ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ನಗದುರಹಿತ ವ್ಯವಹಾರಗಳನ್ನು ಉತ್ತೇಜಿಸಲು ಹಾಗೂ ಪ್ರವಾಸಿಗರ ಸೌಲಭ್ಯವನ್ನು ಹೆಚ್ಚಿಸಲು ದಕ್ಷಿಣ ಪಶ್ಚಿಮ ರೈಲ್ವೆಯು ಹುಬ್ಬಳ್ಳಿ South Western Railway Hubballi ರೈಲು ಮ್ಯೂಸಿಯಂನಲ್ಲಿ QR ಕೋಡ್ ಆಧಾರಿತ ಡಿಜಿಟಲ್ ಪಾವತಿ ಸೌಲಭ್ಯವನ್ನು ಆರಂಭಿಸಿದೆ.
ಈ ಸೌಲಭ್ಯವನ್ನು ಬುಧವಾರ ದಕ್ಷಿಣ ಪಶ್ಚಿಮ ರೈಲ್ವೆಯ ಪ್ರಧಾನ ಹಣಕಾಸು ಸಲಹೆಗಾರ್ತಿ (PFA) ರಾಮಾಹ ದೇವಿ ಜಿ.ವಿ. ಹಾಗೂ ಪ್ರಧಾನ ಮುಖ್ಯ ಯಾಂತ್ರಿಕ ಇಂಜಿನಿಯರ್ (PCME) ಶ್ರೀ ಆರ್. ಮುಕುಂದ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಮುಖ್ಯ ವರ್ಕ್‌ಶಾಪ್ ವ್ಯವಸ್ಥಾಪಕ ಶ್ರೀ ವಿಜಯ್ ಸಿಂಗ್ ಯಾದವ್ ಸೇರಿದಂತೆ ರೈಲ್ವೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸ ವ್ಯವಸ್ಥೆಯ ಮೂಲಕ ಮ್ಯೂಸಿಯಂಗೆ ಭೇಟಿ ನೀಡುವವರು ಪ್ರವೇಶ ಟಿಕೆಟ್‌ಗಳು ಹಾಗೂ ಇತರೆ ಅನುಮತಿತ ಸೇವೆಗಳಿಗಾಗಿ UPI ಮತ್ತು QR ಕೋಡ್ QR Code ಆಧಾರಿತ ಡಿಜಿಟಲ್ ಆಪ್‌ಗಳ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಇದು ಸುರಕ್ಷಿತ, ವೇಗವಾದ ಮತ್ತು ಸುಗಮ ಪಾವತಿ ಅನುಭವವನ್ನು ಒದಗಿಸುವ ಉದ್ದೇಶ ಹೊಂದಿದೆ.
Also read: ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ | ಪ್ರಧಾನಿ ಮೋದಿ ಭಾವುಕ ಮಾತು
ಭಾರತೀಯ ರೈಲ್ವೆಯ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ಪ್ರಮುಖ ಆಕರ್ಷಣೆಯಾಗಿರುವ ಹುಬ್ಬಳ್ಳಿ ರೈಲು ಮ್ಯೂಸಿಯಂನಲ್ಲಿ Hubli Railway Museum ಈ ಡಿಜಿಟಲ್ ವ್ಯವಸ್ಥೆ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲತೆ ನೀಡಲಿದೆ.
ಈ ಯೋಜನೆ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ದೃಷ್ಟಿಗೆ ಅನುಗುಣವಾಗಿದ್ದು, ಡಿಜಿಟಲ್ ಭಾರತ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















