ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಅಕ್ರಮ ಪಡಿತರ ಅಕ್ಕಿ #RationRice ದಂಧೆಕೋರರಿಂದ ಲಕ್ಷಾಂತರ ರೂ. ಹಣ ಲಂಚ ವಸೂಲಿ ಮಾಡಿದ ಆರೋಪದಲ್ಲಿ ಬಳ್ಳಾರಿ ಎಸ್ಪಿ ಅವರ ಗನ್ ಮ್ಯಾನ್ #GunMan ಸೇರಿ ಮೂವರನ್ನು ಬಂಧಿಸಲಾಗಿದೆ.
ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಸೇರಿ ಮೂವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
Also Read>> ಮದುವೆಯಾಗುವುದಾಗಿ ಹೇಳಿ ಒಪ್ಪಿತ ದೈಹಿಕ ಸಂಬಂಧ ಅತ್ಯಾಚಾರವಲ್ಲ | ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅಕ್ರಮ ಅಕ್ಕಿ ದಂಧೆಕೋರ ಶರಭಯ್ಯ ಎಂಬ ವ್ಯಕ್ತಿ ಮೋಕಾ ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ಈ ಕಾರ್ಯಾಚರಣೆ ನಡೆದಿದೆ.
ಏನಿದು ಪ್ರಕರಣ?
ಸರ್ಕಾರದ ಪಡಿತರ ಅಕ್ಕಿ ಸಾಗಿಸುತ್ತಿದ್ದ ಎರಡು ಲಾರಿಗಳು ಆಂಧ್ರಪ್ರದೇಶಕ್ಕೆ ಹೊರಟಿತ್ತು. ಈ ವೇಳೆ ಅಡ್ಡಗಟ್ಟಿದ ಗನ್ ಮ್ಯಾನ್ ದೇವರಾಜ್, ಎಸ್ಪಿ ಸ್ಕ್ವಾಡ್ ಎಂದು ಹೇಳಿ 5 ಲಕ್ಷ ರೂ.ಗೆ ಬೇಡಿ ಇಟ್ಟಿದ್ದ. ಹಣ ನೀಡದಿದ್ದರೆ ಲಾರಿ ಸೀಜ್ ಮಾಡಿ, ಜೈಲಿಗೆ ಕಳಿಸುವುದಾಗಿ ಜೀವ ಬೆದರಿಕೆ ಹಾಕಿದ್ದನು. ಕೊನೆಗೆ ಮೂರು ಲಕ್ಷ ರೂ.ಗೆ ಡೀಲ್ ಮಾಡಿ, ವಸೂಲಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಅಕ್ಕಿ ದಂಧೆಯ ಬಗ್ಗೆ ಜಿಲ್ಲೆಯ ಪೋಲಿಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಕೇಸುಗಳು ದಾಖಲಾಗಿವೆ.
ಇಂತಹ ಸಂದರ್ಭದಲ್ಲಿ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಎಸ್ಪಿ ಗನ್ ಮ್ಯಾನ್ ದೇವರಾಜ್ ದಂಧೆಕೋರರಿಂದ ಹಣ ವಸೂಲಿಗೆ ಇಳಿದಿದ್ದನು ಎಂದು ಆರೋಪಿಸಲಾಗಿದೆ. ಅಲ್ಲದೇ, ವಸೂಲಿ ಮಾಡಿರುವುದು ಖಚಿತವಾದ ಕೂಡಲೇ ಗನ್ ಮ್ಯಾನ್ ಬಂಧಿಸಲು ಎಸ್ಪಿ ಸೂಚನೆ ನೀಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















