No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
  • Advertise With Us
  • Grievances
  • About Us
  • Contact Us
Thursday, October 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಅ. 30ರಿಂದ ಮೂರು ದಿನ ಎಒಎಕಾನ್–2026; ದೇಶ-ವಿದೇಶಗಳ 800 ವೈದ್ಯರು ಭಾಗಿ ನಿರೀಕ್ಷೆ

kalpa News by kalpa News
October 29, 2026
in News, ಶಿವಮೊಗ್ಗ
0
Shivampgga Aoacon 2026 800 doctors participation 3 day
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 

ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಪ್ರಸೂತಿ ಅರಿವಳಿಕೆ ಸೇವೆಗಳ ಅಂತರ ಕಡಿಮೆ ಮಾಡಿ, ಸುರಕ್ಷಿತ ಮಾತೃತ್ವಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪ್ರಸೂತಿ ಅರಿವಳಿಕೆ ತಜ್ಞರ ಸಂಘದ 19ನೇ ರಾಷ್ಟ್ರೀಯ ಸಮ್ಮೇಳನ (National Conference) ‘ಎಒಎಕಾನ್–2026’ ಅನ್ನು ಶಿವಮೊಗ್ಗದಲ್ಲಿ (Shivamogga) ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಜಿ.ಎಲ್. ರವೀಂದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 30ರಿಂದ ನ. 1ರವರೆಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಮ್ಮೇಳನ ನಡೆಯಲಿದ್ದು, ದೇಶ-ವಿದೇಶಗಳ ಸುಮಾರು 800 ವೈದ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

Shivamogga: ಸುರಕ್ಷಿತ ಮಾತೃತ್ವಕ್ಕೆ ಆದ್ಯತೆ

‘ಎಲ್ಲೆಡೆ ಸುರಕ್ಷಿತ ಮಾತೃತ್ವ: ನಗರ–ಗ್ರಾಮೀಣ ಪ್ರದೇಶಗಳ ನಡುವಿನ ಪ್ರಸೂತಿ ಅರಿವಳಿಕೆ ಸೇವೆಗಳ ಅಂತರ ಕಡಿಮೆ ಮಾಡುವುದು’ ಸಮ್ಮೇಳನದ ಮುಖ್ಯ ಆಶಯವಾಗಿದೆ. ಸಿಮ್ಸ್‍ನ ಅರಿವಳಿಕೆ ಶಾಸ್ತ್ರ ವಿಭಾಗ ಹಾಗೂ ಇಂಡಿಯನ್ ಸೊಸೈಟಿ ಆಫ್ ಅನಸ್ತೀಷಿಯಾಲಜಿಸ್ಟ್ಸ್ ಶಿವಮೊಗ್ಗ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.PES Shivamogga

ಮಾದರಿ ನೋಂದಣಿ ವ್ಯವಸ್ಥೆಯ (ಎಸ್‍ಆರ್‍ಎಸ್) 2021–23ರ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ ಮಾತೃ ಮರಣ ಅನುಪಾತ 88 ಇದೆ. ಕರ್ನಾಟಕದಲ್ಲಿ 68 ಹಾಗೂ ಕೇರಳದಲ್ಲಿ 24ಇದೆ. ಈ ಪ್ರಮಾಣವನ್ನು 20ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಸುವುದು ಗುರಿಯಾಗಿದೆ ಎಂದರು.

ಗರ್ಭಧಾರಣೆ ಮತ್ತು ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಸೆಳವು, ಸೆಪ್ಸಿಸ್ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಂತಹ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಪ್ರಸೂತಿ, ಅರಿವಳಿಕೆ, ನವಜಾತ ಶಿಶು ಹಾಗೂ ತೀವ್ರ ನಿಗಾ ಚಿಕಿತ್ಸಾ ತಂಡಗಳ ಸಮನ್ವಯ ಮತ್ತು ಸಕಾಲಿಕ ವೈಜ್ಞಾನಿಕ ಚಿಕಿತ್ಸೆ ತಾಯಿ-ಮಗುವಿನ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು.

