ಕಲ್ಪ ಮೀಡಿಯಾ ಹೌಸ್ | ಉಡುಪಿ |
ದೇವಸ್ಥಾನದ ಕೆರೆಯಲ್ಲಿ ಈಜಲು ತೆರಳಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಗರದ ಉಡುಪಿ (Udupi) ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದಿದೆ.
ಮೃತರನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಅವರ ಪುತ್ರ ಆದಿತ್ಯ ನಾಯಕ್ (15) ಎಂದು ಗುರುತಿಸಲಾಗಿದೆ. ಆದಿತ್ಯ ಕುಕ್ಕಿಕಟ್ಟೆಯ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಭಜನಾ ಕಾರ್ಯಕ್ರಮಕ್ಕೆ ಬಂದಿದ್ದ ವಿದ್ಯಾರ್ಥಿ
ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕೆಲವು ಭಕ್ತರು ದೇವಸ್ಥಾನದ ಕೆರೆಯಲ್ಲಿ ಈಜುತ್ತಿರುವುದನ್ನು ಗಮನಿಸಿದ ಆದಿತ್ಯ ಕೂಡ ನೀರಿಗಿಳಿದು ಈಜಲು ಆರಂಭಿಸಿದ್ದಾನೆ.
ಆದಿತ್ಯನೊಂದಿಗೆ ಬಂದಿದ್ದ ಸಂಬಂಧಿಗೆ ಈಜು ಬಾರದ ಕಾರಣ ಅವರು ಕೆರೆಗೆ ಇಳಿಯದೆ ದಡದಲ್ಲೇ ಉಳಿದಿದ್ದರು ಎಂದು ತಿಳಿದುಬಂದಿದೆ.
ಕೆರೆಯ ಮಧ್ಯಭಾಗದಲ್ಲಿ ಮುಳುಗಿ ನಾಪತ್ತೆ
ಈಜುತ್ತಿದ್ದ ಆದಿತ್ಯ ಕೆರೆಯ ಮಧ್ಯಭಾಗಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳದಲ್ಲಿದ್ದವರು ಆತಂಕಗೊಂಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ತಕ್ಷಣವೇ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದೆ.
ಒಂದು ಗಂಟೆ ಶೋಧ ಕಾರ್ಯಾಚರಣೆ
ಮಾಹಿತಿ ಪಡೆದ ಈಶ್ವರ ಮಲ್ಪೆ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಒಂದು ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆ ಬಳಿಕ ಆದಿತ್ಯನನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
Also Read>> ಬೆಂಗಳೂರು | ಬರೋಬ್ಬರಿ 75 ದಿನ MEMU ರೈಲುಗಳ ಸಂಚಾರ ಭಾಗಶಃ ರದ್ದು
ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ಘಟನೆ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮದ ಸಂಭ್ರಮದ ನಡುವೆ ದುರಂತದ ವಾತಾವರಣ ನಿರ್ಮಾಣವಾಯಿತು.
ಆಕಸ್ಮಿಕ ದುರ್ಘಟನೆ
ಕೆರೆಯಲ್ಲಿ ಈಜಲು ತೆರಳಿದ ವೇಳೆ ಈಜುವ ಸಾಮರ್ಥ್ಯ ಮತ್ತು ನೀರಿನ ಆಳದ ಬಗ್ಗೆ ಅರಿವಿಲ್ಲದಿರುವುದು ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
Udupi : 15-Year-Old Student Drowns in Temple Pond
Udupi: A 15-year-old student tragically drowned after he reportedly went missing while swimming in a temple pond at Sri Lakshmi Venkataramana Temple in Tenkapete, Udupi, on Tuesday afternoon.
The deceased has been identified as Aditya Nayak (15), son of Krishna Nayak, a resident of Bellampalli in Kukkikatte. Aditya was reportedly a student at a school in Kukkikatte.
Had Visited Temple for Bhajan Programme
According to available information, Aditya had come to the temple with a relative during the school holidays as a bhajan programme was being held at the temple.
During the programme, some devotees were swimming in the temple pond. Aditya reportedly noticed them and entered the water to swim as well. The relative who had accompanied him remained on the bank and did not enter the pond.
Went Missing in the Middle of the Pond
While swimming towards the middle of the pond, Aditya reportedly went underwater and disappeared. The incident caused panic among the people present at the temple.
The temple management was immediately informed and contacted renowned rescue and diving expert Eshwar Malpe for assistance.
Rescue Operation Lasted About an Hour
Eshwar Malpe and his team rushed to the spot and launched a search operation in the temple pond. After approximately one hour of searching, Aditya was brought out of the water.
He was immediately shifted to a private hospital in Udupi in a critical condition. However, doctors who examined him declared him brought dead.
The tragic incident has left the student’s family and the local community in grief, turning what was supposed to be a peaceful religious gathering into a scene of tragedy.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






