No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Friday, July 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

Medtronic – Apollo Hospitals | ಹೈದರಾಬಾದ್’ನಲ್ಲಿ ಅತ್ಯಾಧುನಿಕ ಐಸಿಯು ಆಫ್ ಫ್ಯೂಚರ್ ಉದ್ಘಾಟನೆ

kalpa News by kalpa News
July 17, 2026
in Special Articles
0
Medtronic – Apollo Hospitals | ಹೈದರಾಬಾದ್’ನಲ್ಲಿ ಅತ್ಯಾಧುನಿಕ ಐಸಿಯು ಆಫ್ ಫ್ಯೂಚರ್ ಉದ್ಘಾಟನೆ
Share on FacebookShare on TwitterShare on WhatsApp

ಅಪೋಲೋ ಜುಬಿಲಿ ಹಿಲ್ಸ್‌ ನಲ್ಲಿರುವ ಹೊಸ 11 ಹಾಸಿಗೆಗಳ ಈ ಹೊಸ ಸೌಲಭ್ಯವು ಸಂಯೋಜಿತ ಅಕ್ಯೂಟ್ ಕೇರ್ & ಮಾನಿಟರಿಂಗ್ ತಂತ್ರಜ್ಞಾನಗಳನ್ನು ಹೊಂದಿರಲಿದ್ದು, ಮೆಡ್‌ ಟ್ರಾನಿಕ್ ಸಂಸ್ಥೆಯು ಆರ್‌ ಆಂಡ್‌ ಡಿಗಾಗಿ ನೈಜ-ಪ್ರಪಂಚದ ಕ್ಲಿನಿಕಲ್ ಆವಿಷ್ಕಾರದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ಆರೋಗ್ಯ ರಕ್ಷಣೆ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ದೈತ್ಯ ಸಂಸ್ಥೆ ಮೆಡ್‌ ಟ್ರಾನಿಕ್ ಮತ್ತು ದೇಶದ ಪ್ರಮುಖ ಹೆಲ್ತ್‌ ಕೇರ್ ನೆಟ್‌ ವರ್ಕ್ ಅಪೋಲೋ ಹಾಸ್ಪಿಟಲ್ಸ್, ವೈದ್ಯಕೀಯ ರಂಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದು, ಸಹಭಾಗಿತ್ವ ಮಾಡಿಕೊಂಡಿವೆ. ಈ ಸಹಭಾಗಿತ್ವದ ಭಾಗವಾಗಿ ಹೈದರಾಬಾದ್‌ ನ ಜುಬಿಲಿ ಹಿಲ್ಸ್‌ ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಸುಧಾರಿತ ಐಸಿಯು (ತೀವ್ರ ನಿಗಾ ಘಟಕ) “ಐಸಿಯು ಆಫ್ ದಿ ಫ್ಯೂಚರ್” ಅನ್ನು ಉದ್ಘಾಟಿಸಲಾಗಿದೆ.

