ಕಲ್ಪ ಮೀಡಿಯಾ ಹೌಸ್ | ಮಂಗಳೂರು/ಬೆಂಗಳೂರು |
ಮೈಸೂರು ವಿಭಾಗದ ಯಡಕುಮರಿ–ಶ್ರೀವಾಗಿಲು ರೈಲು ಮಾರ್ಗ ಮಧ್ಯೆ 01.08.2026 ರಂದು ಸಂಭವಿಸಿದ ಭೂಕುಸಿತದ (Landslide) ಪರಿಣಾಮವಾಗಿ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಭೂಕುಸಿತ ಉಂಟಾದ ಪರಿಣಾಮ ಈ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
Also Read>> ಮೊಬೈಲ್ ನೋಡುತ್ತಾ ಆಹಾರ ಸೇವನೆ ಮನಸ್ಸಿಗೆ ಮಾರಕ | ರಾಮಚಂದ್ರಾಪುರ ಶ್ರೀ
Landslide : ರದ್ದುಗೊಂಡ ರೈಲುಗಳ ವಿವರ:
- ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್ಪ್ರೆಸ್ (03.08.2026 ರಂದು ಪ್ರಯಾಣ ಆರಂಭಿಸುವುದು) ರದ್ದು.
- ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರ ಗೋಮಟೇಶ್ವರ ಎಕ್ಸ್ಪ್ರೆಸ್ (03.08.2026 ರಂದು ಪ್ರಯಾಣ ಆರಂಭಿಸುವುದು) ರದ್ದು.
- ರೈಲು ಸಂಖ್ಯೆ 16596 ಕಾರವಾರ – ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ (03.08.2026 ರಂದು ಪ್ರಯಾಣ ಆರಂಭಿಸುವುದು) ರದ್ದು.
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ತಾಜಾ ಅಪ್ಡೇಟ್ಗಳಿಗಾಗಿ ಅಧಿಕೃತ NTES ಆಪ್/ವೆಬ್ಸೈಟ್ ಅನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











