ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಪ್ರಸ್ತುತ ಸಂಚರಿಸುತ್ತಿದ್ದ (TOD) ಮೂರು ಜೋಡಿ ಡೆಮು ವಿಶೇಷ ರೈಲುಗಳನ್ನು ಕಾಯಂಗೊಳಿಸುವುದಾಗಿ ನೈಋತ್ಯ ರೈಲ್ವೆ South Western Railway ಘೋಷಿಸಿದೆ. ಈ ಸೇವೆಗಳು ಮೇ 2026 ರಿಂದ ನಿಯಮಿತ ಡೆಮು ರೈಲುಗಳಾಗಿ ಸಂಚರಿಸಲಿದ್ದು, ಬಳ್ಳಾರಿ-ಹೊಸಪೇಟೆ-ಹುಬ್ಬಳ್ಳಿ ಮತ್ತು ಬಳ್ಳಾರಿ-ದಾವಣಗೆರೆ ಭಾಗಗಳಲ್ಲಿ ಪ್ರಯಾಣಿಸುವ ದೈನಂದಿನ ಪ್ರಯಾಣಿಕರಿಗೆ ಸುಧಾರಿತ ಸಂಪರ್ಕ ಮತ್ತು ಹೆಚ್ಚಿನ ಪ್ರಯಾಣದ ಅನುಕೂಲವನ್ನು ಒದಗಿಸಲಿವೆ.
ರೈಲು ಸಂಖ್ಯೆ 07393/07394 ಹೊಸಪೇಟೆ-ಎಸ್‌ಎಸ್‌ಎಸ್ ಹುಬ್ಬಳ್ಳಿ-ಹೊಸಪೇಟೆ ಡೆಮು ವಿಶೇಷ ರೈಲನ್ನು, ರೈಲು ಸಂಖ್ಯೆ 76507/76508 ಹೊಸಪೇಟೆ-ಎಸ್‌ಎಸ್‌ಎಸ್ ಹುಬ್ಬಳ್ಳಿ-ಹೊಸಪೇಟೆ ಡೆಮು ಸೇವೆಯಾಗಿ ಕಾಯಂಗೊಳಿಸಲಾಗುವುದು.
ಅದರಂತೆ, ರೈಲು ಸಂಖ್ಯೆ 76508 ಹೊಸಪೇಟೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೆಮು ರೈಲು 10.05.2026 ರಿಂದ ಜಾರಿಗೆ ಬರುವಂತೆ ಪ್ರತಿ ಭಾನುವಾರ ನಿಯಮಿತವಾಗಿ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 76507 ಎಸ್‌ಎಸ್‌ಎಸ್ ಹುಬ್ಬಳ್ಳಿ-ಹೊಸಪೇಟೆ ಡೆಮು ರೈಲು 16.05.2026 ರಿಂದ ಜಾರಿಗೆ ಬರುವಂತೆ ಪ್ರತಿ ಶನಿವಾರ ಸಂಚರಿಸಲಿದೆ.
ರೈಲು ಸಂಖ್ಯೆ 07395/07396 ಬಳ್ಳಾರಿ-ದಾವಣಗೆರೆ-ಬಳ್ಳಾರಿ ಡೆಮು ವಿಶೇಷ ರೈಲನ್ನು, ರೈಲು ಸಂಖ್ಯೆ 76509/76510 ಬಳ್ಳಾರಿ-ದಾವಣಗೆರೆ-ಬಳ್ಳಾರಿ ಡೆಮು ಸೇವೆಯಾಗಿ ಕಾಯಂಗೊಳಿಸಲಾಗುವುದು.
ಅದರಂತೆ, ರೈಲು ಸಂಖ್ಯೆ 76509/76510 ಬಳ್ಳಾರಿ-ದಾವಣಗೆರೆ-ಬಳ್ಳಾರಿ ಡೆಮು ಸೇವೆಗಳು 11.05.2026 ರಿಂದ ಜಾರಿಗೆ ಬರುವಂತೆ ಕಾಯಂಗೊಳ್ಳಲಿವೆ ಮತ್ತು ಸೋಮವಾರದಿಂದ ಶನಿವಾರದವರೆಗೆ ಸಂಚರಿಸಲಿವೆ.
ರೈಲು ಸಂಖ್ಯೆ 07397/07398 ಹೊಸಪೇಟೆ-ಬಳ್ಳಾರಿ-ಹೊಸಪೇಟೆ ಡೆಮು ವಿಶೇಷ ರೈಲನ್ನು, ರೈಲು ಸಂಖ್ಯೆ 76511/76512 ಹೊಸಪೇಟೆ-ಬಳ್ಳಾರಿ-ಹೊಸಪೇಟೆ ಡೆಮು ಸೇವೆಯಾಗಿ ಕಾಯಂಗೊಳಿಸಲಾಗುವುದು.
ಅದರಂತೆ, ರೈಲು ಸಂಖ್ಯೆ 76511/76512 ಹೊಸಪೇಟೆ-ಬಳ್ಳಾರಿ-ಹೊಸಪೇಟೆ ಡೆಮು ಸೇವೆಗಳು ಸಹ 11.05.2026 ರಿಂದ ಜಾರಿಗೆ ಬರುವಂತೆ ಕಾಯಂಗೊಳ್ಳಲಿವೆ ಮತ್ತು ಸೋಮವಾರದಿಂದ ಶನಿವಾರದವರೆಗೆ ಸಂಚರಿಸಲಿವೆ.
ಈ ಹಿಂದೆ ಡೆಮು ವಿಶೇಷ ರೈಲುಗಳಿಗಾಗಿ ನಿಗದಿಪಡಿಸಲಾಗಿದ್ದ ವೇಳಾಪಟ್ಟಿ ಮತ್ತು ನಿಲುಗಡೆಗಳೇ ಕಾಯಂ ರೈಲುಗಳಿಗೂ ಅನ್ವಯವಾಗಲಿವೆ. ಈ ಎಲ್ಲಾ ರೈಲುಗಳು 8 ಬೋಗಿಗಳ ಡೆಮು ರೇಕ್ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸಲಿವೆ. ರೈಲ್ವೆಯ ಈ ಕ್ರಮದಿಂದಾಗಿ ಉತ್ತರ ಕರ್ನಾಟಕದ ಪ್ರಾದೇಶಿಕ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















