ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ವೀಲ್ಚೇರ್ ಕ್ರಿಕೆಟ್ ಪ್ರೀಮಿಯರ್ ಲೀಗ್ (Karnataka Wheelchair Cricket Premier League) ಸೀಸನ್–3 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬೆಂಗಳೂರು ರೆನೆಗೇಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಿಜಾಪುರ ಬ್ಲಾಸ್ಟರ್ಸ್ ತಂಡ ರನ್ನರ್ಅಪ್ ಸ್ಥಾನ ಪಡೆದಿದೆ. ಬೆಂಗಳೂರಿನ ಜೆ.ಪಿ. ನಗರದ ವಿ ಇ ಟಿ ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ (DMSA) ಆಯೋಜಿಸಿತ್ತು.
ಸೀಸನ್–3ರಲ್ಲಿ ಬೆಳಗಾವಿ ಬುಲ್ಸ್, ಬೆಂಗಳೂರು ರೆನೆಗೇಡ್ಸ್, ತುಮಕೂರು ಟೈಗರ್ಸ್ ಹಾಗೂ ಬಿಜಾಪುರ ಬ್ಲಾಸ್ಟರ್ಸ್ ಸೇರಿದಂತೆ ನಾಲ್ಕು ತಂಡಗಳು ಭಾಗವಹಿಸಿದ್ದವು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಾಲಿಕುರ್ಚಿ ಕ್ರಿಕೆಟಿಗರು ತಮ್ಮ ಕ್ರೀಡಾ ಪ್ರತಿಭೆ, ಆತ್ಮವಿಶ್ವಾಸ, ಪರಿಶ್ರಮ ಹಾಗೂ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು.
Karnataka Wheelchair Cricket Premier League : ಗಾಲಿಕುರ್ಚಿ ಕ್ರಿಕೆಟ್ಗೆ ಹೆಚ್ಚಿನ ಅವಕಾಶ
ಮುಖ್ಯ ಅತಿಥಿಯಾಗಿ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ವಿಶೇಷ ಅತಿಥಿಯಾಗಿ ಮಾಜಿ ಕಾರ್ಪೊರೇಟರ್ ಬಿ. ಸೋಮಶೇಖರ್ ಭಾಗವಹಿಸಿದ್ದರು. ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯ ದಿಲೀಪ್, ಡೊನೇಟ್ಕರ್ಟ್ ನ ಅಮೃತಾ ಹಾಗೂ ಸ್ಟ್ರೈತೇಜಿಕ್ ಟೈಂಔಟ್ ನ ಹರ್ಷ ಉಪಸ್ಥಿತರಿದ್ದರು.
Also Read>> ಬೆಂಗಳೂರು: “ನೃತ್ಯಪ್ರಭಾ” ಮೂಲಕ ಮಿಂಚಿದ ನೃತ್ಯ ನೀರಾಜನ
ಗಾಲಿಕುರ್ಚಿ ಕ್ರಿಕೆಟ್ಗೆ ಹೆಚ್ಚಿನ ಅವಕಾಶ, ಮಾನ್ಯತೆ ಮತ್ತು ಸಾಮಾಜಿಕ ಸ್ವೀಕೃತಿ ದೊರೆಯುವಂತೆ ಮಾಡುವಲ್ಲಿ ಕರ್ನಾಟಕ ವೀಲ್ಚೇರ್ ಕ್ರಿಕೆಟ್ ಪ್ರೀಮಿಯರ್ ಲೀಗ್ಪ್ರಮುಖ ವೇದಿಕೆಯಾಗಿದೆ. ಕ್ರೀಡೆಯ ಮೂಲಕ ದಿವ್ಯಾಂಗರಲ್ಲಿ ಆತ್ಮವಿಶ್ವಾಸ, ತಂಡಭಾವನೆ ಮತ್ತು ಸಾಮಾಜಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಸಂದೇಶವನ್ನು ಸೀಸನ್–3 ಸಾರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












