No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
  • Advertise With Us
  • Grievances
  • About Us
  • Contact Us
Saturday, June 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ನಗರ ಯೋಜನೆಗೆ ಕೆಂಪೇಗೌಡರು ವಿಶ್ವಕ್ಕೆ ಮಾದರಿ: ಆರ್.ಎಂ. ಮಂಜುನಾಥಗೌಡ

517 ನೇ ಕೆಂಪೇಗೌಡ ಜಯಂತಿ: ಕಸಾಪ‌ ಅಧ್ಯಕ್ಷ ಡಿ.ಮಂಜುನಾಥಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 27, 2026
in ಶಿವಮೊಗ್ಗ
0
ನಗರ ಯೋಜನೆಗೆ ಕೆಂಪೇಗೌಡರು ವಿಶ್ವಕ್ಕೆ ಮಾದರಿ: ಆರ್.ಎಂ. ಮಂಜುನಾಥಗೌಡ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ |

ನಗರವನ್ನು ಹೇಗೆ ಯೋಜನಾಬದ್ಧವಾಗಿ ರೂಪಿಸಬೇಕು ಹಾಗೂ ರಾಜಧಾನಿಯ ಮಾದರಿ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ಸುಮಾರು 500 ವರ್ಷಗಳ ಹಿಂದೆಯೇ ತೋರಿಸಿದ ಮಹನೀಯ ಕೆಂಪೇಗೌಡರು ವಿಶ್ವಕ್ಕೆ ಮಾದರಿ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಹೇಳಿದರು.

ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಜಿಲ್ಲಾ ಒಕ್ಕಲಿಗರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶನಿವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
JNNCE Shivamoggaಒಕ್ಕಲಿಗ ಸಮಾಜದ ವಿವಿಧ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಕಾರ್ಯವನ್ನು ಆದಿಚುಂಚನಗಿರಿ ಮಠ ಕೈಗೊಂಡಿದ್ದು, ಆ ಕಾರ್ಯಕ್ಕೆ ಪ್ರಸನ್ನನಾಥ ಸ್ವಾಮೀಜಿ ಮುಂಚೂಣಿಯ ಸಂಘಟಕರಾಗಿ ಶ್ರಮಿಸುತ್ತಿದ್ದಾರೆ. ಸಮುದಾಯದ ಏಕತೆ ಮತ್ತು ಸಂಘಟನಾ ಬಲವರ್ಧನೆಗೆ ಸಮುದಾಯ ಭವನ ನಿರ್ಮಾಣ ಮಹತ್ವದ್ದಾಗಿದ್ದು, ಅದರ ನಿರ್ಮಾಣ ಕಾರ್ಯಕ್ಕೆ ಸಮುದಾಯದ ಜನರು ಉದಾರವಾಗಿ ಧನಸಹಾಯ ನೀಡಬೇಕು. ಕಸಾಪ ಅಧ್ಯಕ್ಷರಾದ ಡಿ.ಮಂಜುನಾಥ, ತಮ್ಮದೇ ಕ್ರಿಯಾಶೀಲತೆ ಮೂಲಕ ಕನ್ನಡದ ಕೆಲಸವನ್ನು ಮಾಡುತ್ತಿದ್ದಾರೆ. ಸಾಹಿತ್ಯ ಹುಣ್ಣಿಮೆಯಂತಹ ಅದ್ಭುತವಾದ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಅಂತಹ ವ್ಯಕ್ತಿತ್ವಕ್ಕೆ ಕೆಂಪೇಗೌಡ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ.

ನಮ್ಮದೇ ಸಮುದಾಯದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ದೇಶವನ್ನು ಎಲ್ಲಿಂದ ನೋಡಬೇಕು ಎಂದರೆ, ಬೆಂಗಳೂರಿನಿಂದ ನೋಡಬೇಕು ಎನ್ನುವಂತಹ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಕೆಂಪೇಗೌಡ ಪ್ರಶಸ್ತಿ ಸ್ವೀಕರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಅನೇಕ ಕುಹುಕದ ಮಾತುಗಳನ್ನು ಕೇಳಿದ್ದೇವೆ. ಅಂತಹ ಅವಮಾನದ ಮಾತುಗಳು ನಮ್ಮಲ್ಲಿ ಮತ್ತಷ್ಟು ಸೃಜನಶೀಲ ಸಂಘಟನೆಯನ್ನು ರೂಪಿಸಲು ಪ್ರೇರಣೆ ನೀಡಿದವು. ಸಹನೆ, ಶ್ರದ್ಧೆ ಮತ್ತು ಬದ್ದತೆ ಎಂದಿಗೂ ನಮ್ಮನ್ನು ಕಾಪಾಡಲಿದೆ ಎಂಬುದು ಸದಾ ನಮ್ಮ ಅನುಭವಕ್ಕೆ ಬರುತ್ತಲಿದೆ.
ಅಭಿವೃದ್ಧಿ ಎಂದರೇ ಕೇವಲ ಕಟ್ಟಡ, ರಸ್ತೆ, ಸೇತುವೆ ನಿರ್ಮಾಣ ಮಾತ್ರವಲ್ಲ. ಸಾಧಕರಾಗಿ ಹೊರಹೊಮ್ಮುವ ಮಕ್ಕಳು ಕೂಡ ಈ ದೇಶದ ಅಭಿವೃದ್ಧಿಯ ಭಾಗವೆ ಆಗಿದ್ದಾರೆ.  ಮಕ್ಕಳಿಗೆ ನಮ್ಮ ತಾಯಿ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹಿಂದುಳಿಯುತ್ತಿದ್ದೇವೆ. ಮಾತೃಭಾಷೆಯನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ಮಕ್ಕಳಲ್ಲಿ ಸೃಜನಶೀಲ ಚಿಂತನೆಗಳು ಕುಂಠಿತಗೊಳ್ಳುತ್ತಿದೆ. ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷ ಆಗಲಿದೆ ಎಂಬ ಮಾತನ್ನು ಅನುಷ್ಟಾನಗೊಳಿಸುವತ್ತ ಕಂಕಣಬದ್ದರಾಗ ಬೇಕಿದೆ. ಕಸಾಪಕ್ಕೆ ಎರಡು ವರ್ಷಗಳಿಂದ ಅನುದಾನವಿಲ್ಲ. ಆದರೂ ಜಿಲ್ಲೆಯ ಸಾಹಿತ್ಯಾಸಕ್ತರ ಸಹಕಾರದಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದೇವೆ ಎಂದು ಹೇಳಿದರು.

