ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಮತ್ತು ಲಕ್ಷ್ಮೀ ದೇವಿಯ ಅನುಗ್ರಹವೂ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾದರೆ, ಲಕ್ಷ್ಮೀ ದೇವಿಯ (Lakshmi Devi) ಕೃಪೆ ಪಡೆಯಲು ಏನು ಮಾಡಬೇಕು? ಸಂಪತ್ತು ಮತ್ತು ಸಮೃದ್ಧಿ ನೆಲೆಸಲು ಯಾವ ಕ್ರಮಗಳನ್ನು ಅನುಸರಿಸಬೇಕು.
ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮಾನವನ ದೈನಂದಿನ ಜೀವನದಲ್ಲಿ ಹಣ (Money) ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬದ ನಿರ್ವಹಣೆ, ಶಿಕ್ಷಣ, ಆರೋಗ್ಯ, ಉದ್ಯೋಗ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಹಣದ ಅವಶ್ಯಕತೆ ಅನಿವಾರ್ಯವಾಗಿದೆ. ಪ್ರಪಂಚದಲ್ಲಿ ಎಲ್ಲ ಅವಶ್ಯಕತೆಗೂ ಹಣ ತೀರಾ ಅಗತ್ಯ. ಇಂತಹ ಹಣ ಯಾರಿಗೆ ಬೇಡ ಹೇಳಿ! ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಬೇಕು, ಕೈತುಂಬಾ ಸಂಪಾದನೆ ಮಾಡಬೇಕು ಎಂಬ ಕನಸು ಕಾಣುತ್ತಾರೆ. ಆದರೆ, ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟ ಮತ್ತು ಲಕ್ಷ್ಮೀ ದೇವಿಯ ಅನುಗ್ರಹವೂ ಸಂಪತ್ತು ವೃದ್ಧಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾದರೆ, ಲಕ್ಷ್ಮೀ ದೇವಿಯ (Lakshmi Devi) ಕೃಪೆ ಪಡೆಯಲು ಏನು ಮಾಡಬೇಕು? ಸಂಪತ್ತು ಮತ್ತು ಸಮೃದ್ಧಿ ನೆಲೆಸಲು ಯಾವ ಕ್ರಮಗಳನ್ನು ಅನುಸರಿಸಬೇಕು. ಸಂಪತ್ತು, ಸಮೃದ್ಧಿ ಮತ್ತು ಸೌಭಾಗ್ಯದ ಅಧಿದೇವತೆ ಎಂದೇ ಪೂಜಿಸಲ್ಪಡುವ ಲಕ್ಷ್ಮೀದೇವಿ ಯಾರ ಮನೆಯಲ್ಲಿ ನೆಲೆಸುತ್ತಾಳೆ? ಲಕ್ಷ್ಮಿಯ ಕೃಪೆ ಪಡೆಯಲು ಏನು ಮಾಡಬೇಕು? ಕೇವಲ ಪೂಜೆ, ವ್ರತ ಮತ್ತು ಧಾರ್ಮಿಕ ಆಚರಣೆಗಳಿಂದ ಮಾತ್ರ ಲಕ್ಷ್ಮಿಯ ಅನುಗ್ರಹ ಸಿಗುತ್ತದೆಯೇ? ಈ ಪ್ರಶ್ನೆಗಳಿಗೆ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಸರಳವಾದ, ಅರ್ಥಪೂರ್ಣವಾದ ನಾಲ್ಕು ಸೂತ್ರಗಳನ್ನು ನೀಡಿದ್ದಾರೆ.
ಅವರ ಪ್ರಕಾರ, ಸ್ವಚ್ಛತೆ, ಉಲ್ಲಾಸ, ಸೌಂದರ್ಯ ಮತ್ತು ಜ್ಞಾನದ ಬೆಳಕು ಇರುವ ಸ್ಥಳದಲ್ಲಿ ಲಕ್ಷ್ಮೀ ತತ್ತ್ವ ನೆಲೆಸುತ್ತದೆ. ಈ ನಾಲ್ಕು ಗುಣಗಳನ್ನು ನಮ್ಮ ಮನೆ, ಮನಸ್ಸು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಲಕ್ಷ್ಮಿಯನ್ನು ಆಹ್ವಾನಿಸುವ ಪ್ರಮುಖ ಮಾರ್ಗವಾಗಿದೆ.
1. ಸ್ವಚ್ಛತೆ ಇರುವಲ್ಲಿ ಲಕ್ಷ್ಮಿಯ ವಾಸ
ಲಕ್ಷ್ಮೀದೇವಿಗೆ ಅತ್ಯಂತ ಇಷ್ಟವಾದ ಸ್ಥಳವೆಂದರೆ ಸ್ವಚ್ಛತೆ ಇರುವ ಜಾಗ. ನಾವು ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಅಡುಗೆಮನೆಯ ಸಿಂಕ್, ಕೊಠಡಿಗಳು, ಕಿಟಕಿಗಳು, ಪರದೆಗಳು ಸೇರಿದಂತೆ ಮನೆಯ ಪ್ರತಿಯೊಂದು ಭಾಗವೂ ಶುಚಿಯಾಗಿರಬೇಕು.
ಮನೆಯ ಸುತ್ತಮುತ್ತಲಿನ ಪರಿಸರ ಕೊಳಕಾಗಿದ್ದರೆ, ನಮ್ಮ ದೇಹ ಮತ್ತು ಮನಸ್ಸುಗಳೂ ಶುದ್ಧವಾಗಿರದಿದ್ದರೆ ಅಂತಹ ಸ್ಥಳದಲ್ಲಿ ಲಕ್ಷ್ಮೀ ತತ್ತ್ವ ನೆಲೆಸಲು ಸಾಧ್ಯವಿಲ್ಲ ಎಂಬುದು ಗುರುದೇವರ ಅಭಿಪ್ರಾಯ.
ಹೀಗಾಗಿ, ಲಕ್ಷ್ಮಿಯ ಅನುಗ್ರಹ ಬಯಸುವವರು ಮೊದಲು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಾಹ್ಯ ಸ್ವಚ್ಛತೆಯ ಜತೆಗೆ ಆಂತರಿಕ ಶುದ್ಧತೆಗೂ ಆದ್ಯತೆ ನೀಡಬೇಕು.
2. ಉಲ್ಲಾಸ ಮತ್ತು ಆನಂದ ಇರಬೇಕು
ಲಕ್ಷ್ಮೀದೇವಿ ಆಗಮಿಸುವಾಗ ತನ್ನೊಂದಿಗೆ ಉಲ್ಲಾಸ ಮತ್ತು ಸಂತೋಷವನ್ನೂ ತರುತ್ತಾಳೆ. ಸಂಪತ್ತು ಮತ್ತು ಸಮೃದ್ಧಿಯ ಬಗ್ಗೆ ಯೋಚಿಸುವಾಗಲೇ ಮನುಷ್ಯನಲ್ಲಿ ಒಂದು ರೀತಿಯ ಉತ್ಸಾಹ ಹಾಗೂ ಸಂತೋಷ ಮೂಡುತ್ತದೆ.
ಆದ್ದರಿಂದ ಆನಂದ, ಉಲ್ಲಾಸ ಮತ್ತು ಸಕಾರಾತ್ಮಕ ಮನೋಭಾವ ಇರುವ ವಾತಾವರಣ ಲಕ್ಷ್ಮೀ ತತ್ತ್ವಕ್ಕೆ ಪೂರಕವಾಗಿದೆ. ಸದಾ ದುಃಖ, ನಿರಾಶೆ ಮತ್ತು ನಕಾರಾತ್ಮಕ ಆಲೋಚನೆಗಳಲ್ಲಿ ಮುಳುಗಿರುವುದಕ್ಕಿಂತ ಸಂತೋಷದಿಂದ ಜೀವನ ನಡೆಸುವುದು ಮುಖ್ಯ.
ಆದಿಶಂಕರಾಚಾರ್ಯರು ಬಾಲಕರಾಗಿದ್ದಾಗ ಭಿಕ್ಷೆಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಬಡ ಮಹಿಳೆಯೊಬ್ಬಳ ಮನೆಯ ಬಾಗಿಲಿಗೆ ಹೋದಾಗ, ಆಕೆಯ ಬಳಿ ನೀಡಲು ಯಾವುದೇ ಆಹಾರವಿರಲಿಲ್ಲ. ಆದರೆ ತನ್ನಲ್ಲಿದ್ದ ಒಂದೇ ಒಂದು ನೆಲ್ಲಿಕಾಯಿಯನ್ನು ಭಕ್ತಿಯಿಂದ ಭಿಕ್ಷಾಪಾತ್ರೆಯಲ್ಲಿ ಹಾಕಿದಳು. ಆಕೆಯ ನಿಷ್ಕಲ್ಮಶ ಭಕ್ತಿಗೆ ಮನಸೋತ ಬಾಲ ಶಂಕರರು ಲಕ್ಷ್ಮೀದೇವಿಯನ್ನು ಸ್ತುತಿಸಿ ಕನಕಧಾರಾ ಸ್ತೋತ್ರವನ್ನು ರಚಿಸಿ ಹಾಡಿದರು ಎಂಬುದು ಪೌರಾಣಿಕ ಕಥನ. ಈ ಸ್ತೋತ್ರದ ಮಹಿಮೆಯಿಂದ ಆ ಬಡ ಮಹಿಳೆಯ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆ ಸುರಿಯಿತು ಎಂಬ ಪ್ರತೀತಿಯೂ ಇದೆ.
ಮನೆಯಲ್ಲಿರುವ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಸಂತೋಷ ಮತ್ತು ಆತ್ಮೀಯತೆಯಿಂದ ಬದುಕಿದಾಗ ಆ ಮನೆಯ ವಾತಾವರಣವೇ ಸಕಾರಾತ್ಮಕವಾಗುತ್ತದೆ.
3. ಸೌಂದರ್ಯ ಮತ್ತು ಸರಳತೆಗೆ ಆದ್ಯತೆ ನೀಡಿ
ಲಕ್ಷ್ಮೀ ತತ್ತ್ವದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಸೌಂದರ್ಯ. ಸೌಂದರ್ಯವೆಂದರೆ ಕೇವಲ ಬಾಹ್ಯ ಅಲಂಕಾರವಲ್ಲ. ನಮ್ಮ ಮನೆ, ಸುತ್ತಮುತ್ತಲಿನ ಪರಿಸರ ಹಾಗೂ ಜೀವನಶೈಲಿಯಲ್ಲಿ ಅಚ್ಚುಕಟ್ಟುತನ ಮತ್ತು ಸಹಜ ಸೊಬಗು ಇರಬೇಕು.
Also Read>> ಬೆಂಗಳೂರು | ನ.18ರಂದು ‘ಸ್ಮರಿಸಿ ಬದುಕಿರೋ’ ವಿಶೇಷ ದಾಸವಾಣಿ ಕಾರ್ಯಕ್ರಮ ಆಯೋಜನೆ
ಮನೆಯ ವಾತಾವರಣ ಕಣ್ಣಿಗೆ ಹಿತವಾಗಿರುವಂತಿರಬೇಕು. ಅತಿಯಾದ ಆಡಂಬರಕ್ಕಿಂತ ಸರಳತೆ ಮತ್ತು ಸಹಜ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು.
ಲಕ್ಷ್ಮಿಯು ಒಲಿಯುವುದು ಸರಳತೆ ಮತ್ತು ಸಹಜವಾದ ಶುದ್ಧತೆಗೆ. ಹೀಗಾಗಿ ಜೀವನದಲ್ಲಿ ಸೌಂದರ್ಯವನ್ನು ಅಳವಡಿಸಿಕೊಳ್ಳುವುದು ಎಂದರೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುಂದರವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದಾಗಿದೆ.
4. ಜ್ಞಾನದ ಬೆಳಕು ಇರಲಿ
ಬೆಳಕು ಎಂದರೆ ಜ್ಞಾನ. ಆದರೆ ಅದು ಕಣ್ಣಿಗೆ ಚುಚ್ಚುವಂತಹ ತೀಕ್ಷ್ಣ ಬೆಳಕಲ್ಲ; ಚಂದಿರನ ಬೆಳದಿಂಗಳಿನಂತೆ ಮನಸ್ಸಿಗೆ ಹಿತ ನೀಡುವ ಸೌಮ್ಯವಾದ ಬೆಳಕು.
ಅದೇ ರೀತಿ, ಜ್ಞಾನವೂ ಸರಳವಾಗಿ, ಸಹಜವಾಗಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುವಂತಿರಬೇಕು. ಅತಿಯಾದ ಕ್ಲಿಷ್ಟತೆ ಮತ್ತು ಭಾರವಾದ ಜ್ಞಾನಕ್ಕಿಂತ ಸರಳವಾಗಿ ಅರ್ಥವಾಗುವ, ಬದುಕಿಗೆ ಬೆಳಕು ನೀಡುವ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಗುರುದೇವ ಶ್ರೀ ಶ್ರೀ ರವಿಶಂಕರ್ ವಿವರಿಸುತ್ತಾರೆ.
ಜ್ಞಾನವು ಅಹಂಕಾರವನ್ನು ಹೆಚ್ಚಿಸುವ ಬದಲು ವಿನಯ, ವಿವೇಕ ಮತ್ತು ಅರಿವನ್ನು ಬೆಳೆಸಬೇಕು. ಇಂತಹ ಸಹಜವಾದ ಶುದ್ಧ ಜ್ಞಾನವಿರುವ ಸ್ಥಳದಲ್ಲಿ ಲಕ್ಷ್ಮೀ ತತ್ತ್ವ ನೆಲೆಸುತ್ತದೆ.
ಕನಕಧಾರಾ ಸ್ತೋತ್ರದ ಹಿಂದಿದೆ ಬಂಗಾರದ ನೆಲ್ಲಿಕಾಯಿಯ ಕಥೆ!
ಲಕ್ಷ್ಮೀದೇವಿಯ ಅನುಗ್ರಹ ಮತ್ತು ಭಕ್ತಿಯ ಮಹತ್ವವನ್ನು ವಿವರಿಸುವಾಗ ಆದಿಶಂಕರಾಚಾರ್ಯರ ಕನಕಧಾರಾ ಸ್ತೋತ್ರದ ಪ್ರಸಂಗವನ್ನೂ ಗುರುದೇವರು ಉಲ್ಲೇಖಿಸಿದ್ದಾರೆ.
ಪ್ರತೀತಿಯ ಪ್ರಕಾರ, ಆದಿಶಂಕರಾಚಾರ್ಯರು ಬಾಲಕರಾಗಿದ್ದಾಗ ಭಿಕ್ಷೆಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಬಡ ಮಹಿಳೆಯೊಬ್ಬಳ ಮನೆಯ ಬಾಗಿಲಿಗೆ ಹೋದಾಗ, ಆಕೆಯ ಬಳಿ ನೀಡಲು ಯಾವುದೇ ಆಹಾರವಿರಲಿಲ್ಲ. ಆದರೆ ತನ್ನಲ್ಲಿದ್ದ ಒಂದೇ ಒಂದು ನೆಲ್ಲಿಕಾಯಿಯನ್ನು ಭಕ್ತಿಯಿಂದ ಭಿಕ್ಷಾಪಾತ್ರೆಯಲ್ಲಿ ಹಾಕಿದಳು.
ಆಕೆಯ ನಿಷ್ಕಲ್ಮಶ ಭಕ್ತಿಗೆ ಮನಸೋತ ಬಾಲ ಶಂಕರರು ಲಕ್ಷ್ಮೀದೇವಿಯನ್ನು ಸ್ತುತಿಸಿ ಕನಕಧಾರಾ ಸ್ತೋತ್ರವನ್ನು ರಚಿಸಿ ಹಾಡಿದರು ಎಂಬುದು ಪೌರಾಣಿಕ ಕಥನ. ಈ ಸ್ತೋತ್ರದ ಮಹಿಮೆಯಿಂದ ಆ ಬಡ ಮಹಿಳೆಯ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳ ಮಳೆ ಸುರಿಯಿತು ಎಂಬ ಪ್ರತೀತಿಯೂ ಇದೆ.
ಕನಕಧಾರಾ ಸ್ತೋತ್ರ ಎಂದರೆ ಬಂಗಾರದ ಧಾರೆಯನ್ನು ಹರಿಸುವ ಸ್ತೋತ್ರ ಎಂಬ ಅರ್ಥವಿದೆ. ಈ ಪ್ರಸಂಗವು ನಿಷ್ಕಲ್ಮಶ ಭಕ್ತಿ, ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುತ್ತದೆ.
Lakshmi Devi : ಈ ನಾಲ್ಕು ಗುಣಗಳಿರುವಲ್ಲಿ ಲಕ್ಷ್ಮೀ ತತ್ತ್ವದ ನೆಲೆ
ಲಕ್ಷ್ಮೀದೇವಿಯ ಅನುಗ್ರಹ ಪಡೆಯಲು ಕೇವಲ ಸಂಪತ್ತಿನ ಹಿಂದೆ ಓಡುವುದಷ್ಟೇ ಮುಖ್ಯವಲ್ಲ. ನಮ್ಮ ಜೀವನದಲ್ಲಿ ಸ್ವಚ್ಛತೆ, ಉಲ್ಲಾಸ, ಸೌಂದರ್ಯ ಮತ್ತು ಜ್ಞಾನದ ಬೆಳಕಿಗೆ ಸ್ಥಾನ ನೀಡಬೇಕು.
ಮನೆ ಸ್ವಚ್ಛವಾಗಿರಲಿ, ಮನಸ್ಸು ಸಂತೋಷದಿಂದ ಕೂಡಿರಲಿ, ಜೀವನದಲ್ಲಿ ಸರಳತೆ ಮತ್ತು ಸೌಂದರ್ಯವಿರಲಿ, ನಮ್ಮ ಆಲೋಚನೆಗಳಲ್ಲಿ ಜ್ಞಾನದ ಬೆಳಕಿರಲಿ. ಈ ನಾಲ್ಕು ಗುಣಗಳು ಎಲ್ಲಿ ಇರುತ್ತವೆಯೋ ಅಲ್ಲಿ ಲಕ್ಷ್ಮೀ ತತ್ತ್ವವು ಸಹಜವಾಗಿಯೇ ಬಂದು ಸೇರುತ್ತದೆ ಎಂಬುದು ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಸುಂದರ ಸಂದೇಶ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








