ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ವಾಲ್ ಪುಟ್ಟಿ (ಲಪ್ಪಾ) ಉಜ್ಜುವ ಮಿಷನ್‌ನಿಂದ ಆಕಸ್ಮಿಕವಾಗಿ (Electric Shock) ವಿದ್ಯುತ್ ಪ್ರವಹಿಸಿ 26 ವರ್ಷದ ಪೈಂಟರ್ ದಾರುಣವಾಗಿ ಮೃತಪಟ್ಟಿರುವ ಘಟನೆ ಆ.18ರ ಮಂಗಳವಾರ ಶಿವಮೊಗ್ಗ (Shivamogga) ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದಿದೆ.
ಮೃತರನ್ನು ಯಡೇಹಳ್ಳಿ ನಿವಾಸಿ ಶಾರುಖ್ ಖಾನ್ (26) ಎಂದು ಗುರುತಿಸಲಾಗಿದೆ.
ಹೊಸದಾಗಿ ಖರೀದಿಸಿದ್ದ ಮಿಷನ್‌ನಲ್ಲಿ ಟ್ರಯಲ್ ನಡೆಸುವಾಗ ಅವಘಡ
ಶಾರುಖ್ ಖಾನ್ ಅವರು ಯಡೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೈಂಟಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಪೈಂಟಿಂಗ್ ಕೆಲಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಅವರು ಇತ್ತೀಚೆಗೆ ವಾಲ್‌ಕೇರ್ ಪುಟ್ಟಿ ಉಜ್ಜುವ ಮಿಷನ್ ಅನ್ನು ಹೊಸದಾಗಿ ಖರೀದಿಸಿ ಮನೆಗೆ ತಂದಿದ್ದರು ಎನ್ನಲಾಗಿದೆ.
ಮಂಗಳವಾರ ಮನೆಯಲ್ಲೇ ಮಿಷನ್‌ನ ಕಾರ್ಯವೈಖರಿಯನ್ನು ಪರೀಕ್ಷಿಸಲು ಟ್ರಯಲ್ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಿಷನ್‌ಗೆ ವಿದ್ಯುತ್ ಸಂಪರ್ಕ ನೀಡಿ ಚಾಲನೆ ಮಾಡಿ ಪರೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು
ವಿದ್ಯುತ್ ಸ್ಪರ್ಶದಿಂದ ತೀವ್ರ ಅಸ್ವಸ್ಥಗೊಂಡ ಶಾರುಖ್ ಖಾನ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
Also Read>> ಸಾಗರ | ಕಾರು-ಬೈಕ್ ಮುಖಾಮುಖಿ ಡಿಕ್ಕಿ: 19 ವರ್ಷದ ಯುವಕ ಸ್ಥಳದಲ್ಲೇ ಸಾವು
ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ದುಃಖ
ಯುವ ಪೈಂಟರ್ ಆಗಿದ್ದ ಶಾರುಖ್ ಖಾನ್ ಅವರ ಅಕಾಲಿಕ ಮತ್ತು ದಾರುಣ ಸಾವು ಕುಟುಂಬಸ್ಥರು ಹಾಗೂ ಯಡೇಹಳ್ಳಿ ಗ್ರಾಮದ ನಿವಾಸಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ.
ವಿದ್ಯುತ್ ಚಾಲಿತ ಉಪಕರಣಗಳನ್ನು ಬಳಸುವ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಹೊಸದಾಗಿ ಖರೀದಿಸುವ ವಿದ್ಯುತ್ ಉಪಕರಣಗಳ ಕಾರ್ಯಾಚರಣೆಯ ವೇಳೆ ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ.
Painter Dies After Electric Shock While Testing New Wall Putty Machine
Holehonnuru: A 26-year-old painter died after allegedly suffering an electric shock while testing a newly purchased wall putty sanding machine at his home in Holehonnuru on Tuesday, August 18.
The deceased has been identified as Sharukh Khan (26), a resident of Yadehalli.
According to available information, Sharukh Khan, who worked as a painter in Yadehalli and nearby villages, had recently purchased a Wall Care putty sanding machine for his painting work.
On Tuesday, he was reportedly testing the newly purchased machine at his residence to check its functioning when he allegedly received an electric shock.
He was immediately rushed to the Holehonnuru Community Health Centre after he became seriously unwell. However, doctors declared him dead on arrival, according to reports.
The sudden death of the young painter has come as a major shock to his family, friends and residents of Yadehalli and surrounding villages. Sharukh Khan had been earning his livelihood through painting work in the region.
Further details regarding the circumstances that led to the electric shock are awaited.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