Also read: ಸಾಹಿತ್ಯ ಸ್ಪರ್ಧೆ ಜ್ಞಾನ ಹೆಚ್ಚಿಕೊಳ್ಳಲು ಸಹಕಾರಿ: ಡಾ. ವೀಣಾ

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನ ಬದ್ದವಾದ ನಗರದ ಭದ್ರಬುನಾದಿ ಹಾಕಿದ ಕೆಂಪೇಗೌಡರ ಕೊಡುಗೆ ಸ್ಮರಣೀಯ. ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ನಗರ ಯೋಜನೆಗೆ ಅವರು ಪ್ರೇರಣೆಯಾಗಿದ್ದಾರೆ. ಅವರು ಕಟ್ಟಿಸಿದ ಕೆರೆ ಕಟ್ಟಿಗಳ ಪರಿಸ್ಥಿತಿ ಆಧುನಿಕ ಕಾಲಮಾನದಲ್ಲಿ ಏನಾಗಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದು ಬರದಿಂದ ನಾವೆಲ್ಲ ತತ್ತರಿಸುತ್ತಿದ್ದೇವೆ. ಇಂತಹ ಪರಿಸ್ಥಿತಿ ಎದುರಾಗಬಾರದು ಎಂಬ ದೂರದೃಷ್ಟಿಯಿಂದಲೇ ಅಂದಿನ ಕಾಲದಲ್ಲೆ ಕೆರೆ ಕಟ್ಟೆಗಳಿಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ದಿವ್ಯಸಾನಿದ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ||ಅಂಶುಮಂತ್, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿರಿಬೈಲ್ ಧರ್ಮೇಶ್, ಸೂಡಾ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಪ್ರಗತಿಪರ ಕೃಷಿಕರಾದ ಆಶಾ ಶೇಷಾದ್ರಿ, ಮಲೆನಾಡು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೆ.ಎನ್.ರಾಮಕೃಷ್ಣ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಎ.ಬಿ.ಸಂಜಯ್, ಆಹಾರ ಇಲಾಖೆ ಉಪ ನಿರ್ದೇಶಕ ಸತೀಶ್.ಡಿ, ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಶಶಾಂಕ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಒಕ್ಕಲಿಗ ಸಮಾಜದ ವಿವಿಧ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalahamsa Infotech private limited

Tags: Kannada NewsKannada News LiveKannada News Online ShivamoggaKannada WebsiteKannadaNewsWebsiteKempegowda JayanthiLatestNewsKannadaLocalNewsMalnadNewsNews in KannadaNews KannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಹಿತ್ಯ ಸ್ಪರ್ಧೆ ಜ್ಞಾನ ಹೆಚ್ಚಿಕೊಳ್ಳಲು ಸಹಕಾರಿ: ಡಾ. ವೀಣಾ

Next Post

ಮಿರಜ್–ಕ್ಯಾಸಲ್ ರಾಕ್–ಮಿರಜ್ ಎಕ್ಸ್‌ಪ್ರೆಸ್  ರೈಲು ರದ್ದತಿ ಅವಧಿ ವಿಸ್ತರಣೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Indian Railway Special Trains

ಮಿರಜ್–ಕ್ಯಾಸಲ್ ರಾಕ್–ಮಿರಜ್ ಎಕ್ಸ್‌ಪ್ರೆಸ್  ರೈಲು ರದ್ದತಿ ಅವಧಿ ವಿಸ್ತರಣೆ

Leave a Reply Cancel reply

Your email address will not be published. Required fields are marked *

No Result
View All Result
Mysore - Shivamogga - Talguppa Train
English Articles

Cancellation, Regulation and Diversion of Trains

by ಕಲ್ಪ ನ್ಯೂಸ್
June 27, 2026
0

Kalpa Media House  | Hubballi | In view of infrastructure work at Lucknow station, Northern Railway has notified the partial...

Read moreDetails
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL