ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಶ್ವದ ನಾಲ್ಕನೇ ಅತಿ ದೊಡ್ಡ ಆಭರಣ ಚಿಲ್ಲರೆ ವ್ಯಾಪಾರ ಸಂಸ್ಥೆ (Malabar Gold Diamonds) ‘ಮಲಬಾರ್ ಗೋಲ್ಡ್ & ಡೈಮಂಡ್ಸ್’, ಬೆಂಗಳೂರಿನ (Bengaluru) ಡಿಕನ್ಸನ್ ರಸ್ತೆಯಲ್ಲಿರುವ ತನ್ನ ಶೋರೂಂ ಅನ್ನು ಪುನರಾರಂಭಿಸಿದೆ.
ಕಮರ್ಷಿಯಲ್ ಸ್ಟ್ರೀಟ್ ಸಮೀಪವಿರುವ ಈ ಸುಧಾರಿತ ಶೋರೂಂ ಅನ್ನು ಬಾಲಿವುಡ್ ನಟ ಅನಿಲ್ ಕಪೂರ್, ಸಂಸ್ಥೆಯ ಭಾರತೀಯ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕ ಓ. ಆಶರ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಫಿಲ್ಸೋರ್ ಬಾಬು ಉದ್ಘಾಟಿಸಿದರು.
10,058 ಚದರ ಅಡಿ ವಿಸ್ತೀರ್ಣಕ್ಕೆ ವಿಸ್ತರಿಸಲಾದ ಈ ಶೋರೂಂ ಅತ್ಯಾಧುನಿಕ ವಾತಾವರಣ ಹಾಗೂ ವ್ಯಾಪಕ ಆಭರಣ ಆಯ್ಕೆಗಳನ್ನು ಹೊಂದಿದೆ. ಪ್ರತಿ ಮಹಡಿಯನ್ನೂ ವಿಶೇಷ ‘ವೆಡ್ಡಿಂಗ್ ಅರೇನಾ’ ಆಗಿ ರೂಪಿಸಲಾಗಿದ್ದು, ವಿವಾಹ ಆಭರಣಗಳ ಬೃಹತ್ ಸಂಗ್ರಹ, ಹಗುರವಾದ ವಿನ್ಯಾಸಗಳು ಹಾಗೂ ‘ತಾಳಿ’ ಥೀಮ್ ಪ್ರದರ್ಶನವಿದೆ. ಜೊತೆಗೆ ಚಿನ್ನದ ನಾಣ್ಯಗಳು ಮತ್ತು ವಜ್ರಾಭರಣಗಳ ವಿಶೇಷ ಸಂಗ್ರಹವೂ ಲಭ್ಯವಿದೆ.
ಗ್ರಾಹಕರ ಅನುಕೂಲಕ್ಕಾಗಿ ಪ್ರತ್ಯೇಕ ಫೀಡಿಂಗ್ ರೂಮ್, ಸ್ಕೀಮ್ ಕೌಂಟರ್, ಬಿಲ್ಲಿಂಗ್ಗೆ ಹೆಚ್ಚುವರಿ ಕ್ಯಾಷಿಯರ್ ವ್ಯವಸ್ಥೆ ಮತ್ತು 211 ಆಸನ ಸೌಲಭ್ಯ ಕಲ್ಪಿಸಲಾಗಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯವಿದೆ.
ಈ ಕುರಿತು ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ. ಪಿ. ಅಹಮ್ಮದ್, “ಬೆಂಗಳೂರು ನಮಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವ, ವ್ಯಾಪಕ ಶ್ರೇಣಿಯ ಆಭರಣಗಳು ಮತ್ತು ಸುಧಾರಿತ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದರು.
Malabar Gold Diamonds : ವಿಶೇಷ ‘ಬೆಳ್ಳಿ ನಾಣ್ಯ’ ಕೊಡುಗೆ
ಶೋರೂಂನಲ್ಲಿ ಮೈನ್, ಪ್ರೆಷಿಯಾ, ಎರಾ ಮತ್ತು ವಿರಾಜ್ ಸೇರಿದಂತೆ ವಿವಿಧ ಉಪ-ಬ್ರ್ಯಾಂಡ್ಗಳ ಆಭರಣಗಳಿವೆ. ಪುನರಾರಂಭದ ಅಂಗವಾಗಿ ಅಕ್ಟೋಬರ್ 17ರಿಂದ 25ರವರೆಗೆ ವಿಶೇಷ ‘ಬೆಳ್ಳಿ ನಾಣ್ಯ’ ಕೊಡುಗೆಯನ್ನು ಘೋಷಿಸಲಾಗಿದೆ. ಚಿನ್ನ ಮತ್ತು ವಜ್ರಾಭರಣ ಖರೀದಿಗೆ ತೂಕದ ಆಧಾರದ ಮೇಲೆ ಉಚಿತ ಬೆಳ್ಳಿ ನಾಣ್ಯಗಳು ದೊರೆಯಲಿವೆ.
ಎಲ್ಲಾ ಚಿನ್ನಾಭರಣಗಳು HUID ಹೊಂದಿರುವ BIS ಹಾಲ್ಮಾರ್ಕ್ ಆಗಿದ್ದು, ‘ಮಲಬಾರ್ ಪ್ರಾಮಿಸಸ್’ ಅಡಿಯಲ್ಲಿ ಶೇ. 100ರಷ್ಟು ವಿನಿಮಯ ಮೌಲ್ಯ, ಪಾರದರ್ಶಕ ಬೆಲೆ ಮತ್ತು ಜೀವಿತಾವಧಿಯ ಉಚಿತ ನಿರ್ವಹಣೆ ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












