No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Wednesday, May 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಮೈಸೂರು | ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದಲ್ಲಿ ಧರ್ಮ ಸಭೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 27, 2026
in ಮೈಸೂರು
0
ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಮೈಸೂರು |

ಜ್ಞಾನಿಗಳು, ಪಂಡಿತರು, ವಿದ್ವಾಂಸರು, ಯತಿಗಳು ಮತ್ತು ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು ಎಂದು ಎಂದು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ Shri Sathyathma Theertha Swamiji ಹೇಳಿದರು.

ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ಉತ್ತರಾದಿ ಮಠವು ಅಗ್ರಹಾರದ ಕಾಶಿ ವಿಶ್ವೇಶ್ವರ ಸನ್ನಿಧಿ ಆವರಣದ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಅವರು ಭಾಗವತ ಸಂದೇಶ ನೀಡಿದರು.
ಎಲ್ಲ ಸೌಕರ್ಯಗಳು ಮತ್ತು ಸೌಲಭ್ಯಗಳೂ ಸುಲಭವಾಗಿ ದೊರೆಯುವ ಇಂದಿನ ದಿನಮಾನಗಳಲ್ಲಿ ಯಾರ ಮಾತನ್ನು ಏಕೆ ಕೇಳಬೇಕು ಎಂಬ ಅಹಂಭಾವ ಹೆಚ್ಚಾಗಿದೆ. ಬಹು ಮುಖ್ಯವಾಗಿ ಯುವಜನರಿಗೆ ಈ ಭಾವ ಹೆಚ್ಚಾಗಿ ಕಾಡುತ್ತಿರುವುದು ವಿಷಾದ ಎಂದರು.

ದೊಡ್ಡವರಿಗೆ ಜೀವನದ ಅನುಭವ ಹೆಚ್ಚು ಇರುತ್ತದೆ. ಕಿರಿಯರು ಹಾಳಾಗಬಾರದು ಎಂಬ ಕಳಕಳಿಯಿಂದ ಅವರು ಬೈದು ಬುದ್ಧಿವಾದ ಹೇಳುತ್ತಾರೆ. ಧರ್ಮ ಮಾರ್ಗದಲ್ಲಿ ನಡೆದರೆ ಕಷ್ಟಗಳು ಕಡಿಮೆ ಎಂಬುದು ಅವರ ಸ್ವ ಅನುಭವ. ಆದರೆ ಸಾವಧಾನದಿಂದ ಕೇಳುವವರೇ ಈಗ ಕಡಿಮೆ ಆಗುತ್ತಿದ್ದಾರೆ. ಇದು ಶೋಚನೀಯ ಎಂದು ಸ್ವಾಮೀಜಿ ಹೇಳಿದರು.

Also read: ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

ಉತ್ತಮ ಪ್ರಜೆಗಳನ್ನಾಗಿ ಮಾಡಿ:

ಬಾಲ್ಯದಿಂದಲೇ ಸಂಸ್ಕೃತಿ, ಸಂಪ್ರದಾಯಗಳನ್ನು ಮನೆಯಿಂದ ಕಲಿಯಬೇಕು. ಸಮಾಧಾನ, ನೆಮ್ಮದಿಗಳನ್ನು ರೂಢಿಸಿಕೊಳ್ಳಬೇಕು. ಹಿರಿಯರ, ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಬೇಕು. ನ್ಯಾಯ, ನೆಮ್ಮದಿ ಮತ್ತು ಸಮಾಧಾನ ತಂದುಕೊಡುವ ಸಂಗಾತಿಯನ್ನು ವಿವಾಹ ಮಾಡಿಕೊಳ್ಳಬೇಕು. ಉತ್ತಮ ಸಂತಾನ ಪಡೆದು ಅವರನ್ನು ದೇಶದ ಉನ್ನತ ಪ್ರಜೆಗಳನ್ನಾಗಿ ಮಾಡಬೇಕು. ಇವುಗಳ ಜತೆ ಜತೆಗೇ ಇಂದ್ರಿಯ ನಿಗ್ರಹ ಸಾಧನೆ ಮಾಡಬೇಕು. ಇದೆಲ್ಲವನ್ನೂ ಭಾಗವತ ಅಂದೇ ಹೇಳಿದೆ. ಅನೇಕ ಋಷಿ ಮುನಿಗಳೂ ಇದನ್ನು ಮಾಡಿ, ಮಾಡಿಸಿದ್ದಾರೆ ಎಂದು ಸತ್ಯಾತ್ಮ ತೀರ್ಥರು ಶ್ಲೋಕಗಳ ಮೂಲಕ ಉಲ್ಲೇಖ ಮಾಡಿದರು. ಅಕ್ರಮ, ಅಪಕ್ವ ಮತ್ತು ಸ್ವೇಚ್ಛೆಯ ಮದದಿಂದ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಜೀವನ ಪೂರ್ಣ ನೋವಿನಿಂದಲೇ ಕಳೆಯಬೇಕಾಗುತ್ತದೆ. ಯುವಜನರು ಇದನ್ನು ಚನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಜೀವನದ ಪ್ರತಿಯೊಂದು ನಿರ್ಧಾರದ ಸಮಯದಲ್ಲೂ ತಜ್ಞರ ಮಾತು, ಸಲಹೆ ಕೇಳಬೇಕು ಎಂದರು.
ನಿತ್ಯ ಕರ್ಮಗಳನ್ನು ಬಿಡಬೇಡಿ:

