್ರಗಳಲ್ಲಿ ವಿಜಯ್ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಇದೇ ರೀತಿ ಮುಂದುವರೆದರೆ ತಮಿಳುನಾಡಿನಲ್ಲಿ ನಟ ವಿಜಯ್ ಸ್ವತಂತ್ರವಾಗಿ ಸರ್ಕಾರ ರಚಿಸುವ ಸಾಧ್ಯತೆಯಿದೆ.
ಡಿಎಂಕೆ, ಸ್ಟಾಲಿನ್’ಗೆ ಆಘಾತ, ಸಂಭ್ರಮಾಚರಣೆ ರದ್ದು
ಇನ್ನು, ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕನಸಿನಲ್ಲಿದ್ದ ಸಿಎಂ ಸ್ಟಾಲಿನ್ ಹಾಗೂ ಡಿಎಂಕೆಗೆ ಟಿವಿಕೆ ಭಾರೀ ಆಘಾತ ನೀಡಿದೆ.
ಈ ಚುನಾವಣೆಯಲ್ಲೂ ಗೆಲುವು ಸಾಧಿಸಿ ಮಗನನ್ನು ಮುಖ್ಯಮಂತ್ರಿ ಮಾಡಲು ಸಿದ್ದತೆ ನಡೆಸಿದ್ದ ಸ್ಟಾಲಿನ್’ಗೆ ಈ ಟ್ರೆಂಡ್ ಭಾರೀ ಹೊಡೆತ ನೀಡಿದೆ.
ಅಲ್ಲದೆ, ಗೆಲುವಿನ ಸಂಭ್ರಮಾಚರಣೆಗೆ ಸಿದ್ದತೆ ಮಾಡಿಕೊಂಡಿದ್ದ ಡಿಎಂಕೆಗೆ ಮುನ್ನಡೆ ಆಘಾತ ನೀಡಿದ್ದು, ಪರಿಣಾಮವಾಗಿ ಸಂಭ್ರಮಾಚರಣೆಯನ್ನು ರದ್ದು ಮಾಡಲಾಗಿದೆ. ಅಲ್ಲದೇ, ಸಂಭ್ರಮಾಚರಣೆಗಾಗಿ ಡಿಎಂಕೆ ಕಚೇರಿ ಮುಂದೆ ಹಾಕಲಾಗಿದ್ದ ಶಾಮಿಯಾನ, ಟೆಂಟ್’ಗಳನ್ನು ಸಹ ತೆರವುಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Comments 1