ಕಲ್ಪ ಮೀಡಿಯಾ ಹೌಸ್ | ಸೊರಬ |
ಕುಟುಂಬದ ಇತಿಹಾಸದೊಂದಿಗೆ ನಾವು ನಿಂತಿರುವ ನೆಲೆಯ ಹಿನ್ನೆಲೆಯನ್ನು ಅರಿತುಕೊಂಡಾಗ ಮಾತ್ರ ಆಸ್ಥೆ ಮತ್ತು ಅಭಿಮಾನ ಬೆಳೆಯುತ್ತದೆ ಎಂದು ಇತಿಹಾಸ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ತಿಳಿಸಿದ್ದಾರೆ.
ತಾಲ್ಲೂಕಿನ ಕುಪ್ಪಗಡ್ಡೆ ಸಹಿಪ್ರಾ ಶಾಲೆ ಆಯೋಜಿಸಿದ್ದ “ಇತಿಹಾಸ ಪರಂಪರೆ ಉಳಿಸಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಪ್ಪಗಡ್ಡೆ ಪ್ರಾಚೀನ ಗ್ರಾಮವಾಗಿದ್ದು, ಸುಮಾರು 1600 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿನ ಒಂದು ಶಾಸನ ಕನ್ನಡ ಛಂದಸ್ಸಿನ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದ್ದು, 11ನೇ ಶತಮಾನದ ಈ ಶಾಸನವನ್ನು ಇದೇ ಗ್ರಾಮದ ಶಾಸನ ಕವಿ ಕಪ್ಪಣಭಟ್ಟ ಖಂಡರಿಸಿರುವುದು ಗಮನಾರ್ಹವೆಂದು ಅವರು ತಿಳಿಸಿದರು.
ಸೊರಬ ತಾಲ್ಲೂಕಿನ ಬಹುತೇಕ ಹಳ್ಳಿಗಳು ಪ್ರಾಚೀನ ಇತಿಹಾಸ ಹೊಂದಿದ್ದು, ಅಳಿದುಳಿಯುತ್ತಿರುವ ಗುಡಿಗೋಪುರಗಳು, ಶಾಸನಗಳು ಮತ್ತು ಭಗ್ನಾವಶೇಷಗಳನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸವನ್ನು ಉಳಿಸಲು ಇವು ಪ್ರಮುಖ ಆಧಾರಗಳಾಗಿವೆ ಎಂದು ಹೇಳಿದರು.
Also read: COVID death Rise in Hyderabad | ಪಾವಗಡ ಗಡಿಯಲ್ಲಿ ಹೈ ಅಲರ್ಟ್
ಶಾಲಾ ಮಕ್ಕಳೊಂದಿಗೆ ಕುಪ್ಪಗಡ್ಡೆಯ ಪ್ರಾಚೀನತೆ ಕುರಿತು ಮಾಹಿತಿ ಹಂಚಿಕೊಂಡ ಅವರು, ಶಿಲಾಯುಗದ ಕೆಲವು ಆಯುಧಗಳು ಮತ್ತು ಪರಿಕರಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಮಿತಿ ಅಧ್ಯಕ್ಷ ಮಾಲತೇಶ್, ಸದಸ್ಯರಾದ ಗಿರೀಶ್ ಆರ್ ಹೆಗಡೆ, ಗಣಪತಿ, ಸಂಗೀತಾ ರಾಘವೇಂದ್ರ, ಮುಖ್ಯ ಶಿಕ್ಷಕಿ ಮಂಗಳ ಹೆಗಡೆ, ಸಹಶಿಕ್ಷಕಿಯರಾದ ಶಿವಲೀಲಾ, ಪಾರ್ವತಿ, ಪ್ರತಿಮಾ, ಜಯಮಾಲಾ, ದಿವ್ಯನಾಯ್ಕ್, ಅಕ್ಷತಾ, ಮಂಜುನಾಥ್, ಕೆಂಡಪ್ಪಗೌಡ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









