No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಕೊಪ್ಪಳ

ಸುರಕ್ಷತಾ ದಿನಾಚರಣೆ: ಕಿರ್ಲೋಸ್ಕರ್ ಆತಿಥ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

kalpa News by kalpa News
June 26, 2026
in ಕೊಪ್ಪಳ
0
ಸುರಕ್ಷತಾ ದಿನಾಚರಣೆ: ಕಿರ್ಲೋಸ್ಕರ್ ಆತಿಥ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಕೊಪ್ಪಳ |

ಹೊಸಪೇಟೆಯ ಸ್ಟೇಷನ್ ರಸ್ತೆಯಲ್ಲಿರುವ ಹೋಟೆಲ್ ಪ್ರಿಯದರ್ಶಿನಿ ತೋರಣಂ ಸಭಾಂಗಣದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (KFIL) ಹಾಗೂ ಬಿಕೆರೈಸ್ (BKRISE) ಸಹಯೋಗದಲ್ಲಿ ಬಳ್ಳಾರಿ–ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ–2026ರ ಅಂಗವಾಗಿ 55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿಯಾಗಿ ಜರುಗಿತು.

ವಿವಿಧ ಸುರಕ್ಷತಾ ಸಾಧನಗಳ ವಿತರಕರು ಭಾಗವಹಿಸಿದ್ದ 16 ಸುರಕ್ಷತಾ ಪ್ರದರ್ಶನ ಸ್ಟಾಲ್‌ಗಳನ್ನು ಕರ್ನಾಟಕ ಸರ್ಕಾರದ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕ ಕೆ.ಜಿ. ನಂಜಪ್ಪ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಆರ್.ವಿ. ಗುಮಾಸ್ತೆ ಅವರು ಉದ್ಘಾಟಿಸಿದರು.

ಸುರಕ್ಷತಾ ವಿಷಯದ ತಾಂತ್ರಿಕ ಸೆಮಿನಾರ್‌ಗೆ ಚಾಲನೆ ನೀಡಿದ ಬಳಿಕ. ಓಪನ್ ಸೇಫ್ಟಿ ಬ್ರಿಫಿಂಗ್ ಹಾಗೂ ಬಿಕೆರೈಸ್ ಪರಿಚಯಿಸಲಾಯಿತು.
ವರುಣ್, ಹಿರಿಯ ಸಹಾಯಕ ನಿರ್ದೇಶಕರು (ಬಳ್ಳಾರಿ ವಿಭಾಗ) ಅವರು ಸ್ವಾಗತ ಭಾಷಣ ಮಾಡಿದರು. ನಂತರ ಗಣ್ಯರಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಕೆ.ಜೆ ನಂಜಪ್ಪ ಹಾಗೂ ಆರ್.ವಿ. ಗುಮಾಸ್ತೆ ಅವರನ್ನು ಬಿಕೆರೈಸ್ ವತಿಯಿಂದ ಸನ್ಮಾನಿಸಲಾಯಿತು.

ವೆಂಕಟೇಶ್ ರಾಥೋಡ್, ಜಂಟಿ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಹುಬ್ಬಳ್ಳಿ ವಿಭಾಗ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಬಿ ಎಂ ಎಂ ಇಸ್ಪಾತ್ ಲಿಮಿಟೆಡ್ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಪ್ರಭುರವರು ವೇದಿಕೆಯ ಮೇಲೆ ಇದ್ದು ಅವರು ಸಹ ಸುರಕ್ಷತೆಯ ಬಗ್ಗೆ ತಮ್ಮ ಭಾಷಣದಲ್ಲಿ ಅರಿವು ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಪ್ರಥಮವಾಗಿ ನಿರ್ದೇಶಕರಾದ ನಂತರ ಬಳ್ಳಾರಿ- ಕೊಪ್ಪಳ ಭಾಗಕ್ಕೆ ಆಗಮಿಸಿದ ಶ್ರೀ ಕೆ.ಜೆ. ನಂಜಪ್ಪ ಅವರು ಹೊಸದಾಗಿ ಅನುಮೋದನೆಯಾಗಿರುವ ನೂತನ ಕಾರ್ಮಿಕ ಸಂಹಿತೆ (New Labour Code) ಕುರಿತು ಮಾಹಿತಿ ಸಮೃದ್ಧ ಉಪನ್ಯಾಸ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಆರ್.ವಿ. ಗುಮಾಸ್ತೆ ಅವರು “Safety Excellence Journey” ವಿಷಯದ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.
JNNCE Shivamoggaಮುಕುಂದ ಸುಮಿ ಪ್ರೈವೇಟ್ ಲಿಮಿಟೆಡ್‌ನ ಸಿಒಒ ಓ.ಪಿ. ಸಿಂಗ್ ಅವರು ತಮ್ಮ ಸಂಸ್ಥೆಯಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಸುರಕ್ಷತಾ ಪದ್ಧತಿಗಳ (Best Safety Practices) ಕುರಿತು ವಿವರಿಸಿದರು.

