ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ಹಿರಿಯ ಸಂಸದರಾಗಿ ಸೇವೆ ಸಲ್ಲಿಸಿದ್ದ ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ಮಾಜಿ ಮಂತ್ರಿಗಳಾದ ಗುಂಡ್ಲುಪೇಟೆ ಹೆಚ್ ಎಸ್ ಮಹದೇವ ಪ್ರಸಾದ್ ರವರ ಜನ್ಮದಿನ ಹಾಗೂ ಕೊಡುಗೆಗಳ ಕುರಿತು ಕಾರ್ಯಕ್ರಮ ಜರುಗಿತು.
ಶ್ರೀನಿವಾಸ್ ಪ್ರಸಾದ್ ಹಾಗೂ ಮಹದೇವ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮುಖಂಡ ರಾಮಸಮುದ್ರದ ವೇಣುಗೋಪಾಲ್ ಮಾತನಾಡಿದರು.
ಬಡ ಜನರ ಬಗ್ಗೆ ಅಪಾರ ಕಳಕಳಿ, ಮಾನವೀಯತೆಯ ಕಾರ್ಯಗಳಿಂದ ಜನಪ್ರಿಯರಾಗಿ ಕೇಂದ್ರ ಮತ್ತು ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿ ಚಾಮರಾಜನಗರ ಜಿಲ್ಲೆ ಹಾಗೂ ಸಮಸ್ತ ಕರ್ನಾಟಕದ ಬಗ್ಗೆ ಅಪಾರ ಕಳಕಳಿ ಹೊಂದಿದ ಮಹಾನ್ ನಾಯಕರು. ದೀನದಲಿತರ ಚಿಂತನೆ, ಬಡವರ ಕಾಳಜಿ, ಸಾಮಾಜಿಕ ಸಮಾನತೆ, ಅನ್ಯಾಯದ ವಿರುದ್ಧ ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಂಡಿದ್ದ ಪ್ರಸಾದ್ ರವರ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
Also read>> ಬೀದರ್: ₹1.50 ಕೋಟಿ ವೆಚ್ಚದ ಯಕಾತಪುರ–ಮನ್ನಳ್ಳಿ ರಸ್ತೆ ಕಾಮಗಾರಿಗೆ ಚಾಲನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಬರಹಗಾರ ಲಕ್ಷ್ಮಿ ನರಸಿಂಹ ಶ್ರೀನಿವಾಸ್ ಪ್ರಸಾದ್ ಮತ್ತು ಮಹದೇವ ಪ್ರಸಾದ್ ರವರು ಕರ್ನಾಟಕದ ನಾಯಕರು. ಅಭಿವೃದ್ಧಿಯ ದೃಷ್ಟಿಕೋನದ ಮೂಲಕ ಸದಾ ಕಾಲ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿದ ಮಹನೀಯರು. ಕನ್ನಡ ಸಾಹಿತ್ಯ ಪರಿಷತ್ತು ಸರ್ವರನ್ನು ಗೌರವಿಸಿ ಕಾರ್ಯಕ್ರಮ ರೂಪಿಸಿ ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಮೂಲಕ ಸರ್ವರಿಗೂ ಮಾದರಿಯಾದ ಕಾರ್ಯವನ್ನು ಮಾಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ಎನ್ ಋಗ್ವೇದಿ ಮಾತನಾಡಿ ಶ್ರೀನಿವಾಸ ಪ್ರಸಾದ್ ಮತ್ತು ಮಹದೇವ ಪ್ರಸಾದ್ ರಾಜ್ಯದ ಅಭಿವೃದ್ಧಿಯ ರತ್ನಗಳು. ಶ್ರೀನಿವಾಸ್ ಪ್ರಸಾದ್ ರವರು ಆರು ಬಾರಿ ಸಂಸದರಾಗಿ ಎರಡು ಬಾರಿ ಶಾಸಕರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು. ಚೆನ್ನಾಗಿದ್ದಕ್ಕಾಗಿ ತಮ್ಮ ಬದುಕನ್ನು ಸವೆಸಿದವರು ನಿಷ್ಠೆ ಬದ್ಧತೆ ಹಾಗೂ ಕಾರ್ಯ ಬದ್ಧತೆಯಿಂದ ಜಿಲ್ಲೆಗೆ ತಮ್ಮದೇ ಆದ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಗೌರವಕ್ಕೆ ಪಾತ್ರರಾದವರು. ಶ್ರೀನಿವಾಸ ಪ್ರಸಾದ್ ರವರು ಜನನಾಯಕರು. ಸಂವಿಧಾನದ ಬಗ್ಗೆ ಅಪಾರಜ್ಞಾನವನ್ನು ಹೊಂದಿದ್ದ ಶ್ರೀನಿವಾಸ್ ಪ್ರಸಾದ್ ರವರು ದೃಢ ನಿರ್ಧಾರ ಮತ್ತು ತಮ್ಮ ಚಿಂತನೆಗಳನ್ನು ದೃಢವಾಗಿ ಹೆದರದೆ ತಿಳಿಸುತ್ತಿದ್ದ ಧೈರ್ಯವಂತರು.ಎಲ್ಲ ಜನಾಂಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಪ್ರಾಮಾಣಿಕತೆಯಿಂದ ಗೌರವದ ಮಾರ್ಗದಲ್ಲಿ ಸೇವೆ ಸಲ್ಲಿಸಿದವರು. ಸಮಾಜಕ್ಕಾಗಿ ಅರ್ಪಣಾ ಭಾವದಿಂದ ಸೇವೆ ಸಲ್ಲಿಸುವವರನ್ನು ಸಮಾಜ ಎಂದು ಮರೆಯುವುದಿಲ್ಲ. ಅಭಿಮಾನಿಗಳ ಹೃದಯದಲ್ಲಿ ಸದಾಕಾಲ ಶಾಶ್ವತವಾಗಿ ಇರುತ್ತಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಕಹಳೆ ರವರು ಶ್ರೀನಿವಾಸ ಪ್ರಸಾದ್ ಹಾಗೂ ಮಹದೇವ ಪ್ರಸಾದ್ ಕುರಿತು ಗಾಯನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಯ ಹಿರಿಯ ಹೋರಾಟಗಾರ ರಾಜಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಎಲ್.ಶಿವಲಿಂಗ ಮೂರ್ತಿ, ನಿವೃತ್ತ ಶಿಕ್ಷಕಿ ಸರಸ್ವತಿ, ಗೋವಿಂದರಾಜು ಮಣಿಕಂಠ, ಸಿದ್ದರಾಜು, ಪರo ಜ್ಯೋತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








