ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ (Soraba) ತಾಲೂಕಿನ ತೋರವಂದ ಗ್ರಾಮದಲ್ಲಿ ತೋಟದ ಮನೆಯಲ್ಲಿ ಬೋರ್‌ವೆಲ್ ಮೋಟಾರ್ ಆನ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 35 ವರ್ಷದ ಯುವಕ ಮೃತಪಟ್ಟಿರುವ ದುರ್ಘಟನೆ ಭಾನುವಾರ ನಡೆದಿದೆ.
ಮೃತರನ್ನು ತೋರವಂದ ಗ್ರಾಮದ ವೀರೇಶ್ (35), ತಂದೆ ಮಲ್ಲಿಕಾರ್ಜುನ ವಾಸನದರ ಅವರ ಮಗ ಎಂದು ಗುರುತಿಸಲಾಗಿದೆ.
Soraba : ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶ
ತೋಟದ ಮನೆಯಲ್ಲಿ ಬೋರ್‌ವೆಲ್ ಮೋಟಾರ್ ಆನ್ ಮಾಡಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವೀರೇಶ್ ಇತ್ತೀಚೆಗಷ್ಟೇ ಕಷ್ಟಪಟ್ಟು ತೋಟವನ್ನು ಅಭಿವೃದ್ಧಿಪಡಿಸಿದ್ದರು. ಅವಿವಾಹಿತರಾಗಿದ್ದ ಅವರು ತಾಯಿ ವಿನೋದಮ್ಮ ಅವರಿಗೆ ಆಸರೆಯಾಗಿದ್ದ ಏಕೈಕ ಪುತ್ರ ಹಾಗೂ ಕುಟುಂಬದ ಜೀವನೋಪಾಯದ ಆಧಾರವಾಗಿದ್ದರು. ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ದುಡಿಯುವ ಏಕೈಕ ವ್ಯಕ್ತಿಯನ್ನು ಕಳೆದುಕೊಂಡಂತಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
Also read>> ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ | 3 ದಶಕದ ರಾಜಕೀಯ ಪಯಣಕ್ಕೆ ಮೈಲಿಗಲ್ಲು
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Comments 1