ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಸವಳಂಗ ರಸ್ತೆಯಲ್ಲಿ ಬರುವ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ನಿನ್ನೆ ರಾತ್ರಿ ಸುಮಾರು 9-30 ಕ್ಕೆ ಶಿವಮೊಗ್ಗದಿಂದ ಹಳೇ ಜೋಗದಲ್ಲಿರುವ ಮನೆಗೆ ಬೈಕ್ ಸವಾರ ತೆರಳುವಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಸಾವು ಕಂಡ ಯುವಕನನ್ನ ಶಿವಕುಮಾರ್ (32) ಎಂದು ಗುರುತಿಸಲಾಗಿದೆ. ಮೃತನು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೇ ಜೋಗದ ನಿವಾಸಿಯಾಗಿದ್ದಾನೆ.
Also Read>> ಆಂಧ್ರ ಸಿಎಂ ನಾಯ್ಡು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಪ್ರಧಾನಿ ಮೋದಿ ಭೇಟಿ | ಕಾರಣವೇನು?
ಹೊನ್ನಾಳಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವಕುಮಾರ್ ಅವರ ಬೈಕು ಕೊಮ್ಮನಾಳು ತಿರುವಿನ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!




















