No Result
View All Result
Bharatanatyam Of Sukti Performance Sampattu Grace Rhythm copy
English Articles

Grace and Rhythm Mark Sukthi’s Bharatanatyam Performance at Sampattu

by kalpa News
October 19, 2026
0

Kalpa Media House  |  Special Article By Rasikapriya  | Sukthi T.R., a promising young Bharatanatyam dancer, captivated the audience with...

Read moreDetails
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
  • Advertise With Us
  • Grievances
  • About Us
  • Contact Us
Monday, October 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಬೆಂಗಳೂರು | ಮಧ್ವ ಜಯಂತಿಯಲ್ಲಿ ವಿವಿಧ ಕ್ಷೇತ್ರದ 8 ಸಾಧಕರಿಗೆ ಪ್ರಶಸ್ತಿ ಪ್ರದಾನ

kalpa News by kalpa News
October 26, 2026
in News, ಬೆಂಗಳೂರು ನಗರ
0
Bng Madhwa Jayanti 8 achievers awarded in various fields
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | 

ಜಗದ್ಗುರು ಶ್ರೀ ಮಧ್ವಾಚಾರ್ಯರ ದ್ವೈತ ವೇದಾಂತ ತತ್ತ್ವದ ಪ್ರಚಾರ ಹಾಗೂ ಮಾಧ್ವ ಸಮುದಾಯದ ಕ್ಷೇಮಾಭಿವೃದ್ಧಿಯ ಉದ್ದೇಶದಿಂದ ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಶನ್ (ನೋಂ.) ವತಿಯಿಂದ ಬೆಂಗಳೂರು (Bangalore) ಬಸವನಗುಡಿಯ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿದ್ದ ಮಧ್ವ ಜಯಂತಿ (Madhwa Jayanti) ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯ, ವೈದ್ಯಕೀಯ, ಶಿಕ್ಷಣ, ಉದ್ಯಮ ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ‘ಮಧ್ವ ವಿಜಯ’ ಮತ್ತು ‘ಹನುಮ ಮಧ್ವೇಶ’ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.PES Shivamogga

ದ್ವೈತ ಸಿದ್ಧಾಂತದ ಪ್ರಚಾರ ಶ್ಲಾಘನೀಯ

ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವ ಮಧ್ವಮತ ವೆಲ್ಫೇರ್ ಫೌಂಡೇಶನ್ ದ್ವೈತ ಸಿದ್ಧಾಂತದ ಪ್ರಚಾರದ ಜೊತೆಗೆ ಮಾಧ್ವ ಸಮುದಾಯದ ಕ್ಷೇಮಾಭಿವೃದ್ಧಿ, ಸಾಮರಸ್ಯ ಹಾಗೂ ಅಗತ್ಯವಿರುವವರಿಗೆ ನೆರವು ನೀಡುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮಧ್ವಾಚಾರ್ಯರ ತತ್ತ್ವ, ಸಿದ್ಧಾಂತ ಹಾಗೂ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದಿಂದ ಮಧ್ವ ಜಯಂತಿಯನ್ನು ಅಧಿಕೃತವಾಗಿ ಘೋಷಿಸುವಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಮುಳಗುಂದ್ ಅವರ ಪಾತ್ರ ಸ್ಮರಣೀಯವಾಗಿದೆ ಎಂದು ಇದೇ ವೇಳೆ ತಿಳಿಸಿದರು.

Also Read>> ಶಿವಮೊಗ್ಗ | ಪ್ಲೇಯರ್ ಆಗಿದ್ದೆ, ಈಗ ಆಂಪೈರ್-ಜಡ್ಜ್ ಆಗಿದ್ದೇನೆ: ಸಭಾಪತಿ ಸಲೀಂ ಅಹಮದ್

ನಾಲ್ವರಿಗೆ ‘ಮಧ್ವ ವಿಜಯ’ ಪ್ರಶಸ್ತಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಧಾರ್ಮಿಕ ಕ್ಷೇತ್ರದ ವಿದ್ವಾನ್ ಪವಮಾನಾಚಾರ್ಯ ಕಲ್ಲಾಪುರ, ಜ್ಯೋತಿಷಿ ಡಾ. ಪ್ರಸನ್ನಾಚಾರ್ಯ ಕಟ್ಟಿ, ದಾಸ ಸಾಹಿತ್ಯ ಪ್ರಸಾರಕ ಪ್ರಮೋದಾಚಾರ್ಯ ಹನಮಸಾಗರ್ ಹಾಗೂ ಅನುಮಾನತೀರ್ಥ ಆಚಾರ್ಯ ಅವರಿಗೆ ‘ಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಮಧ್ವ ತತ್ತ್ವ, ದಾಸ ಸಾಹಿತ್ಯದ ಪ್ರಸಾರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.

