ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
NEP 2020ರಲ್ಲಿ ಕಲ್ಪಿಸಿರುವಂತೆ ನಿರಂತರ ವೃತ್ತಿಪರ ಬೆಳವಣಿಗೆ ಮತ್ತು ಪರಿಣಾಮಕಾರಿ ಬೋಧನಾ ಪದ್ಧತಿಗಳ ಕಡೆಗೆ ಶಿಕ್ಷಕರನ್ನು ಪ್ರೇರೇಪಿಸುವ “ಬೋಧನೆಯಲ್ಲಿ ಶಿಕ್ಷಕರ ಆತ್ಮಾವಲೋಕನ” ಕುರಿತು ಒಂದು ದಿನದ ಕಾರ್ಯಗಾರವನ್ನು ಕೆಆರ್‌ಸಿಎಸ್ ಶಿಕಾರಿಪುರದಲ್ಲಿ ದಿನಾಂಕ 22.05.2026 ರಂದು ಹಮ್ಮಿಕೊಳ್ಳಲಾಗಿತ್ತು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಶಿವಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಪಾಠ ವಿಶ್ಲೇಷಣೆ, ಪ್ರತಿಬಿಂಬದ ದಿನಚರಿ ಮತ್ತು NEP 2020ರ ‘ಪ್ರತಿಬಿಂಬಿಸುವ ಶಿಕ್ಷಕ’ ಪರಿಕಲ್ಪನೆಯ ಕುರಿತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
“ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ” ಎಂಬ ಸಂದೇಶದೊಂದಿಗೆ ಕಾರ್ಯಗಾರ ಯಶಸ್ವಿಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















