ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್‌ಟಿಓ ಈ-ಚಲನ್ RTO E Challan ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ವಾಟ್ಸಾಪ್‌ನಲ್ಲಿ WhatsApp ಆರ್‌ಟಿಓ ಈ-ಚಲನ್ ಎಂಬ ಹೆಸರಿನ ಲಿಂಕ್ ಬಂದಿತ್ತು. ಅದನ್ನು ನಿಜವಾದ ಚಲನ್ ಇರಬಹುದೆಂದು ನಂಬಿದ ದೂರುದಾರರು, ಈ ಚಲನ್ ಓಪನ್ ಮಾಡಿದ್ದಾರೆ. ಅದನ್ನು ಕ್ಲಿಕ್ ಮಾಡಿದ ತಕ್ಷಣ ಮೊಬೈಲ್‌ನಲ್ಲಿ ಬೇರೊಂದು ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ. ನಂತರ ದೂರುದಾರರು ಅದರಲ್ಲಿ ತಮ್ಮ ಕೆವೈಸಿ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ಆದರೆ, ಆಪ್‌ನಲ್ಲಿ ಯಾವುದೇ ಮಾಹಿತಿ ಕಂಡುಬಾರದ ಕಾರಣ ಅವರು ಅದರಿಂದ ಹೊರಬಂದಿದ್ದಾರೆ.
ಆದರೆ, ವಂಚಕರು ಅಪ್ಲಿಕೇಶನ್ ಮೂಲಕ ದೂರುದಾರರ ಮೊಬೈಲ್‌ನ ಸಂಪೂರ್ಣ ನಿಯಂತ್ರಣ ಪಡೆದುಕೊಂಡಿದ್ದರು. ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಶಾಕ್ ಕಾದಿತ್ತು. ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 4,09,317 ರೂ. ಮತ್ತು ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಯಿಂದ 25,189 ರೂ. ಸೇರಿ ಒಟ್ಟು 4,34,507 ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮೆಸೇಜ್ ಬಂದಿದೆ.
Also read: ಚಿಪ್ಪು ಹಂದಿಯ ಚಿಪ್ಪು ಮಾರಾಟ ಯತ್ನ ಹಿನ್ನೆಲೆ | ಮೂವರ ಬಂಧನ
ಅಪರಿಚಿತ ವ್ಯಕ್ತಿಗಳು ಆರ್‌ಟಿಒ ಹೆಸರಿನಲ್ಲಿ ನಕಲಿ ಈ ಚಲನ್ ಕಳುಹಿಸಿ,ವೈಯಕ್ತಿಕ ಮಾಹಿತಿ ಕದ್ದು ಹಣ ಲೂಟಿ ಮಾಡಿದ್ದಾರೆ ಎಂದು ದೂರುದಾರರು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 













Comments 1