ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹೋದ್ಯೋಗಿಯೊಬ್ಬರಿಗೆ ಗೂಗಲ್ ಪೇ Google Pay ಮೂಲಕ ಹಣ ವರ್ಗಾವಣೆ ಮಾಡಿದ ಬೆನ್ನಲ್ಲೇ, ಮಹಿಳಾ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ 98 ಸಾವಿರ ನಗದು ಆನ್‌ಲೈನ ಮೂಲಕ ನಾಪತ್ತೆಯಾಗಿದೆ.
ಈ ಸಂಬಂಧ ಶಿವಮೊಗ್ಗದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also read: ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ
ಸರ್ಕಾರಿ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿರುವ ಮಹಿಳೆ, ತಮ್ಮ ಸಹೋದ್ಯೋಗಿಗೆ ಗೂಗಲ್ ಪೇ ಆಪ್ ಮೂಲಕ 1,500 ಸಾವಿರ ಹಣ ಕಳುಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಅವರಿಗೆ ತಿಳಿಯದೆ ಮೊಬೈಲ್‌ಗೆ ಯಾವುದೋ ಆಪ್ ಇನ್‌ಸ್ಟಾಲ ಆಗಿದೆ. ಕೆಲವೇ ಹೊತ್ತಿಗೆ ಮೊಬೈಲ್ ಅನ್ನು ಹ್ಯಾಕ್ Mobile Hack ಮಾಡಲಾಗಿದೆ. ಹ್ಯಾಕ್ ಮಾಡಿದ ಆಪ್ ಮೂಲಕ ದೂರುದಾರರ ಬ್ಯಾಂಕ್ ಖಾತೆಯಿಂದ ಸಂಜಯ್ ಬನ್ನಿವಾಲ್ ಎಂಬುವವರ ಖಾತೆಗೆ ಒಟ್ಟು 98,000 ಹಣ ಆನ್‌ಲೈನ್ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ಹಣ ಕಡಿತವಾಗಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕೀಡಾದ ಮಹಿಳಾ ಅಧಿಕಾರಿ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