ಕಾರ್ಯದರ್ಶಿ ಡಾ. ಬಿ.ವಿ. ಚಂಪಾ ಮಾತನಾಡಿ, ಸಮ್ಮೇಳನದ ಅಂಗವಾಗಿ ವಿವಿಧ ವೈದ್ಯಕೀಯ ವಿಷಯಗಳ ಕುರಿತು 4 ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಸಿಮ್ಸ್‍ನಲ್ಲಿ ಹೆರಿಗೆ ನೋವು ನಿವಾರಣೆ, ನಂಜಪ್ಪ ನಸಿರ್ಂಗ್ ಕಾಲೇಜ್ ಆಫ್ ಸೈನ್ಸಸ್‍ನಲ್ಲಿ ತೀವ್ರ ನಿಗಾ ಚಿಕಿತ್ಸೆಯಲ್ಲಿ ಅಲ್ಟ್ರಾಸೌಂಡ್ ಬಳಕೆ, ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ತಾಯಿಯ ಆರೋಗ್ಯದಲ್ಲಿ ಹಠಾತ್ ಕುಸಿತ ಉಂಟಾದಾಗ ಜೀವ ರಕ್ಷಿಸುವ ವಿಧಾನಗಳು ಹಾಗೂ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಅರಿವಳಿಕೆ ಸಂದರ್ಭದ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ತರಬೇತಿ ನಡೆಯಲಿದೆ ಎಂದರು.
ಪ್ರಸೂತಿ ಅರಿವಳಿಕೆ ತಜ್ಞರಿಗಾಗಿ ಅ. 31 ಮತ್ತು ನ. 1ರಂದು ಡಾ. ಸುನೀಲ್ ಪಾಂಡ್ಯ ನೇತೃತ್ವದಲ್ಲಿ ಎರಡು ದಿನಗಳ ‘ಪ್ರಸೂತಿ ತೀವ್ರ ನಿಗಾ ಚಿಕಿತ್ಸೆ’ ಪ್ರಮಾಣಪತ್ರ ತರಬೇತಿ ನಡೆಯಲಿದೆ. ಇದರಲ್ಲಿ 50 ವೈದ್ಯರು ಭಾಗವಹಿಸಲಿದ್ದು, ಸಿಮ್ಯುಲೇಷನ್ ಮಾದರಿಗಳ ಮೂಲಕ ತುರ್ತು ಪರಿಸ್ಥಿತಿಗಳ ನಿರ್ವಹಣೆಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದರು.Christ King

ತುರ್ತು ಸಂದರ್ಭದಲ್ಲಿ ತಂಡದ ಸಮನ್ವಯ ಅಗತ್ಯ

ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಸಿಂಗಪುರ ಮತ್ತು ಮಲೇಷೆ್ಯ ಸೇರಿದಂತೆ ವಿವಿಧ ದೇಶಗಳ ಸುಮಾರು 10 ಅಂತರರಾಷ್ಟ್ರೀಯ ತಜ್ಞರು ಹಾಗೂ ದೇಶದ ನೂರಕ್ಕೂ ಹೆಚ್ಚು ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣಗಳು, ಸಂಶೋಧನಾ ಪ್ರಬಂಧಗಳ ಮಂಡನೆ, ಉಪನ್ಯಾಸಗಳು, ಚರ್ಚೆಗಳು ಹಾಗೂ ವಿಶೇಷ ತರಗತಿಗಳು ನಡೆಯಲಿವೆ ಎಂದು ಹೇಳಿದರು.

2006ರಲ್ಲಿ 25ರಿಂದ 30 ಸದಸ್ಯರೊಂದಿಗೆ ಆರಂಭವಾದ ಸಂಘದ ರಾಷ್ಟ್ರೀಯ ಸಮ್ಮೇಳನ ಆಯೋಜನೆಗೆ ಈ ಬಾರಿ ಸುಮಾರು ₹1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಎಸ್. ಅಶ್ವಿನಿ, ಡಾ. ಎಂ.ಸಿ. ಶಿವಕುಮಾರ್ ಹಾಗೂ ಡಾ. ಸುನೀಲ್ ಪಾಂಡ್ಯ ಇದ್ದರು.

