ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಶಿಕ್ಷಣ ವರ್ಗ ಎಂದರೆ ಹಿರಿಯ ಅನಿಸಿಕೆ ಅಭಿಪ್ರಾಯ, ವಿಚಾರ ತಿಳಿಸುವ ವೇದಿಕೆಯಾಗಿದೆ ವಿಶ್ವದ ಅತಿಡೊಡ್ಡ ಪಕ್ಷವಾಗಿದೆ ಬಿಜೆಪಿ. ಪಂಡಿತ್ ದೀನದಯಾಳ್ ರವರ ಕನಸಿನ ಅಂತ್ಯೋದಯ ಸಿದ್ದಾಂತವನ್ನು ಜಾರಿಗೆ ತರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ B Y Vijayendra ಹೇಳಿದರು.
ರಾಯಲ್ ಏಷಿಯ ರೇಸಾರ್ಟ್ ನಲ್ಲಿ ಬಿಜೆಪಿ ದಕ್ಷಿಣ ಜಲ್ಲೆ ಪಂಡಿತ್ ದೀನದಯಾಳ್ ಉಪಾಧ್ಯಯ Pandith Deendayal Upadhyaya ಪ್ರಶಿಕ್ಷಣ ಮಹಾಭಿಯಾನ-2026ರ ಉದ್ಘಾಟನೆಯನ್ನು ದೀಪ ಬೆಳಗಿಸಿ, ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ರವರ ಆದೇಶ ಮೇರೆಗೆ ಜಿಲ್ಲಾ ಹಾಗೂ ಮಂಡಲ ವ್ಯಾಪ್ತಿಯಲ್ಲಿ ಪ್ರಶಿಕ್ಷಣ ವರ್ಗ ನಡೆಯಬೇಕು ಎಂದು ತಿಳಿಸಿದ್ದರು ಅದರಂತೆ ಯಶ್ವಸಿಯಾಗಿ ನಡೆದಿದೆ ಎಂದರು.
ಕೊರೋನ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜನರ ಸೇವೆ ಮಾಡಿದರು. ರಾಜಕೀಯ ಕ್ಷೇತ್ರದ ಜೊತೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ದೇಶ ಮೊದಲು ಎಂದ ಸಿದ್ದಾಂತ ವ್ಯಕ್ತಿ, ಪಕ್ಷಕ್ಕಿಂತ ದೇಶ ಡೊಡ್ಡದು ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು ಎಂದು ಈ ನಿಟ್ಟಿನಲ್ಲಿ ಹೋರಾಟ ಮುಂದುವರೆದಿದೆ.
ಶಾಮಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ, ಅಟಲ್ ಜೀ, ಮುರುಳಿ ಮನೋಹರ್ ಜೋಷಿ, ಅಡ್ವಾಣಿ, ಪ್ರಧಾನಿ ನರೇಂದ್ರಮೋದಿ ರವರ ಅಪಾರ ಶ್ರಮ ಕೊಡುಗೆ ಇದೆ. 22ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಅತಿ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರು ಇದ್ದಾರೆ. ಇದೆಲ್ಲ ಕಾರಣ ಕೊಟ್ಯಂತರ ಕಾರ್ಯಕರ್ತರ ಶ್ರಮವಿದೆ. ತನು,ಮನ, ಧನ ಧಾರೆ ಎರೆದಿದ್ದಾರೆ ಎಂದರು.
ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವರಾದ ಅಮಿತ್ ಷಾ, ಅಧ್ಯಕ್ಷರಾದ ನೀತಿನ್ ನಬಿನ್ ರವರ ದಿಟ್ಟ ನಾಯಕರು ನಮ್ಮ ಜೊತೆಯಲ್ಲಿ ಇದ್ದಾರೆ. 1980ರಲ್ಲಿ ಬಿಜೆಪಿ ಪಕ್ಷ ಅಧಿಕಾರ ಬರುತ್ತದೆ ಎಂಬ ಕನಸು ಇರಲ್ಲಿಲ, ಕಾರ್ಯಕರ್ತರಿಗೆ ದೇಶ ಮೊದಲು ಎಂಬ ಕಿಚ್ಚು ಇತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವಿಫಲವಾಗಿದೆ. ರಾತೋರಾತ್ರಿ ಬಿಜೆಪಿ ಕಾರ್ಯಕರ್ತರನ್ನ ಬಂಧಿಸುತ್ತಿದ್ದಾರೆ. ಯಲ್ಲಪುರದಲ್ಲಿ ದಲಿತ ಮಹಿಳೆ ಹತ್ಯೆ ಅದರೆ ಕಾಂಗ್ರೆಸ್ ಪಕ್ಷದವರು ಒಬ್ಬರು ಹೋಗಲ್ಲಿಲ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಮದ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಬರಬೇಕು. ಎಲ್ಲರು ಒಂದೇ ಎಂದು ಸಾಗಬೇಕು ಜನರು, ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.
ಬಿಜೆಪಿ ಪಕ್ಷದ ಸಾಧನೆಗಳು ಕುರಿತು ಛಾಯಚಿತ್ರ ಪ್ರದರ್ಶನ ಹಾಗೂ ದಕ್ಷಿಣ ಜಿಲ್ಲಾ ಪ್ರತಿನಿಧಿಗಳು ಮತ್ತು ಶಾಸಕರುಗಳು ಹಾಗೂ ಹಿರಿಯ ರಾಜಕೀಯ ನಾಯಕರುಗಳಿಂದ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಡಾ.ಸಿ.ಎನ್.ಮಂಜುನಾಥ್, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಎಂ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ತಾರಆನುರಾಧ, ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕರಾದ ಸಿ.ಕೆ.ರಾಮಮೂರ್ತಿ, ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















