ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾರಾಜ ಟ್ರೋಫಿ ಕೆಎಸ್’ಸಿಎ ಟಿ20 ಸೀಸನ್-5ರ ಶಿವಮೊಗ್ಗ ಯೋಧಾಸ್ ತಂಡದ ಅಧಿಕೃತ ಜೆರ್ಸಿ ಹಾಗೂ ಆಂಥೆಮ್ ನಾಳೆ ಬಿಡುಗಡೆಗೊಳ್ಳಲಿದೆ.
ಜೂನ್ 16ರ ಸಂಜೆ 6 ಗಂಟೆಗೆ ನಗರದ ಮಲ್ನಾಡ್ ಶೈರ್’ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಿವಮೊಗ್ಗ ಯೋಧಾಸ್ ತಂಡದ ಅಧಿಕೃತ ಜೆರ್ಸಿ ಅನಾವರಣ, ತಂಡದ ಆಂಥಮ್ ಬಿಡುಗಡೆ ಮಾಡಲಾಗುತ್ತಿದೆ.

Also read: ಹೆರಿಟೇಜ್ ಹಬ್ಬ | ಬೆಂಗಳೂರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ತೇಜಸ್ವಿ ಸೂರ್ಯ
ಈ ಸಮಾರಂಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಯೋಧಾಸ್ ಬ್ರಾಂಡ್ ಅಂಬಾಸಿಡರ್ ನಟ ದಿಗಂತ್ ಮಂಚಾಳೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಶಾಂತಾ ರಂಗಸ್ವಾಮಿ ಸೇರಿದಂತೆ ಕೆಎಸ್ಸಿಎ ಅಧಿಕಾರಿಗಳು, ಫ್ರಾಂಚೈಸಿ ಪ್ರತಿನಿಧಿಗಳು, ಆಟಗಾರರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಸಜ್ಜಾಗುತ್ತಿರುವ ಶಿವಮೊಗ್ಗ ಯೋಧಾಸ್ ತಂಡದ ಈ ಕಾರ್ಯಕ್ರಮಕ್ಕೆ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