ಜುಬಿಲಿ ಹಿಲ್ಸ್ ಆವರಣದಲ್ಲಿ ನೂತನವಾಗಿ ಆರಂಭವಾಗಿರುವ ಈ 11 ಹಾಸಿಗೆಗಳ ಅತ್ಯಾಧುನಿಕ ಐಸಿಯು ಇದಾಗಿದ್ದು, ಈ ಘಟಕವು ಮೆಡ್‌ಟ್ರಾನಿಕ್ ಸಂಸ್ಥೆಯ ಸುಧಾರಿತ ಅಕ್ಯೂಟ್ ಕೇರ್ ಮತ್ತು ಮಾನಿಟರಿಂಗ್ (ಎಸಿಎಂ) ತಂತ್ರಜ್ಞಾನಗಳನ್ನು ಹೊಂದಿರಲಿದೆ. ತೀವ್ರ ನಿಗಾದಲ್ಲಿರುವ ರೋಗಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ಮತ್ತು ತುರ್ತು ಚಿಕಿತ್ಸೆ ನೀಡಲು ಇದು ಸಹಕಾರಿಯಾಗಲಿದ್ದು, ಜಂಟಿ ಆರೋಗ್ಯ ಆವಿಷ್ಕಾರದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಸೌಲಭ್ಯವು ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರದೆ, ಮೆಡ್‌ ಟ್ರಾನಿಕ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ನೈಜ-ಪ್ರಪಂಚದ ಕ್ಲಿನಿಕಲ್ ಆವಿಷ್ಕಾರದ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.
ಜುಬಿಲಿ ಹಿಲ್ಸ್ ಆಸ್ಪತ್ರೆಯ ಆವರಣದಲ್ಲಿ ಜುಲೈ 16ರಂದು ನಡೆದ ಔಪಚಾರಿಕ ಉದ್ಘಾಟನಾ ಸಮಾರಂಭದಲ್ಲಿ ಉಭಯ ಸಂಸ್ಥೆಗಳ ಉನ್ನತಾಧಿಕಾರಿಗಳು ಅಧಿಕೃತವಾಗಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು. ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ, ಅಪೋಲೋ ಹೆಲ್ತ್‌ ಆಕ್ಸಿಸ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನ್‌ಪ್ರೀತ್ ಸಿಂಗ್ ಮತ್ತು ಮೆಡ್‌ಟ್ರಾನಿಕ್ ಸಂಸ್ಥೆಯ ಭಾರತೀಯ ಉಪಖಂಡದ ದೇಶಗಳ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷ ಮನ್‌ದೀಪ್ ಸಿಂಗ್ ಕುಮಾರ್ ಈ ಒಪ್ಪಂದದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೆಡ್‌ ಟ್ರಾನಿಕ್‌ ನ ಎಸಿಎಂ ತಂಡದ ಸಹಯೋಗದೊಂದಿಗೆ ರೂಪುಗೊಂಡಿರುವ ಈ ಯೋಜನೆಯು, ದೇಶದ ತುರ್ತು ಚಿಕಿತ್ಸಾ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮತ್ತು ಜಂಟಿ ಆರೋಗ್ಯ ಆವಿಷ್ಕಾರಗಳನ್ನು ಉತ್ತೇಜಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ವೈದ್ಯಕೀಯ ವೃತ್ತಿಪರರು ಮತ್ತು ತಂತ್ರಜ್ಞಾನ ನಾಯಕರ ನಡುವೆ ನಿಕಟ ಸಹಯೋಗವನ್ನು ಬೆಳೆಸುವ ಜೊತೆಗೆ, ದಿನದಿಂದ ದಿನಕ್ಕೆ ಬದಲಾಗುತ್ತಿರುವ ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಈ ಸಂಯೋಜಿತ ಐಸಿಯುವನ್ನು ವಿನ್ಯಾಸಗೊಳಿಸಲಾಗಿದೆ. ಉಭಯ ಸಂಸ್ಥೆಗಳ ಕ್ಲಿನಿಕಲ್ ಪರಿಣತಿ ಮತ್ತು ಸುಧಾರಿತ ತಂತ್ರಜ್ಞಾನಗಳು ಒಂದೆಡೆ ಸೇರಿರುವುದರಿಂದ, ರೋಗಿಗಳಿಗೆ ಹೆಚ್ಚು ನಿಖರವಾದ ಚಿಕಿತ್ಸೆ ನೀಡಲು ಹಾಗೂ ಗುಣಮುಖರಾಗುವ ಪ್ರಮಾಣವನ್ನು ಉತ್ತಮಗೊಳಿಸಲು ಇದು ಸಹಕಾರಿಯಾಗಲಿದೆ.

