ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯ ಪರಂಪರೆಯ ಚತುರ್ವೇದಭಾಷ್ಯಾಚಾರ್ಯ, ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ 6ನೇ ಚಾತುರ್ಮಾಸ್ಯ ಮಹೋತ್ಸವವು ಬೆಂಗಳೂರು (Bengaluru) ಯಲಹಂಕ ಸಮೀಪದ (Kakolu) ಕಾಕೋಳು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 8ರಿಂದ ಸೆಪ್ಟೆಂಬರ್ 26ರವರೆಗೆ ವೈಭವದಿಂದ ನಡೆಯಲಿದೆ.
ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನಾಂತರ್ಗತ ಶ್ರೀ ವೇಣುಗೋಪಾಲಸ್ವಾಮಿ ದೇವರು ಹಾಗೂ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಂಬದ ಆಂಜನೇಯಸ್ವಾಮಿಯ ಸನ್ನಿಧಿಯಲ್ಲಿ ನಡೆಯಲಿರುವ ಈ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದ ವಾತಾವರಣದಲ್ಲಿ ಜರುಗಲಿದೆ.
ಚಾತುರ್ಮಾಸ್ಯದ (Chaturmasya) ಅವಧಿಯಲ್ಲಿ ಪ್ರತಿದಿನ ಶ್ರೀ ವೀರರಾಮದೇವರಿಗೆ ವಿಶೇಷ ಪೂಜೆ, ವೇದ ಪಾರಾಯಣ, ಪ್ರವಚನ, ಭಜನೆ, ದಾಸವಾಣಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಭಕ್ತರಿಗೆ ಆಧ್ಯಾತ್ಮಿಕ ಚಿಂತನೆ ಹಾಗೂ ಧಾರ್ಮಿಕ ಜ್ಞಾನವನ್ನು ವೃದ್ಧಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಮಹೋತ್ಸವವನ್ನು ಪಾಂಚಜನ್ಯ ಪ್ರತಿಷ್ಠಾನ ಹಾಗೂ ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
Bengaluru | ಕಾಕೋಳಿನಲ್ಲಿ ಆ. 7ರಂದು ಶ್ರೀಗಳವರ ಭವ್ಯ ಪುರಪ್ರವೇಶ
ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ಆಗಸ್ಟ್ 7ರಂದು ಸಂಜೆ 5.30ಕ್ಕೆ ಕಾಕೋಳಿನ ಪ್ರವೇಶದ್ವಾರದಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ ಭವ್ಯ ಪುರಪ್ರವೇಶ ನಡೆಯಲಿದೆ.
ಮಂಗಳವಾದ್ಯ, ಭಜನಾ ಮಂಡಳಿಗಳೊಂದಿಗೆ ಶ್ರೀಗಳವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಗುವುದು. ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
Also read>> ಎಷ್ಟು ನೀರನ್ನು ಕುಡಿಯಬೇಕು? ಗೂಗಲ್ ನೋಡಿ ನೀರು ಕುಡಿಯುವುದಲ್ಲ : ರಾಮಚಂದ್ರಾಪುರ ಶ್ರೀ
ಆಗಸ್ಟ್ 8ರಂದು ಬೆಳಿಗ್ಗೆ 9 ಗಂಟೆಗೆ ಚಾತುರ್ಮಾಸ್ಯ ವ್ರತ ಸಂಕಲ್ಪ, ವೇದವ್ಯಾಸ ಪೂಜೆ ಹಾಗೂ ವಿವಿಧ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.
ವಿವಿಧ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳು
ಚಾತುರ್ಮಾಸ್ಯದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 16ರಂದು: ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ 85ನೇ ವರ್ಧಂತಿ ಪ್ರಯುಕ್ತ ಧನ್ವಂತರಿ ಹಾಗೂ ಮೃತ್ಯುಂಜಯ ಹೋಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಾಣೇಶ್ ಪಿ. ಭಾರದ್ವಾಜ್ ಅವರ ತಂಡದಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 4ರಂದು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂಲ ದೇವರಿಗೆ ವಿಶೇಷ ಬೆಣ್ಣೆ ಅಲಂಕಾರ, ವಿಶೇಷ ಪೂಜೆ ಹಾಗೂ ಅರ್ಘ್ಯ ಪ್ರದಾನ ಕಾರ್ಯಕ್ರಮಗಳು ನೆರವೇರಲಿವೆ.
ಸೆಪ್ಟೆಂಬರ್ 25ರಂದು: ಸಾಮೂಹಿಕ ಅನಂತಪದ್ಮನಾಭ ವ್ರತ ಆಯೋಜಿಸಲಾಗಿದೆ.
ಸೆಪ್ಟೆಂಬರ್ 26ರಂದು: ಚಾತುರ್ಮಾಸ್ಯ ವ್ರತ ಸಮಾಪ್ತಿ ಹಾಗೂ ಸೀಮೋಲ್ಲಂಘನ ಸಮಾರಂಭದೊಂದಿಗೆ ಮಹೋತ್ಸವವು ಸಂಪನ್ನಗೊಳ್ಳಲಿದೆ.
ಈ ಕುರಿತು ಚಾತುರ್ಮಾಸ್ಯ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ವಿ. ಗೋಪಾಲಕೃಷ್ಣ ಹಾಗೂ ಶ್ರೀಮಠದ ಕಾರ್ಯದರ್ಶಿ ಭದ್ರಾವತಿ ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಚಾತುರ್ಮಾಸ್ಯ ಮಹೋತ್ಸವದ ವಿವಿಧ ಸೇವೆಗಳಲ್ಲಿ ಭಕ್ತರು ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 91418 26180 ಅಥವಾ 63642 59787 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







