ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನಡೆಸಿದ 10 ನೇ ತರಗತಿಯ ಪರೀಕ್ಷೆಯಲ್ಲಿ SSLC Exam ಕನ್ನಡ ಹಾಗೂ ಗಣಿತದಲ್ಲಿ 100ಕ್ಕೆ 100 ಅಂಕ ಗಳಿಸುವುದರೊಂದಿಗೆ ಒಟ್ಟು 605 ಅಂಕ ಗಳಿಸಿದ ವಿಕಾಸ ಪ್ರೌಢ ಶಾಲೆಯ ವಿದ್ಯಾರ್ಥಿ ಸಿದ್ಧಾರ್ಥ ಎ. ಕಶ್ಯಪನನ್ನು ಶ್ರೀಗಂಧ ಹಾಗೂ ಪೇಸ್ ಸಂಸ್ಥೆಯ ಅಧ್ಯಕ್ಷರೂ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ K S Eshwarappa ಅಭಿನಂದಿಸಿದರು.
ಸಿದ್ಧಾರ್ಥ ಎ. ಕಶ್ಯಪ ಪೇಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಹಾಗೂ ರಾಯಲ್ ಕಾಫಿಯ ಆದಿತ್ಯಪ್ರಸಾದ್ ಅವರ ಮಗ. ಈ ಸಂದರ್ಭದಲ್ಲಿ ಉಮೇಶ್ ಆರಾಧ್ಯ, ಹರೀಶ್ ಕಾರ್ಣಿಕ್ ಹಾಗೂ ಸುಬ್ರಹ್ಮಣ್ಯ, ಕುಬೇರಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















