No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
  • Advertise With Us
  • Grievances
  • About Us
  • Contact Us
Friday, October 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಶಿವಮೊಗ್ಗ ಮಾಸ್ಟರ್ ಪ್ಲಾನ್ 2041ಕ್ಕೆ ಆಕ್ಷೇಪ; ಹಸಿರು ವಲಯ, ವರ್ತುಲ ರಸ್ತೆ ಬದಲಾವಣೆಗೆ ವಿರೋಧ

ನಾಗರಿಕ ಹಿತರಕ್ಷಣಾ ವೇದಿಕೆಯಿಂದ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ

kalpa News by kalpa News
October 30, 2026
in News, ಶಿವಮೊಗ್ಗ
0
Shivamogga master plan 2041 objection
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ | 

ಶಿವಮೊಗ್ಗ–ಭದ್ರಾವತಿ ಮಹಾನಗರ ಯೋಜನೆ–2041ರ ಮಾಸ್ಟರ್ ಪ್ಲಾನ್ ರೂಪಿಸುವ ಸಂದರ್ಭದಲ್ಲಿ ಸಂಘ-ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸದೆ ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಕರಡು ಸಿದ್ಧಪಡಿಸಲಾಗಿದೆ ಎಂದು ಶಿವಮೊಗ್ಗ (Shivamogga) ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್‌ನ ಸಂಪೂರ್ಣ ವರದಿ, ಕರಡು ನಕ್ಷೆ ಹಾಗೂ ಪಿಡಿಎಫ್ ಪ್ರತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು. ಯೋಜನೆ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿ, ಸಾರ್ವಜನಿಕರಿಂದ ಬರುವ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಿದ ಬಳಿಕವೇ ಅಂತಿಮಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

Christ Kingವೆಬ್‌ಸೈಟ್‌ನಲ್ಲಿ ನಕ್ಷೆ ಪ್ರಕಟಿಸಿಲ್ಲ

ಕರಡು ಯೋಜನೆಯನ್ನು ಪ್ರಾಧಿಕಾರದ ಕಚೇರಿಯ ಒಳಭಾಗದ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. ಆದರೆ ಅದರಲ್ಲಿ ಅಧಿಕಾರಿಗಳ ಸಹಿ ಇಲ್ಲ. ಅಲ್ಲದೆ ಅಕ್ಷರಗಳು ಚಿಕ್ಕದಾಗಿದ್ದು, ಸಾರ್ವಜನಿಕರಿಗೆ ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಯೋಜನೆಯ ನಕ್ಷೆಯನ್ನು ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಿಲ್ಲ ಎಂದು ದೂರಿದರು.

ಬಡಾವಣೆಗಳ ಹೆಸರು, ಸ್ಥಳಗಳ ಗುರುತು, ರಸ್ತೆಗಳ ಹೆಸರು ಹಾಗೂ ರಸ್ತೆಗಳ ಅಗಲದ ವಿವರಗಳು ಇಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತವಾಗಿ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ತೊಂದರೆಯಾಗುತ್ತಿದೆ. ಆದ್ದರಿಂದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಆಗ್ರಹಿಸಿದರು.

Shivamogga: ವರ್ತುಲ ರಸ್ತೆ ಯೋಜನೆಗೆ ಆಕ್ಷೇಪ

ಮಹಾಯೋಜನೆ–2031ರಲ್ಲಿ 200 ಅಡಿ ರಸ್ತೆಯ ಪಕ್ಕದಲ್ಲಿ ಪ್ರಸ್ತಾಪಿಸಲಾಗಿದ್ದ ಆರು ಪ್ರಾದೇಶಿಕ ಉದ್ಯಾನಗಳ ಪೈಕಿ ಹಲವು ಯೋಜನೆಗಳನ್ನು ಕೈಬಿಟ್ಟಿರುವುದು ಅಥವಾ ಬದಲಾಯಿಸಿರುವುದಕ್ಕೆ ವಿರೋಧವಿದೆ ಎಂದು ವಸಂತ್ ಕುಮಾರ್ ಹೇಳಿದರು.

ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ 200 ಅಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗೆ ಸೇರಿಸಿರುವುದರಿಂದ ವರ್ತುಲ ರಸ್ತೆ ನಿರ್ಮಾಣದ ಮೂಲ ಉದ್ದೇಶವೇ ವಿಫಲವಾಗುವ ಆತಂಕವಿದೆ ಎಂದರು.

ಕೋಟೆ–ಗಂಗೂರು ರೈಲ್ವೆ ಹಳಿ ದಾಟಿದ ಬಳಿಕ ಖಜಾನೆ ಬಡಾವಣೆ ಮೂಲಕ ಹಾದುಹೋಗಬೇಕಿದ್ದ 200 ಅಡಿ ರಸ್ತೆ ಹಾಗೂ ಬಿ.ಆರ್. ರಸ್ತೆಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಮೂಲಕ ಅನುಪಿನಕಟ್ಟೆಯವರೆಗೆ ಸಂಪರ್ಕ ಕಲ್ಪಿಸಬೇಕಿದ್ದ ವರ್ತುಲ ರಸ್ತೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

PES Shivamoggaಹಸಿರು ವಲಯ ಬದಲಾವಣೆಗೂ ವಿರೋಧ

ಎಪಿಎಂಸಿ ಹಿಂಭಾಗದ ಶ್ರೀಗಂಧ ಕಾವಲು ಪ್ರದೇಶದ ಹಾಲಕೊಳದಲ್ಲಿರುವ ಅರಣ್ಯ ಇಲಾಖೆಯ ಸುಮಾರು 12.50 ಎಕರೆ ಜಾಗವನ್ನು ಹಸಿರು ವಲಯದ ಬದಲಿಗೆ ಸಾರ್ವಜನಿಕ ವಲಯವೆಂದು ಗುರುತಿಸಿರುವುದಕ್ಕೆ ವಿರೋಧವಿದೆ. ತಾವರೆಚನ್ನಹಳ್ಳಿ ಒಳಚರಂಡಿ ಸಂಸ್ಕರಣಾ ಘಟಕದ ಪಕ್ಕದ ಪ್ರದೇಶವನ್ನೂ ಹಸಿರು ವಲಯದಿಂದ ಸಾರ್ವಜನಿಕ ಪ್ರದೇಶವಾಗಿ ಬದಲಾಯಿಸಲಾಗಿದೆ ಎಂದು ದೂರಿದರು.

ಜ್ಞಾನನಗರಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೈಬಿಟ್ಟಿರುವುದು ಹಾಗೂ ವಿನೋಬನಗರ ಎರಡನೇ ಹಂತದ ಸಿ.ಎ. ನಿವೇಶನಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಬಗ್ಗೆಯೂ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು.

ಉದ್ಯಾನಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನೂ ಹಸಿರು ಪ್ರದೇಶದ ಭಾಗವಾಗಿ ಪರಿಗಣಿಸಿರುವುದರಿಂದ ವಾಸ್ತವಿಕ ಹಸಿರು ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣವನ್ನು ತೋರಿಸಲಾಗಿದೆ. ನಗರದ ನೈಜ ಹಸಿರು ಪ್ರದೇಶವು ಒಟ್ಟು ವಿಸ್ತೀರ್ಣದ ಶೇ.5ಕ್ಕಿಂತ ಕಡಿಮೆ ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು.

Also Read>> ಶಿವಮೊಗ್ಗ | ನ. 4ರಂದು ಶ್ರೀ ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ

ನದಿ ದಂಡೆಗಳಲ್ಲಿ ಹಸಿರು ಕಾರಿಡಾರ್‌ಗೆ ಒತ್ತಾಯ

ಮಲೆನಾಡಿನ ಪರಿಸರ ಸಂರಕ್ಷಣೆಗೆ ಮಹಾನಗರ ಯೋಜನೆ–2041ರಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಹೊಸ ಬಡಾವಣೆಗಳಲ್ಲಿ ಶೇ.15ರಿಂದ 20ರಷ್ಟು ಜಾಗವನ್ನು ನಗರ ಅರಣ್ಯೀಕರಣಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ತುಂಗಾ ಮೇಲ್ದಂಡೆ ಹಾಗೂ ತುಂಗಾ ಮತ್ತು ಭದ್ರಾ ನದಿಗಳ ಎರಡೂ ದಂಡೆಗಳಲ್ಲಿ ಕನಿಷ್ಠ 100 ಅಡಿ ಅಗಲದ ಹಸಿರು ಕಾರಿಡಾರ್ ನಿರ್ಮಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಹಸಿರು ಬಫರ್ ವಲಯಗಳನ್ನು ರೂಪಿಸಬೇಕು. ಹಸಿರು ಪರಿಸರ, ಶುದ್ಧ ಗಾಳಿ ಹಾಗೂ ಆರೋಗ್ಯಕರ ವಾತಾವರಣಕ್ಕೆ ಪೂರಕವಾಗುವ ರೀತಿಯಲ್ಲಿ ಮಹಾನಗರ ಯೋಜನೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಕ್ರೀಡಾಂಗಣ, ಟ್ರಕ್ ಟರ್ಮಿನಲ್‌ಗೆ ಬೇಡಿಕೆ

ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ ಕನಿಷ್ಠ ಐದು ಹೆಕ್ಟೇರ್ ವಿಸ್ತೀರ್ಣದ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಬೇಕು. ಬಿ.ಎಚ್. ರಸ್ತೆ ಹಾಗೂ ಹೊನ್ನಾಳಿ ರಸ್ತೆ ಭಾಗಗಳಲ್ಲಿ ತಲಾ ಒಂದು ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಿಸ್ತರಣೆಯಾಗುತ್ತಿರುವ ಬಡಾವಣೆಗಳಲ್ಲಿ ಆಟೊ ಮತ್ತು ಟ್ಯಾಕ್ಸಿ ನಿಲ್ದಾಣಗಳಿಗೆ ಸೂಕ್ತ ಸ್ಥಳ ಮೀಸಲಿಡಬೇಕು. ಸಾರ್ವಜನಿಕರ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಬೇಕು ಎಂದು ಹೇಳಿದರು.

ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಮುನ್ನ ಸಾರ್ವಜನಿಕ ವಿಚಾರಣೆ ನಡೆಸಿ, ಎಲ್ಲ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪರಿಗಣಿಸಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್, ಕೇಶವ ಮೂರ್ತಿ, ಮಹಮದ್ ಇಕ್ಬಾಲ್, ನಾಗರಾಜ್, ಭಾಸ್ಕರ್ ಶೆಟ್ಟಿ, ಜನಾರ್ಧನ್ ಪೈ, ಚನ್ನವೀರಪ್ಪ, ಆನಂದ್, ತಿಮ್ಮಣ್ಣ ಹಾಗೂ ಗೌರೀಶ್ ಭಾರ್ಗವ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Kalahamsa Infotech private limited

Kalpa News Advertising Disclaimer

Tags: Shivamogga Master plan 2041ನದಿ ದಂಡೆಗಳಲ್ಲಿ ಹಸಿರು ಕಾರಿಡಾರ್‌ಶಿವಮೊಗ್ಗ–ಭದ್ರಾವತಿ ಮಹಾನಗರ ಯೋಜನೆ–2041
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ನ. 4ರಂದು ಶ್ರೀ ರಾಮಕೃಷ್ಣ ಪಿಯು ಕಾಲೇಜು ಲೋಕಾರ್ಪಣೆ

Next Post

ಬದರಿನಾಥ ಹೆಲಿಕಾಪ್ಟರ್‌ ಕ್ರ್ಯಾಶ್‌: ಕರ್ನಾಟಕದ ಐವರು ಯಾತ್ರಿಕರು ಸೇರಿ 6 ಮಂದಿ ಮೃತ್ಯು

kalpa News

kalpa News

Next Post
Badrinath Helicopter crash Karnataka 6 dead

ಬದರಿನಾಥ ಹೆಲಿಕಾಪ್ಟರ್‌ ಕ್ರ್ಯಾಶ್‌: ಕರ್ನಾಟಕದ ಐವರು ಯಾತ್ರಿಕರು ಸೇರಿ 6 ಮಂದಿ ಮೃತ್ಯು

No Result
View All Result
Cyclone Arnab Effect Jharkhand Alert 15 Dist Heavy Rain
English Articles

Cyclone Arnab Effect: Jharkhand Braces for Heavy Rain and Winds Up to 60 kmph

by kalpa News
October 29, 2026
0

Kalpa Media House  |  Ranchi  |  The weather has changed across several parts of Jharkhand due to a low-pressure system...

Read moreDetails
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
Stiff fingers Your joints may be sending an early warning

Stiff fingers every morning? Your joints may be sending an early warning

October 12, 2026
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL