ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾರು ಚಾಲಕನ ಪುತ್ರನಿಗೆ ಅದೃಷ್ಠ ಖುಲಾಯಿಸಿದ್ದು, ಆತ ಈಗ ವಿರುಗಂಬಕ್ಕಂ ಶಾಸಕರಾಗಿ Virugambakkam MLA ಆಯ್ಕೆಯಾಗಿದ್ದಾರೆ.
ಹೌದು… ನಟ-ರಾಜಕಾರಣಿ ವಿಜಯ್ Vijay ಅವರು ತಮ್ಮ ಕಾರು ಚಾಲಕನ ಪುತ್ರ ಆರ್. ಶಬರಿನಾಥನ್ Shabarinathan ಅವರಿಗೆ ಟಿವಿಕೆ TVK ಟಿಕೆಟ್ ನೀಡಿ, ವಿರುಗಂಬಕ್ಕಂ ಕ್ಷೇತ್ರದಿಂದ ಕಣಕ್ಕೀಳಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ.
ದಳಪತಿ ವಿಜಯ್ ಅವರ ಆಪ್ತ ಸಹಾಯಕನಾಗಿ ನೇಮಕಗೊಳ್ಳುವುದಕ್ಕೆ ಮುನ್ನ ಹಲವು ವರ್ಷಗಳ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿದ್ದ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ವಿರುಗಂಬಕ್ಕಂ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಪ್ರಭಾಕರನ್ ರಾಜ್ ವಿರುದ್ಧ ಶಬರಿನಾಥನ್ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Also read: ಮೈಸೂರು-ಬೆಂಗಳೂರು ಒಡೆಯರ್ ಎಕ್ಸ್’ಪ್ರೆಸ್ ರೈಲಿನ ಕುರಿತು ಮಹತ್ವದ ಅಪ್ಡೇಟ್
ಇನ್ನು, ಶಬರಿನಾಥನ್ ಅವರು ಗೆಲುವು ಸಾಧಿಸುತ್ತಿದ್ದಂತೆ, ತಮಿಳಗ ವೆಟ್ರಿ ಕಳಗಂ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಂಡ ನಂತರ ವೇದಿಕೆಯಲ್ಲೇ ವಿಜಯ್ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಕಣ್ಣೀರಿಟ್ಟಿದ್ದ ಶಬರಿನಾಥನ್ ದಳಪತಿ ವಿಜಯ್ ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಾಗಲೇ ವಿರುಗಂಬಕ್ಕಂ ಕ್ಷೇತ್ರಕ್ಕೆ ಶಬರಿನಾಥನ್ ಹೆಸರು ಘೋಷಿಸಿದ್ದರು.
ಈ ವೇಳೆ ಅಪ್ಪ – ಮಕ್ಕಳಿಬ್ಬರೂ ವೇದಿಕೆಯಲ್ಲೇ ವಿಜಯ್ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ವಿಜಯ್ ಪಾದಗಳನ್ನು ಮುಟ್ಟಿ ಶಬರಿನಾಥನ್ ಭಾವುಕರಾಗಿದ್ದರು.
ಈ ಎಲ್ಲಾ ಕಣ್ಣೀರಿಗೆ ಈಗ ಒಂದು ಅರ್ಥ ದೊರೆತಿದ್ದು, ಕಾರು ಚಾಲಕನ ಮಗ ಇನ್ನೇನು ವಿಧಾನಸಭೆ ಪ್ರವೇಶಿಸುವ ಹಂತದಲ್ಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















