ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜೈನ್ ಪಬ್ಲಿಕ್ ಶಾಲೆ, ಶಿವಮೊಗ್ಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಭಕ್ತಿ, ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮವು ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭಗೊಂಡಿತು. ನಂತರ ಪುಟ್ಟ ರಾಧೆಯರು ಹಾಗೂ ಕೃಷ್ಣರ ಆಕರ್ಷಕ ವೇಷಭೂಷಣದೊಂದಿಗೆ ಹಬ್ಬದ ಸಂಭ್ರಮ ಮತ್ತಷ್ಟು ಕಳೆಗಟ್ಟಿತು.
ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲರಾದ ದಿವ್ಯಾ ಶೆಟ್ಟಿ, ಟಾಡ್ಲರ್ಸ್ ಸಂಯೋಜಕರಾದ ಬಿಂದು ಸೋಗಿ, ಪೋಷಕರು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಪೋಷಕರಿಗಾಗಿ ಮೂರು ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೋಷಕರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದರು.
Also read>> ಸ್ವಸ್ಥ ಸಮಾಜದ ನಿರ್ಮಾಣ ನಿರ್ಭಯ ಶಿಕ್ಷಕರಿಂದ ಮಾತ್ರ ಸಾಧ್ಯ: ಶಂಕರಾನಂದ ಅಭಿಪ್ರಾಯ
ಈ ಸಂಭ್ರಮವು ನಮ್ಮ ಸಂಸ್ಕೃತಿ, ಪರಂಪರೆ, ಒಗ್ಗಟ್ಟು ಹಾಗೂ ಮಕ್ಕಳ ಮುಗ್ಧ ಸಂತೋಷವನ್ನು ಸುಂದರವಾಗಿ ಪ್ರತಿಬಿಂಬಿಸಿತು. ಮಕ್ಕಳು ಮತ್ತು ಅವರ ಕುಟುಂಬದವರ ಮನದಲ್ಲಿ ಸದಾ ಉಳಿಯುವಂತಹ ಸವಿ ನೆನಪುಗಳನ್ನು ಈ ಆಚರಣೆ ಮೂಡಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