ಈ ಕುರಿತು ಮಾತನಾಡಿದ ಮೆಡ್‌ ಟ್ರಾನಿಕ್ ಸಂಸ್ಥೆಯ ಭಾರತೀಯ ಉಪಖಂಡದ ದೇಶಗಳ ಉಪಾಧ್ಯಕ್ಷ ಮನ್‌ದೀಪ್ ಸಿಂಗ್ ಕುಮಾರ್ ಅವರು, “ಅರ್ಥಪೂರ್ಣ ಆರೋಗ್ಯ ರಕ್ಷಣೆ ಆವಿಷ್ಕಾರಗಳು ಬಲವಾದ ಕ್ಲಿನಿಕಲ್ ಸಹಯೋಗ ಮತ್ತು ಚಿಕಿತ್ಸಾ ವಿಧಾನದ ಆಳವಾದ ತಿಳುವಳಿಕೆಯನ್ನು ಅವಲಂಬಿಸಿವೆ ಎಂದು ಮೆಡ್‌ ಟ್ರಾನಿಕ್ ನಂಬುತ್ತದೆ. ಅಪೋಲೋ ಆಸ್ಪತ್ರೆಯಲ್ಲಿನ ಈ ಸುಧಾರಿತ ಐಸಿಯು ರೋಗಿಗಳ ಆರೈಕೆ ಮತ್ತು ಕ್ಲಿನಿಕಲ್ ಶ್ರೇಷ್ಠತೆಗೆ ನಮ್ಮಿಬ್ಬರ ಜಂಟಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಸಹಯೋಗದ ಮೂಲಕ ನೈಜ-ಪ್ರಪಂಚದ ಕ್ಲಿನಿಕಲ್ ವಾತಾವರಣದಿಂದ ನಾವು ಅಮೂಲ್ಯವಾದ ಒಳನೋಟಗಳನ್ನು ಪಡೆಯಲಿದ್ದೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ವೈದ್ಯರಿಗೆ ನೆರವಾಗುವ ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯ ಮಾಡಲಿದೆ” ಎಂದರು.
ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಅವರು ಮಾತನಾಡಿ, “ತುರ್ತು ನಿಗಾ ವಿಭಾಗದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಪ್ರತಿ ನಿಮಿಷ ಮತ್ತು ಪ್ರತಿಯೊಂದು ಚಿಕಿತ್ಸಾ ಕ್ರಮವೂ ರೋಗಿಯ ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ. ಇಂದಿನ ವೈದ್ಯಕೀಯ ರಂಗವು ಸಂಪೂರ್ಣವಾಗಿ ದತ್ತಾಂಶ ಆಧಾರಿತವಾಗುತ್ತಿದ್ದು, ಭಾರತಕ್ಕೆ ಕೇವಲ ಅತ್ಯುತ್ತಮ ತಂತ್ರಜ್ಞಾನಗಳನ್ನು ತರುವುದು ಮಾತ್ರ ನಮ್ಮ ಜವಾಬ್ದಾರಿಯಲ್ಲ, ಬದಲಿಗೆ ಅವು ವೈದ್ಯಕೀಯ ನಿರ್ಧಾರಗಳನ್ನು ಮತ್ತು ರೋಗಿಗಳು ಗುಣಮುಖರಾಗುವ ಪ್ರಮಾಣವನ್ನು ಅರ್ಥಪೂರ್ಣವಾಗಿ ಸುಧಾರಿಸುವಂತೆ ನೋದಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮೆಡ್‌ ಟ್ರಾನಿಕ್ ಸಂಸ್ಥೆಯೊಂದಿಗಿನ ನಮ್ಮ ಪಾಲುದಾರಿಕೆಯು ಸುಧಾರಿತ ಮಾನಿಟರಿಂಗ್ ತಂತ್ರಜ್ಞಾನಗಳು, ನಮ್ಮ ವೈದ್ಯರ ಪರಿಣತಿ ಮತ್ತು ಡಿಜಿಟಲ್ ಆವಿಷ್ಕಾರದ ಶಕ್ತಿಯನ್ನು ಒಟ್ಟುಗೂಡಿಸುವ ಮೂಲಕ ತುರ್ತು ನಿಗಾ ವ್ಯವಸ್ಥೆಯ ಭವಿಷ್ಯವನ್ನು ಮರುರೂಪಿಸುವ ಜಂಟಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾವಿಬ್ಬರೂ ಸೇರಿ ಹೆಚ್ಚು ಸಂಪರ್ಕಿತ, ಬುದ್ಧಿವಂತ ಮತ್ತು ರೋಗಿಯ ಆರೋಗ್ಯದ ಏರುಪೇರುಗಳನ್ನು ಮೊದಲೇ ಗ್ರಹಿಸುವ ಸಾಮರ್ಥ್ಯವಿರುವ ಐಸಿಯುಗಳನ್ನು ನಿರ್ಮಿಸುತ್ತಿದ್ದೇವೆ. ಇದು ಸಕಾಲಿಕ ಚಿಕಿತ್ಸೆ ಮತ್ತು ವೈಯಕ್ತೀಕರಿಸಿದ ಆರೈಕೆಯನ್ನು ನೀಡಲು ನೆರವಾಗಲಿದೆ. ತಂತ್ರಜ್ಞಾನವು ಮಾನವ ಪರಿಣತಿಯನ್ನು ಮತ್ತಷ್ಟು ಬಲಪಡಿಸುವಂತಹ ಆರೋಗ್ಯ ವ್ಯವಸ್ಥೆಯನ್ನು ಸೃಷ್ಟಿಸುವ ಅಪೋಲೋ ಸಂಸ್ಥೆಯ ಪಯಣದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಇದು ವೈದ್ಯರಿಗೆ ಹೆಚ್ಚಿನ ಜೀವಗಳನ್ನು ಉಳಿಸಲು ಸಹಾಯ ಮಾಡುವುದಲ್ಲದೆ, ಅತ್ಯಂತ ಕಷ್ಟದ ಸಂದರ್ಭಗಳಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳಲ್ಲಿ ಹೆಚ್ಚಿನ ವಿಶ್ವಾಸವನ್ನು ತುಂಬುತ್ತದೆ” ಎಂದು ಹೇಳಿದರು.

ಮೆಡ್‌ ಟ್ರಾನಿಕ್‌ ನ ಅಕ್ಯೂಟ್ ಕೇರ್ ಮಾನಿಟರಿಂಗ್ ವಿಭಾಗದ ಆರ್‌ ಆಂಡ್‌ ಡಿ ಉಪಾಧ್ಯಕ್ಷ ಜೇಸನ್ ಕೇಸ್ ಮಾತನಾಡಿ, “ವೈದ್ಯರಿಗಾಗಿ ಆವಿಷ್ಕಾರಗಳನ್ನು ಮಾಡುವ ಬದಲು, ವೈದ್ಯರ ಜೊತೆಗೂಡಿ ಆವಿಷ್ಕಾರಗಳನ್ನು ಮಾಡಿದಾಗ ತಂತ್ರಜ್ಞಾನವು ಹೆಚ್ಚು ಬಲಶಾಲಿಯಾಗುತ್ತದೆ. ಅಪೋಲೋ ಆಸ್ಪತ್ರೆಯ ಈ ಡಿಜಿಟಲ್ ಐಸಿಯು ಒಂದು ನೈಜ-ಪ್ರಪಂಚದ ಆವಿಷ್ಕಾರದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಇಲ್ಲಿ ತಂತ್ರಜ್ಞಾನ ಅಭಿವರ್ಧಕರು ಮತ್ತು ಆರೋಗ್ಯ ವೃತ್ತಿಪರರು ಒಟ್ಟಾಗಿ ತುರ್ತು ನಿಗಾ ವಿಭಾಗದ ಸವಾಲುಗಳು ಹಾಗೂ ಅವಕಾಶಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಕರಿಸಬಹುದು. ನಾವಿಬ್ಬರೂ ಸೇರಿ ವೈದ್ಯರಿಗೆ ರೋಗಿಗಳ ವೈಯಕ್ತಿಕ ಆರೈಕೆಯನ್ನು ಸುಲಭಗೊಳಿಸುವಂತಹ ಹೆಚ್ಚು ಸ್ಮಾರ್ಟ್ ಮತ್ತು ಕನೆಕ್ಟೆಡ್ ಪರಿಹಾರಗಳನ್ನು ಒದಗಿಸುವ ಭರವಸೆ ಹೊಂದಿದ್ದೇವೆ” ಎಂದು ಹೇಳಿದರು.

JNNCE Shivamoggaಈ ಐತಿಹಾಸಿಕ ಪಾಲುದಾರಿಕೆಯನ್ನು ಸಂಭ್ರಮಿಸಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಉಭಯ ಸಂಸ್ಥೆಗಳ ಜಾಗತಿಕ ಮತ್ತು ಪ್ರಾದೇಶಿಕ ಪ್ರಮುಖ ನಾಯಕರು ಒಟ್ಟಾಗಿ ಭಾಗವಹಿಸಿದ್ದರು. ಒಪ್ಪಂದಕ್ಕೆ ಸಹಿ ಹಾಕಿದ ಗಣ್ಯರಲ್ಲದೆ, ಮೆಡ್‌ ಟ್ರಾನಿಕ್ ಸಂಸ್ಥೆಯ ಜಾಗತಿಕ ನಾಯಕತ್ವದ ಪ್ರಮುಖರಾದ ಕೇಟ್ ಬೆನೆಡಿಕ್ಟ್ (ಎಸ್‌ವಿಪಿ ಮತ್ತು ಪ್ರೆಸಿಡೆಂಟ್, ಅಕ್ಯೂಟ್ ಕೇರ್ ಮಾನಿಟರಿಂಗ್), ಜೇಸನ್ ಕೇಸ್ (ವಿಪಿ, ಆರ್‌ ಆಂಡ್‌ ಡಿ, ಅಕ್ಯೂಟ್ ಕೇರ್ ಮಾನಿಟರಿಂಗ್), ದೇವ್ ಜೋಶುವಾ (ಸೀನಿಯರ್ ಡೈರೆಕ್ಟರ್, ಡಿಜಿಟಲ್ ಹೆಲ್ತ್), ಗೌರಿ ಜೋಗ್ಲೇಕರ್ (ಸೀನಿಯರ್ ಡೈರೆಕ್ಟರ್, ಪೋರ್ಟ್‌ಫೋಲಿಯೋ ಆರ್‌ ಆಂಡ್‌ ಡಿ ಮತ್ತು ಪಿಎಂಒ – ಇನ್ನೋವೇಶನ್ ಡೆಲಿವರಿ) ಮತ್ತು ದಿವ್ಯ ಪ್ರಕಾಶ್ ಜೋಶಿ (ವಿಪಿ, ಇಂಜಿನಿಯರಿಂಗ್ ಮತ್ತು ಬೋರ್ಡ್ ಮೆಂಬರ್, ಮೆಡ್‌ಟ್ರಾನಿಕ್ ಇಂಜಿನಿಯರಿಂಗ್ ಅಂಡ್ ಇನ್ನೋವೇಶನ್ ಸೆಂಟರ್ – ಎಂಇಐಸಿ) ಉಪಸ್ಥಿತರಿದ್ದರು.

ಅಪೋಲೋ ಹಾಸ್ಪಿಟಲ್ಸ್ ಪರವಾಗಿ ಮನ್‌ಪ್ರೀತ್ ಸಿಂಗ್ (ಸಿಇಒ, ಅಪೋಲೋ ಹೆಲ್ತ್‌ಆಕ್ಸಿಸ್), ತೇಜಸ್ವಿ ರಾವ್ (ಸಿಇಒ – ಅಪೋಲೋ ಹಾಸ್ಪಿಟಲ್ಸ್ ಆಂಧ್ರಪ್ರದೇಶ್ ಮತ್ತು ತೆಲಂಗಾಣ), ಡಾ. ಸಾಯಿ ಪ್ರವೀಣ್ ಹರನಾಥ್ (ಚೀಫ್ ಫಿಸಿಶಿಯನ್ ಮತ್ತು ಇನ್ನೋವೇಶನ್ ಆಫೀಸರ್) ಮತ್ತು ಡಾ. ರಾಹುಲ್ ಖಂಡೇಲ್ವಾಲ್ (ವಿಪಿ, ಪಾರ್ಟ್‌ನರ್‌ಶಿಪ್ಸ್ ಅಂಡ್ ಕ್ಲೈಂಟ್ ಸಲ್ಯೂಷನಿಂಗ್) ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      Kalpa News Advertising DisclaimerKalahamsa Infotech private limited

Tags: Apollo HospitalBENGALURUKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Karkala | ಕ್ರೈಸ್ಟ್ ಕಿಂಗ್ ಕಾಲೇಜಿನಲ್ಲಿ ಕಲಿಕಾ ಒತ್ತಡ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ

Next Post

Sudhamurthy | ಪುಣ್ಯಕೋಟಿ ಶತಕರುಣಿ ದೃಶ್ಯಕಾವ್ಯ ಲೋಕಾರ್ಪಣೆ

kalpa News

kalpa News

Next Post
Sudhamurthy | ಪುಣ್ಯಕೋಟಿ ಶತಕರುಣಿ ದೃಶ್ಯಕಾವ್ಯ ಲೋಕಾರ್ಪಣೆ

Sudhamurthy | ಪುಣ್ಯಕೋಟಿ ಶತಕರುಣಿ ದೃಶ್ಯಕಾವ್ಯ ಲೋಕಾರ್ಪಣೆ

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL