ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿAದ ಮೇ 14 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶಿವಕುಮಾರ್ ಬಡಾವಣೆ, ಭೂ ಮತ್ತು ಗಣಿ ವಿಜ್ಞಾನ ಕಚೇರಿ ಹತ್ತಿರದ ಬಡಾವಣೆಗಳು, ಜೆಎನ್’ಸಿಸಿ ಇಂಜಿನಿಯರಿಂಗ್ ಕಾಲೇಜು, ಅಕ್ಷರನಗರ, ಕೃಷಿ ಕಾಲೇಜು, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚೆನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಕೆಳಗಿನ ತಾಂಡ, ಮೇಲಿನ ತಾಂಡ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೈಸ್, ಕೊಮ್ಮನಾಳು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಸೇರಿದಂತೆ ಈ ಭಾಗದ ಸುತ್ತಮುತ್ತಲಿನ ಜಲ್ಲಿ ಕ್ರಷರ್’ಗಳು ಮತ್ತು ಪೆಟ್ರೋಲ್ ಬಂಕ್’ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಮೇ 14ರಂದು ಬೆಳಗ್ಗೆ 10ರಿಂದ 2ರವರೆಗೆ
ಇನ್ನು, ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಮೇ.14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Also read: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ | ಭಕ್ತರಿಗೆ ಅನುಕೂಲ
ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ಶನಿ ಮಹಾತ್ಮ ದೇವಸ್ಥಾನ ಅಡ್ಡರಸ್ತೆ, ವಿದ್ಯುತ್ ಪರೀವೀಕ್ಷಕರ ಕಚೇರಿ ರಸ್ತೆ, ವಾತ್ಸಲ್ಯ ಆಸ್ಪತ್ರೆ, ಮಲ್ಲಿಕಾರ್ಜುನ ಚಿತ್ರಮಂದಿರ ಅಡ್ಡರಸ್ತೆ, ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