ಮಧ್ಯಾಹ್ನದ ಭೋಜನದ ಬಳಿಕ ಜಿಂದಾಲ್ ಸ್ಟೀಲ್ ಸಂಸ್ಥೆಯ ಧರ್ಮಪಾಲ್ ಅವರು ಉಕ್ಕು ಉದ್ಯಮದಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ನಂತರ ಮಿನರಲ್ಸ್ ಪವರ್ ಅಂಡ್ ಸ್ಟೀಲ್ಸ್ ಸಂಸ್ಥೆಯ ಡಿಜಿಎಂ ಅಜಿಜ್ ಅವರು “Environment Excellence” ವಿಷಯದ ಕುರಿತು ಉಪನ್ಯಾಸ ನೀಡಿದರು.

ಸುರಕ್ಷತಾ ಸಾಧನ ಸಾಮಗ್ರಿಗಳ ವಿತರಕರಿಂದ ವಯಕ್ತಕ ಸುರಕ್ಷರಾ ಸಾಧನ ಸಾಮಾಗ್ರಿಗಳ ಬಗ್ಗೆ ತಿಳಿಸಿದರು.

ಕೊಪ್ಪಳದ ಕಾರ್ಖಾನೆಗಳ ಸಹಾಯಕ ನಿರ್ದೇಶಕ ವಿಜಯಕುಮಾರ್ ಅವರು ವಿವಿಧ ಕೈಗಾರಿಕೆಗಳಲ್ಲಿ ಸಂಭವಿಸಿದ ಅಪಘಾತಗಳ ವಿಶ್ಲೇಷಣೆ, ಅಪಘಾತ ತಡೆಗಟ್ಟುವ ಕ್ರಮಗಳು ಹಾಗೂ ಸುರಕ್ಷತಾ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಸಮಾರೂಪ ಸಮಾರಂಭ

ಸಂಜೆಯ ವೇಳೆಗೆ ಕಾರ್ಯಕ್ರಮದ ಸಾಂಸ್ಕೃತಿಕ ಭಾಗವಾಗಿ ಜಿಂದಾಲ್ ಉದ್ಯೋಗಿಗಳಿಂದ ಸುರಕ್ಷತಾ ನಾಟಕ ಮತ್ತು ಹೊಸಪೇಟೆಯ ಅಂಜಲಿ ಭರತನಾಟ್ಯ ಅಕಾಡೆಮಿಯ ಕಲಾವಿದರು ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿದರು. ಈ ಪ್ರದರ್ಶನ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಕೈಗಾರಿಕೆಗಳು ಹಾಗೂ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸುರಕ್ಷತಾ ಜಾಗೃತಿ ಮೂಡಿಸುವಲ್ಲಿ, ಅಪಘಾತ ತಡೆಗಟ್ಟುವಲ್ಲಿ ಹಾಗೂ ಸುರಕ್ಷಿತ ಕಾರ್ಯಸ್ಥಳ ನಿರ್ಮಾಣದಲ್ಲಿ ಸಲ್ಲಿಸಿದ ವಿಶೇಷ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಮೆಷಿನ್ ಶಾಪ್ ವಿಭಾಗವು ಸಣ್ಣ ಪ್ರಮಾಣದ ಕೈಗಾರಿಕೆ ವಿಭಾಗದಲ್ಲಿ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೇಗಾ ಇಂಡಸ್ಡೀಸ್ ವಿಭಾಗದಲ್ಲಿ “ಉತ್ತಮ ಕಾರ್ಖಾನೆ” ಪ್ರಶಸ್ತಿಯನ್ನು ಪಡೆದುಕೊಂಡಿತು.