Kalahamsa Infotech private limited

ಸಾಧಕರಿಗೆ ‘ಹನುಮ ಮಧ್ವೇಶ’ ಪ್ರಶಸ್ತಿ

ವೈದ್ಯಕೀಯ, ಉದ್ಯಮ, ಶಿಕ್ಷಣ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರನ್ನು ‘ಹನುಮ ಮಧ್ವೇಶ’ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಯಿತು.

ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾಮರಾವ್, ಉದ್ಯಮಿ ಬಿ.ಎಸ್. ವೇದವ್ಯಾಸ, ನರಗುಂದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಶಚೀಂದ್ರ ಎಲ್. ನರಗುಂದ ಹಾಗೂ ಹಿರಿಯ ಪತ್ರಕರ್ತ, ‘ಕೋಲಾರ ವಾಣಿ’ ಸಂಪಾದಕ ಬಿ.ಎನ್. ಮುರಳಿಪ್ರಸಾದ್ ಅವರಿಗೆ ‘ಹನುಮ ಮಧ್ವೇಶ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಿ.ಎ. ಮುರಳಿ, ಸಂಸ್ಕೃತಿ ಚಿಂತಕ ಹಾಗೂ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಕೃಷ್ಣ ಎ.ಪಿ., ಸಂಸ್ಥಾಪಕ ಅಧ್ಯಕ್ಷ ವೆಂಕೋಬ ರಾವ್ ಬುಕ್ಕಸಾಗರ, ಸಹ ಸಂಸ್ಥಾಪಕ ಹಾಗೂ ಖಜಾಂಚಿ ಶ್ರೀನಿವಾಸ ಜೋಶಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಜೋಯಿಸ್, ಬೆಂಗಳೂರು ನಗರ ಅಧ್ಯಕ್ಷ ಅನಿಲ್ ಆಚಾರ್ಯ, ಮೋಹನ್ ಸೇರಿದಂತೆ ಫೌಂಡೇಶನ್‌ನ ವಿವಿಧ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Christ King

Kalpa News Advertising Disclaimer

Tags: Bangaloreಉತ್ತರಾದಿ ಮಠಬೆಂಗಳೂರುಮಧ್ವ ವಿಜಯ ಪ್ರಶಸ್ತಿಶ್ರೀಮಧ್ವ ಜಯಂತಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ಪ್ಲೇಯರ್ ಆಗಿದ್ದೆ, ಈಗ ಆಂಪೈರ್-ಜಡ್ಜ್ ಆಗಿದ್ದೇನೆ: ಸಭಾಪತಿ ಸಲೀಂ ಅಹಮದ್

Next Post

ಮೋದಿ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಖರ್ಗೆ ವಿರುದ್ಧ ಮೋಹನ್ ರೆಡ್ಡಿ ಕಿಡಿ

kalpa News

kalpa News

Next Post
Modi Personal remarks not acceptable Mohan Reddy slams Kharge

ಮೋದಿ ವಿರುದ್ಧ ವೈಯಕ್ತಿಕ ಟೀಕೆ ಸಲ್ಲದು: ಖರ್ಗೆ ವಿರುದ್ಧ ಮೋಹನ್ ರೆಡ್ಡಿ ಕಿಡಿ

No Result
View All Result
Bharatanatyam Of Sukti Performance Sampattu Grace Rhythm copy
English Articles

Grace and Rhythm Mark Sukthi’s Bharatanatyam Performance at Sampattu

by kalpa News
October 19, 2026
0

Kalpa Media House  |  Special Article By Rasikapriya  | Sukthi T.R., a promising young Bharatanatyam dancer, captivated the audience with...

Read moreDetails
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL