ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ಪಾಲಿಗೆ ನೈಋತ್ಯ ರೈಲ್ವೆ South Western Railway ವಲಯವು ಸಂತಸದ ಸುದ್ದಿಯೊಂದನ್ನು ನೀಡಿದೆ. ಈ ಪ್ರಾಂತ್ಯದ ಬೀರೂರು – ತಾಳಗುಪ್ಪ ರೈಲ್ವೆ Birur – Talaguppa Train ಮಾರ್ಗದಲ್ಲಿ ರೈಲುಗಳ ಗರಿಷ್ಠ ಸಂಚಾರಿ ವೇಗವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಇನ್ಮುಂದೆ ಈ ಭಾಗದ ಸಾರ್ವಜನಿಕರ ಪ್ರಯಾಣದ ಸಮಯ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ.
Also read: ಐಎಎಸ್ ಅಧಿಕಾರಿಗಳ ಮಕ್ಕಳಿಗೆ ಏಕೆ ಮೀಸಲು ಕೊಡಬೇಕು: ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ
ರೈಲ್ವೆ ಇಲಾಖೆಯ Railway Department ತಾಂತ್ರಿಕ ಮೇಲ್ದರ್ಜೀಕರಣ ಕಾಮಗಾರಿಗಳ ಬಳಿಕ ಹಳಿಗಳ ಸಾಮರ್ಥ್ಯಕ್ಕೆ ತಕ್ಕಂತೆ ವೇಗದ ಮಿತಿಯನ್ನು ಪರಿಷ್ಕರಿಸಲಾಗಿದ್ದು, ಬೀರೂರು ನಿಂದ ಕುಂಸಿ ವರೆಗಿನ ಮಾರ್ಗದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ ಇದ್ದ 90 ಕಿ.ಮೀ ನಿಂದ ನೇರವಾಗಿ 110 ಕಿ.ಮೀ ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಆನಂದಪುರಂ ನಿಂದ ಸಾಗರ ಜಂಬಗಾರು ನಿಲ್ದಾಣಗಳ ಮಧ್ಯೆ ಗರಿಷ್ಠ ವೇಗವನ್ನು ಗಂಟೆಗೆ 70 ಕಿ.ಮೀ ನಿಂದ 75 ಕಿ.ಮೀ ಗೆ ಏರಿಕೆ ಮಾಡಲಾಗಿದ್ದರೆ, ಸಾಗರ ಜಂಬಗಾರು ನಿಂದ ತಾಳಗುಪ್ಪ ಸೆಕ್ಷನ್‌ನಲ್ಲಿಯೂ ಗರಿಷ್ಠ ವೇಗವನ್ನು ಗಂಟೆಗೆ 90 ಕಿ.ಮೀ ನಿಂದ ಭರ್ಜರಿ 110 ಕಿ.ಮೀ ಗೆ ಹೆಚ್ಚಳ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