ಆನಂದ್ ಶಿರಿಶಾಡ್ ಅವರು “ಉತ್ತಮ ಸುರಕ್ಷತಾ ಅಧಿಕಾರಿ”, ಡಾ. ಪ್ರವೀಣ್ ಕುಮಾರ್ ಅವರು “ಉತ್ತಮ ವೈದ್ಯಾಧಿಕಾರಿ” ಪ್ರಶಸ್ತಿಗಳನ್ನು ಪಡೆದರು. ಕಿರ್ಲೋಸ್ಕರ್ ತಂಡವು ಸುರಕ್ಷತಾ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಫೌಂಡ್ರಿ ವಿಭಾಗದ ಕಾರ್ಮಿಕರಾದ ರುದ್ರೇಶ್ ಅವರು ಸುರಕ್ಷತಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆ.ಜಿ. ನಂಜಪ್ಪ,ವೆಂಕಟೇಶ್ ರಾಥೋಡ್, ಶ್ರೀವತ್ಸನ್, ಸಿ. ರಮೇಶ್, ಡಾ. ರಶೀದ್, ಓ.ಪಿ. ಸಿಂಗ್, ರಾಜಕುಮಾರ್ ದಂಪೆ, ವರುಣ್ ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ನೆರವೇರಿಸಿದರು.

“Engage, Educate and Empower People to Enhance Safety” ಎಂಬ ಈ ವರ್ಷದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಉದ್ಯೋಗಿಯೂ ಸುರಕ್ಷತೆಯ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಗಣ್ಯರು ಕರೆ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಮುರುಳಿಧರ್ ನಾಡಿಗೇರ್ (ಸುರಕ್ಷತಾ ವಿಭಾಗ), ಅಂಬಿಕಾ ಕಟ್ಟಿ (ಆಡಳಿತ ವಿಭಾಗ) ಕಿರಣ್ (ಪರಿಸರ ವಿಭಾಗ) ಹಾಗೂ ನಯನ್ (ಮಾರ್ಕೆಟಿಂಗ್ ವಿಭಾಗ) ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಂತಿಮವಾಗಿ ಶಿವಯ್ಯ ಸ್ವಾಮಿ ಅವರು ವಂದನಾರ್ಪಣೆ ಸಲ್ಲಿಸಿದರು.

ಬಿಕೆರೈಸ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂಡಗಳ ಸಮರ್ಪಕ ಯೋಜನೆ ಮತ್ತು ವ್ಯವಸ್ಥಾಪನೆಯಿಂದ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಆರಂಭವಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸುರಕ್ಷತಾ ಜಾಗೃತಿ, ಕೈಗಾರಿಕಾ ಸಹಭಾಗಿತ್ವ ಹಾಗೂ ಸುರಕ್ಷಿತ ಕಾರ್ಯಸಂಸ್ಕೃತಿಯ ವೃದ್ಧಿಗೆ ಈ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದ್ದು, ಭಾಗವಹಿಸಿದ ಎಲ್ಲರ ಸಹಕಾರದಿಂದ ಅರ್ಥಪೂರ್ಣ ಹಾಗೂ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿತು.

ವರದಿ: ಮುರುಳೀಧರ ನಾಡಿಗೇರ್, ಸುರಕ್ಷತಾ ವಿಭಾಗ, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalahamsa Infotech private limited

Tags: Kannada NewsKannada News LiveKannada News OnlineKannada News WebsiteKannada WebsiteKoppalaLatest News KannadaNews in KannadaNews Kannadaಕೊಪ್ಪಳ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಅಧಿಕಾರ ದಾಹಕ್ಕಾಗಿ ಸಂವಿಧಾನವನ್ನೇ ಹತ್ತಿಕ್ಕಿದ ಕಾಂಗ್ರೆಸ್ ಇತಿಹಾಸ ಮರೆಯಲು ಸಾಧ್ಯವಿಲ್ಲ: ಶಾಸಕ ಚನ್ನಬಸಪ್ಪ ಆಕ್ರೋಶ

Next Post

Henkel appoints Pradhyumna Ingle as Country President for India

kalpa News

kalpa News

Next Post
Henkel appoints Pradhyumna Ingle as Country President for India

Henkel appoints Pradhyumna Ingle as Country President for India

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL