ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
(SWR) ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮರಳಹಳ್ಳಿ ರೈಲು ನಿಲ್ದಾಣದಲ್ಲಿ ಮೂರು ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ (Train Stoppage) ನೀಡಲು ನಿರ್ಧರಿಸಿದೆ.
ಪ್ರಾಯೋಗಿಕ ಆಧಾರದ ಮೇಲೆ ಈ ನಿಲುಗಡೆ ಸೌಲಭ್ಯವನ್ನು 2026ರ ಸೆಪ್ಟೆಂಬರ್ 14ರಿಂದ ಡಿಸೆಂಬರ್ 13ರವರೆಗೆ ಮೂರು ತಿಂಗಳ ಅವಧಿಗೆ ಜಾರಿಗೊಳಿಸಲಾಗುತ್ತದೆ.
ಈ ಅವಧಿಯಲ್ಲಿ ಮರಳಹಳ್ಳಿ ನಿಲ್ದಾಣದಲ್ಲಿ ಕೆಳಗಿನ ರೈಲುಗಳು ಒಂದು ನಿಮಿಷ ನಿಲುಗಡೆ ಹೊಂದಲಿವೆ:
- ರೈಲು ಸಂಖ್ಯೆ 66534 – ಕೃಷ್ಣರಾಜಪುರಂ–ಕುಪ್ಪಂ MEMU ಪ್ಯಾಸೆಂಜರ್ : ಈ ರೈಲು ಮರಳಹಳ್ಳಿ ನಿಲ್ದಾಣಕ್ಕೆ ರಾತ್ರಿ 8:09ಕ್ಕೆ ಆಗಮಿಸಿ, 8:10ಕ್ಕೆ ನಿರ್ಗಮಿಸಲಿದೆ.
- ರೈಲು ಸಂಖ್ಯೆ 66511 – ಕೆಎಸ್ಆರ್ ಬೆಂಗಳೂರು–ಮರಿಕುಪ್ಪಂ MEMU ಪ್ಯಾಸೆಂಜರ್ : ಈ ರೈಲು ಮರಳಹಳ್ಳಿ ನಿಲ್ದಾಣಕ್ಕೆ ಮಧ್ಯಾಹ್ನ 1:39ಕ್ಕೆ ಆಗಮಿಸಿ, 1:40ಕ್ಕೆ ಹೊರಡಲಿದೆ.
- ರೈಲು ಸಂಖ್ಯೆ 66512 – ಮರಿಕುಪ್ಪಂ–ಕೆಎಸ್ಆರ್ ಬೆಂಗಳೂರು MEMU ಪ್ಯಾಸೆಂಜರ್ : ಈ ರೈಲು ಮರಳಹಳ್ಳಿ ನಿಲ್ದಾಣಕ್ಕೆ ಬೆಳಗ್ಗೆ 8:24ಕ್ಕೆ ಆಗಮಿಸಿ, 8:25ಕ್ಕೆ ನಿರ್ಗಮಿಸಲಿದೆ.
ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿರುವ ಈ ತಾತ್ಕಾಲಿಕ ನಿಲುಗಡೆಯಿಂದ ಮರಳಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ರೈಲು ಸೇವೆ ಬಳಸಿಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ. ಪ್ರಯಾಣಿಕರು ನಿಗದಿತ ಆಗಮನ ಮತ್ತು ನಿರ್ಗಮನ ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
SWR : 3 MEMU Trains to Get Temporary Stoppage at Maralahalli
Bengaluru: South Western Railway has announced a one-minute temporary stoppage at Maralahalli Railway Station for three MEMU passenger trains on an experimental basis.
The temporary stoppage will be effective for a period of three months, from September 14, 2026, to December 13, 2026.
Also read>> SWR : GM Reviews MEMU Operations and Infrastructure at Banaswadi
The details of the trains and their timings at Maralahalli Station are as follows:
- Train No. 66534 – Krishnarajapuram–Kuppam MEMU Passenger : The train will arrive at Maralahalli at 8:09 PM and depart at 8:10 PM
- Train No. 66511 – KSR Bengaluru–Marikuppam MEMU Passenger : The train will arrive at Maralahalli at 1:39 PM and depart at 1:40 PM
- Train No. 66512 – Marikuppam–KSR Bengaluru MEMU Passenger : The train will arrive at Maralahalli at 8:24 AM and depart at 8:25 AM
The temporary stoppage is expected to benefit passengers from Maralahalli and surrounding areas by providing them with an additional option to board and alight from these MEMU services.
Passengers are advised to take note of the revised stoppage timings and plan their journeys accordingly.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








