ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಿಲ್ದಾಣಗಳ ನಡುವಿನ ಎಂಜಿನಿಯರಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಇನ್ನೂ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ Railway Department ಪ್ರಕಟಿಸಿದೆ.
ರೈಲುಗಳ ಸಂಪೂರ್ಣ ರದ್ದತಿ:
ಜೂನ್ 8, 2026ರಂದು ಸಂಚರಿಸಬೇಕಿದ್ದ ರೈಲು ಸಂಖ್ಯೆ 20623 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ರೈಲು ಸಂಖ್ಯೆ 20624 ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಎಕ್ಸ್‌ಪ್ರೆಸ್, ಸೇವೆಗಳು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರೈಲುಗಳ ಭಾಗಶಃ ರದ್ದತಿ:
ಜೂನ್ 7 ಮತ್ತು 8ರಂದು ಕೆಲವು ಮೆಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
Also read: ವಿನೋಬನಗರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು | ಆರೋಪಿ ಬಂಧನ, ಬಂಗಾರದ ಆಭರಣ ವಶ
ಜೂನ್ 7ರಂದು:
ರೈಲು ಸಂಖ್ಯೆ 66533 ಮಾರಿಕುಪ್ಪಂ – ಕೃಷ್ಣರಾಜಪುರಂ ಮೆಮು ವೈಟ್ಫೀಲ್ಡ್ ಮತ್ತು ಕೃಷ್ಣರಾಜಪುರಂ ನಡುವೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 66534 ಕೃಷ್ಣರಾಜಪುರಂ – ಕುಪ್ಪಂ ಮೆಮು ಕೃಷ್ಣರಾಜಪುರಂ ಬದಲು ವೈಟ್ಫೀಲ್ಡ್‌ನಿಂದ ಹೊರಡಲಿದೆ.
ರೈಲು ಸಂಖ್ಯೆ 66560 ಅನಂತಪುರ – ಕೆಎಸ್‌ಆರ್ ಬೆಂಗಳೂರು ಮೆಮು ಚನ್ನಸಂದ್ರ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 66520 ಕೆಎಸ್‌ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು ವೈಟ್ಫೀಲ್ಡ್‌ನಿಂದ ಹೊರಡಲಿದೆ.
ಜೂನ್ 8ರಂದು:
ರೈಲು ಸಂಖ್ಯೆ 66519 ಮಾರಿಕುಪ್ಪಂ – ಕೆಎಸ್‌ಆರ್ ಬೆಂಗಳೂರು ಮೆಮು ವೈಟ್ಫೀಲ್ಡ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 66546 ಕೆಎಸ್‌ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು ವೈಟ್ಫೀಲ್ಡ್‌ನಿಂದ ಹೊರಡಲಿದೆ.
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















