ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) (VTU) ವತಿಯಿಂದ 2024-25ನೇ ಸಾಲಿನ ಸಂಸ್ಥೆಗಳ ಕ್ರೀಡಾ ಪ್ರೋತ್ಸಾಹ ಯೋಜನೆಯಡಿ ರ‍್ಯಾಂಕಿಂಗ್ ಹಾಗೂ ನಗದು ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ನಗರದ ಜೆ.ಎನ್.ಎನ್. ಇಂಜಿನಿಯರಿಂಗ್ (JNNCE) ಕಾಲೇಜು ಸುಮಾರು 505 ಅಂಕಗಳೊಂದಿಗೆ ವಿಟಿಯು ಅಂಗಸಂಸ್ಥೆಯ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಈ ಸಾಧನೆಗಾಗಿ ಕಾಲೇಜಿಗೆ ₹1.25 ಲಕ್ಷ ನಗದು ಪ್ರಶಸ್ತಿ ಹಾಗೂ ಪ್ರಶಸ್ತಿ ಫಲಕ ಲಭಿಸಿದೆ. ಬೆಳಗಾವಿಯ ವಿಟಿಯು ಸೆನೆಟ್ ಸಭಾಂಗಣದಲ್ಲಿ ನಡೆದ ‘ಸಾಧಕರ ದಿನ’ ಕಾರ್ಯಕ್ರಮದಲ್ಲಿ ವಿಟಿಯು ಕುಲಪತಿಗಳಾದ ಡಾ.ಎಸ್. ವಿದ್ಯಾಶಂಕರ್ ಅವರು ಕಾಲೇಜಿಗೆ ಪ್ರಶಸ್ತಿ ಪ್ರದಾನ ಮಾಡಿದರು.
Also Read>> ಆರ್‌ಆರ್ ನಗರ SPARSH ಆಸ್ಪತ್ರೆಯಿಂದ 5 ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ಗಳ ಆರಂಭ
ಸಂಸ್ಥೆಯಲ್ಲಿ ವರ್ಷಪೂರ್ತಿ ಹಮ್ಮಿಕೊಳ್ಳಲಾದ ವಿವಿಧ ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ದಾಖಲಿಸಿದ ಸಾಧನೆ, ಕ್ರೀಡಾ ಸೌಲಭ್ಯಗಳ ಅಭಿವೃದ್ಧಿ ಮತ್ತು ಕ್ರೀಡಾ ಪ್ರೋತ್ಸಾಹಕ್ಕೆ ಕೈಗೊಂಡಿರುವ ಸಮಗ್ರ ಕಾರ್ಯ ಚಟುವಟಿಕೆಗಳನ್ನು ಪರಿಗಣಿಸಿ ಕಾಲೇಜನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಜೆಎನ್‌ಎನ್‌ಸಿಇ ತನ್ನ ವಿಶಿಷ್ಟ ಛಾಪು ಮೂಡಿಸಿರುವುದಕ್ಕೆ ಈ ಪ್ರಶಸ್ತಿ ಮತ್ತೊಂದು ಸಾಕ್ಷಿಯಾಗಿದೆ.
ಕಾಲೇಜಿನ ಕ್ರೀಡಾ ಪರಂಪರೆಗೆ ಹೊಸ ಗರಿಮೆಯನ್ನು ತಂದುಕೊಟ್ಟಿರುವ ಈ ಸಾಧನೆ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ವಿಭಾಗ ಹಾಗೂ ಎನ್ಇಎಸ್ ಆಡಳಿತ ಮಂಡಳಿಯ ಸಮರ್ಪಣಾ ಮನೋಭಾವದ ಪ್ರತಿಫಲವಾಗಿದೆ ಎಂದು ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ವಿಟಿಯು ಕುಲಸಚಿವರಾದ ಡಾ.ಪ್ರಸಾದ್.ಬಿ.ರಾಂಪೂರ್, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಎ.ವಿ. ಚೇತನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
JNNCE ಕುರಿತು
ಶಿವಮೊಗ್ಗದಲ್ಲಿರುವ ಜೆ.ಎನ್.ಎನ್. ಇಂಜಿನಿಯರಿಂಗ್ ಕಾಲೇಜು (ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್) ರಾಜ್ಯದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ಸಮಾಜ (NES) ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ಗೆ ಅಂಗಸಂಸ್ಥೆಯಾಗಿದೆ.
ಕಾಲೇಜು ವಿವಿಧ ಎಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತಿದ್ದು, ಉತ್ತಮ ಶೈಕ್ಷಣಿಕ ಮಟ್ಟ, ಆಧುನಿಕ ಪ್ರಯೋಗಾಲಯ ಸೌಲಭ್ಯಗಳು ಮತ್ತು ಅನುಭವೀ ಬೋಧಕ ವೃಂದಕ್ಕಾಗಿ ಪ್ರಸಿದ್ಧಿಯಾಗಿದೆ. ತಾಂತ್ರಿಕ ಶಿಕ್ಷಣದ ಜೊತೆಗೆ ಸಂಶೋಧನೆ, ನವೋದ್ಯಮ ಮತ್ತು ಕೈಗಾರಿಕಾ ಸಂಪರ್ಕಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ.
ಇದಲ್ಲದೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಹಪಾಠ್ಯ ಕಾರ್ಯಕ್ರಮಗಳಲ್ಲಿಯೂ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಈ ಸಂಸ್ಥೆಯ ವಿಶೇಷತೆ. ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಜೆಎನ್‌ಎನ್‌ಸಿಇ, ವಿದ್ಯಾರ್ಥಿಗಳನ್ನು ನೈಪುಣ್ಯಯುತ ವೃತ್ತಿಪರರನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದೆ.
JNNCE Secures 2nd Rank in VTU Sports Rankings
Visvesvaraya Technological University (VTU) has announced the rankings and cash awards under its Sports Promotion Scheme for the academic year 2024–25. JNN College of Engineering (JNNCE), Shivamogga, has secured the second position among VTU-affiliated engineering colleges with around 505 points, marking a significant achievement.
The college has been awarded a cash prize of ₹1.25 lakh along with a trophy for this accomplishment. The award was presented by VTU Vice-Chancellor Dr. S. Vidyashankar during the ‘Sadhakara Dina’ (Achievers’ Day) programme held at the VTU Senate Hall in Belagavi.
The institution was selected for this honour considering its year-round sports activities, active participation of students, achievements at state and national-level competitions, development of sports infrastructure, and overall efforts in promoting sports.
This recognition stands as a testament to JNNCE’s growing prominence in the field of sports among technical institutions in the state. happiness, Principal Dr. Y. Vijayakumar said that the achievement reflects the dedication of students, the Department of Physical Education, and the NES management.
VTU Registrar Dr. Prasad B. Rampur, Director of Physical Education A.V. Chetan, and others were present during the award ceremony.






