ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಪ್ರದೇಶದಲ್ಲಿ ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದ್ದು, ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯ(ಶಿವಮೊಗ್ಗ) ಗರಿಷ್ಠ ಮಟ್ಟವಾದ 588.24 ಮೀಟರ್ ತಲುಪಿದೆ. ಈ ಹಿನ್ನೆಲೆಯಲ್ಲಿ ಜುಲೈ 04ರ ಸಂಜೆಯಿಂದಲೇ ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿದೆ.
ಜುಲೈ 05ರ ಬೆಳಿಗ್ಗೆಯ ಮಾಹಿತಿಯಂತೆ, ಜಲಾಶಯಕ್ಕೆ 15,785 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಡ್ಯಾಂನ 8 ಕ್ರಸ್ಟ್ ಗೇಟ್‌ಗಳ ಮೂಲಕ 13,558 ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯದ ಕಡೆಗೆ ಬಿಡುಗಡೆ ಮಾಡಲಾಗುತ್ತಿದೆ.
Also Read>> Hosanagar | ಗೋವಿನ ಕತ್ತು ಸೀಳಿದ ಪ್ರಕರಣ | ನಾಲ್ವರ ಬಂಧನ
ತುಂಗಾ ಜಲಾಶಯದಿಂದ ನೀರನ್ನು ಹೊರಬಿಟ್ಟಿರುವ ಪರಿಣಾಮ ಶಿವಮೊಗ್ಗ ನಗರದ ಮೂಲಕ ಹರಿಯುವ ತುಂಗಾ ನದಿಯಲ್ಲಿ ನೀರಿನ ಮಟ್ಟ ಮತ್ತು ಹರಿವು ಹೆಚ್ಚಾಗಿದೆ.
ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯ ಭರ್ತಿ ವಿಳಂಬವಾಗಿತ್ತು. ಆದರೆ ಈಗ ಮಳೆ ಚುರುಕುಗೊಳ್ಳುತ್ತಿರುವುದರಿಂದ ಜಲಮಟ್ಟದಲ್ಲಿ ಏರಿಕೆ ಕಾಣಿಸುತ್ತಿದೆ.
ಮಳೆ ಚುರುಕು
ಮಲೆನಾಡು ಭಾಗದಲ್ಲಿ ಕೆಲವು ದಿನಗಳಿಂದ ಇಳಿಕೆಯಾಗಿದ್ದ ಮುಂಗಾರು ಮಳೆ, ಇದೀಗ ಮತ್ತೆ ಚುರುಕುಗೊಂಡಿದೆ. ಜುಲೈ 04ರಿಂದ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ.
ಇನ್ನೊಂದೆಡೆ, ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
Also Read>> ಶಿವಮೊಗ್ಗ | JNNCEಗೆ ಮತ್ತೊಂದು ಗರಿ | ವಿಟಿಯು ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನ
Tunga Dam Full: Water Released from Dam – River Flow Increases in Shivamogga
With the monsoon gradually intensifying in the Malnad region, and good rainfall being recorded in the catchment area, the Tunga Reservoir has reached its maximum level of 588.24 meters.
In this backdrop, water has been released from the dam since the evening of July 04. As per the data available on the morning of July 05, the reservoir is receiving an inflow of 15,785 cusecs. Meanwhile, 13,558 cusecs of water is being released through 8 crest gates towards the Tungabhadra Reservoir at Hosapete.
Due to the release of water from the Tunga Reservoir, the water level and flow in the Tunga River, which passes through Shivamogga city, have increased.
This year, due to a delay in monsoon rains, the reservoir filling had been delayed. However, with rainfall picking up now, the water level is steadily rising.
Rain Intensifies
After a brief lull in the Malnad region, the monsoon has regained strength. Since July 04, several parts of the district have been receiving good rainfall.
Meanwhile, the India Meteorological Department has issued a yellow alert, forecasting good rainfall in Shivamogga district over the next two days.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