Also Read>> ನಂದಿನಿ ಹಾಲಿನ ದರ ಭಾರಿ ಏರಿಕೆ! ಎಷ್ಟು ಹೆಚ್ಚಳ? ನವೆಂಬರ್ 1 ರಿಂದಲೇ ಜಾರಿ!

ಸರ್ಜಿ ಆಸ್ಪತ್ರೆ: ದಾದಿಯರಿಗೆ ಉಚಿತ ತರಬೇತಿ

ಖಾಸಗಿ ಆಸ್ಪತ್ರೆಗಳು ಹಾಗೂ ನಸಿರ್ಂಗ್ ಹೋಮ್‍ಗಳಲ್ಲಿ ಪ್ರಸೂತಿ ಸೇವೆ ನೀಡುವ ದಾದಿಯರಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಹೆರಿಗೆ ಸಂದರ್ಭದಲ್ಲಿ ಎದುರಾಗುವ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಸ್ಪಂದಿಸುವ ಕೌಶಲ ಬೆಳೆಸುವುದು ಕಾರ್ಯಾಗಾರಗಳ ಉದ್ದೇಶವಾಗಿದೆ ಎಂದು ಕಾರ್ಯದರ್ಶಿ ಡಾ. ಬಿ.ವಿ. ಚಂಪಾ ತಿಳಿಸಿದರು.

ಅರವಳಿಕೆಯಿಂದ ಬೆನ್ನುನೋವು; ಆಧಾರವಿಲ್ಲ

ಸಿಸೇರಿಯನ್ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಬೆನ್ನುಮೂಳೆಯ ಮೂಲಕ ನೀಡುವ ಅರವಳಿಕೆಯಿಂದ ಮುಂದೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ದೈಹಿಕ ಚಟುವಟಿಕೆಯ ಕೊರತೆ, ಸ್ನಾಯುಗಳ ದೌರ್ಬಲ್ಯ ಹಾಗೂ ವಯೋಸಹಜ ಬದಲಾವಣೆಗಳು ಸೇರಿದಂತೆ ಹಲವು ಕಾರಣಗಳಿಂದ ಬೆನ್ನುನೋವು ಕಾಣಿಸಿಕೊಳ್ಳಬಹುದು ಎಂದು ಡಾ. ಜಿ.ಎಲ್. ರವೀಂದ್ರ ಅಭಿಪ್ರಾಯಪಟ್ಟರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Kalahamsa Infotech private limited

Kalpa News Advertising Disclaimer

Tags: AOACON-2026National conferenceShivamoggaಎಒಎಕಾನ್–2026ರಾಷ್ಟ್ರೀಯ ಸಮ್ಮೇಳನಶಿವಮೊಗ್ಗ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಂದಿನಿ ಹಾಲಿನ ದರ ಭಾರಿ ಏರಿಕೆ! ಎಷ್ಟು ಹೆಚ್ಚಳ? ನವೆಂಬರ್ 1 ರಿಂದಲೇ ಜಾರಿ!

Next Post

ಮಧ್ಯ ಕರ್ನಾಟಕದಲ್ಲೇ ಮೊದಲು | ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲೀಡ್’ಲೆಸ್ ಪೇಸ್’ಮೇಕರ್ ಅಳವಡಿಕೆ ಯಶಸ್ವಿ

kalpa News

kalpa News

Next Post
Shimoga SN Hospital Leadless Pacemaker Implant Success

ಮಧ್ಯ ಕರ್ನಾಟಕದಲ್ಲೇ ಮೊದಲು | ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಲೀಡ್'ಲೆಸ್ ಪೇಸ್'ಮೇಕರ್ ಅಳವಡಿಕೆ ಯಶಸ್ವಿ

No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL