ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭೃಗು ಅಂಶ ಸಂಭೂತರಾದ ಶ್ರೀ ವಿಜಯದಾಸಾರ್ಯರ ಆರಾಧನಾ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ (Bengaluru) ‘ಸ್ಮರಿಸಿ ಬದುಕಿರೋ’ ಎಂಬ ವಿಶೇಷ ದಾಸವಾಣಿ (Dasavani) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ ವತಿಯಿಂದ ಶ್ರೀ ವಿಜಯದಾಸರ ಪೂರ್ವಾರಾಧನೆಯ ಪ್ರಯುಕ್ತ ನವೆಂಬರ್ 18ರಂದು ಸಂಜೆ 6 ಗಂಟೆಗೆ ಈ ಗಾನನಮನ ಕಾರ್ಯಕ್ರಮ ನಡೆಯಲಿದೆ.
Bengaluru: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕಾರ್ಯಕ್ರಮ
ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಖ್ಯಾತ ಗಾಯಕ ರಾಯಚೂರು ಶೇಷಗಿರಿ ದಾಸರು ಶ್ರೀ ವಿಜಯದಾಸರ ರಚನೆಗಳನ್ನು ಒಳಗೊಂಡ ವಿಶೇಷ ದಾಸವಾಣಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ವಿಜಯದಾಸರ ಭಕ್ತಿಗೀತೆಗಳು ಹಾಗೂ ದಾಸಸಾಹಿತ್ಯದ ಮೂಲಕ ದಾಸವರ್ಯರಿಗೆ ಗಾನನಮನ ಸಲ್ಲಿಸಲಾಗುತ್ತದೆ.
Also Read>> ಶಿವಮೊಗ್ಗ | ಪೊಲೀಸ್ ಮಕ್ಕಳ ವಾರ್ಷಿಕ ಕ್ರೀಡಾಕೂಟಕ್ಕೆ ಎಸ್ಪಿ ನಿಖಿಲ್ ಚಾಲನೆ
ಭಕ್ತರಿಗೆ ಆಹ್ವಾನ
ಶ್ರೀ ವಿಜಯರಾಯರ ಆರಾಧನಾ ಮಹೋತ್ಸವದ ಅಂಗವಾಗಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜತೆಗೆ ಶ್ರೀ ವಿಜಯರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹರಿದಾಸ ಸೇವಾ ಇಂಟರ್ನ್ಯಾಷನಲ್ ಟ್ರಸ್ಟ್ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