ಮನೆ ಮತ್ತು ಮನೆತನದ ಪದ್ಧತಿಗಳನ್ನು ತಪ್ಪದೇ ಪಾಲಿಸಬೇಕು. ನಿತ್ಯವೂ ಬೆಳಗಿನ ಕರ್ಮಗಳನ್ನು ಶ್ರದ್ಧೆಯಿಂದ ಮಾಡಬೇಕು. ಇದು ನಮ್ಮ ಸಾವಿರಾರು ವರ್ಷದ ಋಷಿ ಪರಂಪರೆಯಾಗಿದೆ. ಆದರೆ ಇಂದು ಬಹುತೇಕ ಯುವಜನರು ಹಾದಿ ತಪ್ಪಿದ ಕಾರಣ ನಾವು ಭಾರತದಲ್ಲೇ ಇದ್ದೇವಾ ಎನಿಸುವಷ್ಟು ಮಟ್ಟಿಗೆ ವಾತಾವರಣ ಕಲುಷಿತವಾಗಿದೆ. ಯುಗ ಯುಗದಲ್ಲಿ ನಮಗೆ ಮಹಾತ್ಮರ ದರ್ಶನವಾಗಿದೆ. ಅವರ ಸಂಸ್ಕೃತಿ, ಧರ್ಮ ಮತ್ತು ತ್ಯಾಗಗಳು ಎಲ್ಲಿಗೆ ಹೋಗಿವೆ ? ಯುವಜನರು ಏಕೆ ಯಾರ‌್ಯಾರನ್ನೋ ಅನುಕರಣೆ ಮಾಡುತ್ತಾರೆ ? ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು ಹೇಗೆಲ್ಲಾ ಪರಿಣಾಮ ಬೀರಿವೆ ಎಂಬ ಬಗ್ಗೆ ಚಿಂತನ- ಮಂಥನ ನಡೆಯಬೇಕಿದೆ ಎಂದು ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ಎಚ್ಚರಿಕೆ ಇರಲಿ: ಭಾಗವತದಲ್ಲಿ ಬರುವ ಕಪಿಲ ನಾಮಕ ಪರಮಾತ್ಮನ ಕಥೆ ಉಲ್ಲೇಖಿಸಿದ ಅವರು, ಈತ ಕರ್ಮಗಳಿಗೆ ಪ್ರೇರಕ. ಪುಣ್ಯದ ಫಲ ನೀಡುವಾತ. ಉಪನಿಷತ್ತು ಮತ್ತು ಆಚಾರ್ಯ ಮಧ್ವರ ಗೀತಾಭಾಷ್ಯದಲ್ಲೂ ಇದನ್ನು ಉಲ್ಲೇಖ ಮಾಡಿದ್ದಾರೆ. ಧರ್ಮ ಮತ್ತು ಸಂಸ್ಕೃತಿಯನ್ನು ಬಿಟ್ಟರೆ ದೇಶ ಸರ್ವನಾಶವಾಗಲಿದೆ. ಈ ಎಚ್ಚರ ಎಲ್ಲರಿಗೂ ಇರಬೇಕು ಎಂದು ಸ್ವಾಮೀಜಿ ಅವರು ಕಿವಿಮಾತು ಹೇಳಿದರು.

ಹೈದರಾಬಾದಿನ ಹಿರಿಯ ವಿದ್ವಾಂಸ ಜಯತೀರ್ಥಾಚಾರ್ಯ ಪಗಡಾಲ ಮತ್ತು ವಿಜಯ ವಿಠಲಾಚಾರ್ಯ ಕಾಡಲೂರು ಅವರಿಂದ ಪ್ರವಚನ ನೆರವೇರಿತು.

ಆರೋಗ್ಯ ತಪಾಸಣೆ ಬೃಹತ್ ಶಿಬಿರ

ಹೈದರಾಬಾದಿನ ಖ್ಯಾತ ತಜ್ಞ ಡಾ . ಪ್ರಸಾದ್ ನೇತೃತ್ವದ 20ಕ್ಕೂ ಹೆಚ್ಚು ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಬೃಹತ್ ಶಿಬಿರ ನೆರವೇರಿತು. ಸಂಜೆ ಖ್ಯಾತ ಗಾಯಕ ರಾಹುಲ್ ವೆಲ್ಲಾಳ್ ಅವರಿಂದ ದಾಸರ ಪದಗಳ ಗಾಯನ ಕಚೇರಿ ರಂಜಿಸಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News OnlineKannada News WebsiteKannada WebsiteLatest News KannadamysoreNews in KannadaNews KannadaShri Sathyathma Theertha Swamijiಮೈಸೂರುಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
Share197Tweet123Send
Previous Post

ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

Next Post

ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ನ್ಯಾಯಪೀಠದ ಸ್ಪಷ್ಟನೆಯೇನು?

May 27, 2026
ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

May 27, 2026
ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

ಯೋಗಾಸನ ವಿಶ್ವ ಚಾಂಪಿಯನ್‌ಶಿಪ್ ಗೆ ಚಾಲನೆ: 60ಕ್ಕೂ ಹೆಚ್ಚು ದೇಶಗಳು ಭಾಗಿ!

May 27, 2026
ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಮನೆಯ ಹಿರಿಯರು ಹೇಳಿದ ಮಾತನ್ನು ಕೇಳಬೇಕು: ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

May 27, 2026
ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

May 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL