No Result
View All Result
Pneumonia or Common Cold The Differece Before Its Too Late!
English Articles

Why pneumonia should never be mistaken for a common cold

by kalpa News
November 16, 2026
0

Learn why pneumonia should never be mistaken for a common cold. Understand the key symptoms, warning signs, health risks and...

Read moreDetails
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
  • Advertise With Us
  • Grievances
  • About Us
  • Contact Us
Tuesday, November 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

ಶಿವಮೊಗ್ಗ | ಕಲಿತ ವಿದ್ಯೆಯನ್ನು ಸನ್ಮಾರ್ಗ ಮತ್ತು ಸತ್ಕರ್ಮಕ್ಕೆ ಬಳಸಿ: ಡಾ. ಧನಂಜಯ ಸರ್ಜಿ

kalpa News by kalpa News
November 17, 2026
in News, ಶಿವಮೊಗ್ಗ
0
Shivamogga Dhananjaya Sarji Use education for good deeds
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 

ಮನಸ್ಸಿನೊಳಗೆ ಏನನ್ನು ತುಂಬಿಕೊಳ್ಳುತ್ತೇವೆ ಎಂಬುದರ ಮೇಲೆ ವ್ಯಕ್ತಿಯ ಜೀವನದ ಮೌಲ್ಯ ನಿರ್ಧಾರವಾಗುತ್ತದೆ. ಕಲಿತ ವಿದ್ಯೆಯನ್ನು (Education) ಸನ್ಮಾರ್ಗದಲ್ಲಿ ಮತ್ತು ಸತ್ಕರ್ಮಕ್ಕೆ ಬಳಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು. ಶಿವಮೊಗ್ಗ (Shivamogga) ನಗರದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಖಾಲಿ ಬಾಟಲಿಯಂತಾಗಬಾರದು. ಖಾಲಿ ಬಾಟಲಿಗೆ ಯಾವುದೇ ಬೆಲೆ ಇರುವುದಿಲ್ಲ. ಅದರಲ್ಲಿ ನೀರು ತುಂಬಿದರೆ ಇಪ್ಪತ್ತು ರೂಪಾಯಿಗೆ, ತುಪ್ಪ ತುಂಬಿದರೆ ಇನ್ನೂರು ರೂಪಾಯಿಗೆ ಮಾರಾಟವಾಗುತ್ತದೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಏನನ್ನು ತುಂಬಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಮತ್ತು ಜೀವನದ ಮೌಲ್ಯ ನಿರ್ಧಾರವಾಗುತ್ತದೆ. ಬಳ್ಳಿಯು ಕಸದಲ್ಲಿ ಹುಟ್ಟಿದರೂ ಎಲ್ಲೆಡೆ ಹರಡಿ ಹೂವುಗಳನ್ನು ಅರಳಿಸುವಂತೆ ನಮ್ಮ ಜೀವನವೂ ಇತರರಿಗೆ ಉಪಯುಕ್ತವಾಗಿರಬೇಕು ಎಂದರು.

ಇಂದಿನಿಂದ ನಿಮ್ಮ ನಿಜವಾದ ಜೀವನ ಆರಂಭವಾಗುತ್ತಿದೆ. ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಉತ್ತಮ ಅವಕಾಶ ನಿಮಗೆ ದೊರೆತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಆತ್ಮಕ್ಕೆ ನಿಜವಾದ ತೃಪ್ತಿ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Christ King

1857ರಲ್ಲಿ ನೋವು ನಿವಾರಕ ಔಷಧಿಯನ್ನು ಕಂಡುಹಿಡಿಯಲಾಯಿತು. ಆದರೆ ಅದಕ್ಕೂ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಗಿಡಮೂಲಿಕೆಗಳ ಮೂಲಕ ಔಷಧಿಗಳನ್ನು ತಯಾರಿಸುವ ಜ್ಞಾನವಿತ್ತು. ದೇಶದಲ್ಲಿ ಆಯುರ್ವೇದಕ್ಕೆ ಸಂಬಂಧಿಸಿದ ವಹಿವಾಟು ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಆಯುರ್ವೇದ ಔಷಧಿಗಳ ವಿದೇಶಿ ರಫ್ತು 20 ಸಾವಿರ ಕೋಟಿ ರೂಪಾಯಿ ದಾಟಿದೆ ಎಂದು ತಿಳಿಸಿದರು.

ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬಾಪೂಜಿ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್, ಬಾಪೂಜಿ ಸ್ಕೂಲ್ ಮತ್ತು ಕಾಲೇಜ್ ಆಫ್ ನರ್ಸಿಂಗ್ ಹಾಗೂ ಶ್ರೀ ರಾಘವೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಲಾಗಿದೆ. ಪ್ರಸ್ತುತ ಆರೋಗ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚುತ್ತಿದ್ದು, ಪದವೀಧರರು ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.

Shivamogga: ಆಯುರ್ವೇದ ಭಾರತದ ಅಸ್ಮಿತೆ: ಶಾಸಕ ಚನ್ನಬಸಪ್ಪ

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಹೊನ್ನಾಳಿ ಸಹೋದರರ ಈ ಸಂಸ್ಥೆ ರಾಜ್ಯಕ್ಕೆ ಹೆಮ್ಮೆ ತಂದಿದೆ. ಈಗಾಗಲೇ ಇಪ್ಪತ್ತು ಬ್ಯಾಚ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯುರ್ವೇದ ವೈದ್ಯರಾಗಿ ಹೊರಹೊಮ್ಮಿದ್ದಾರೆ. ಅನೇಕರು ವಿದೇಶಗಳಲ್ಲಿಯೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸನಾತನ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದಕ್ಕೆ ವಿಶೇಷ ಸ್ಥಾನಮಾನವಿದ್ದು, ಇಡೀ ವಿಶ್ವಕ್ಕೆ ಭಾರತದ ಆಯುರ್ವೇದ ದೊಡ್ಡ ಕೊಡುಗೆಯಾಗಿದೆ. ಆಯುರ್ವೇದ ನಮ್ಮ ದೇಶದ ಅಸ್ಮಿತೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ತಿಳುವಳಿಕೆ, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ನೀವೆಲ್ಲರೂ ಕಾರಣೀಭೂತರಾಗಬೇಕು ಎಂದು ಕರೆ ನೀಡಿದರು.

Kalahamsa Infotech private limitedಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಂ.ವಿ.ಪಿ. ಆರಾಧ್ಯ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ಶೀಲಾ ಎನ್.ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಆಯುರ್ವೇದ ಕಾಲೇಜುಗಳ ಪೈಕಿ ಬಾಪೂಜಿ ಆಯುರ್ವೇದ ಕಾಲೇಜು 58ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ 12ನೇ ಸ್ಥಾನ ಪಡೆದಿದೆ. ಎನ್‌ಸಿಹೆಚ್‌ಎಂ ಮಾನ್ಯತೆ ಹೊಂದಿರುವ ಕಾಲೇಜಿನಲ್ಲಿ 14 ಸುಸಜ್ಜಿತ ವಿಭಾಗಗಳು, 46 ಅನುಭವಿ ಬೋಧಕ ಸಿಬ್ಬಂದಿ, ಉತ್ತಮ ಪ್ರಯೋಗಾಲಯ ಹಾಗೂ 400ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಹೊಂದಿರುವ ಔಷಧೀಯ ಸಸ್ಯವನವಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.

Also Read>> ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಚಿವ ಮಧು ಬಂಗಾರಪ್ಪ; ಶಾಲಾ ಸಮಸ್ಯೆಗಳಿಗೆ ಸ್ಪಂದನೆ

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಸರ್ವಮಂಗಳಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಅಲ್ಲದೆ, ಕಮಲಮ್ಮ ಎಂ. ಮತ್ತು ಪಂಚಾಕ್ಷರಯ್ಯ ಸ್ಮಾರಕ ಹಿರಿಯರ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು.

ಖ್ಯಾತ ಗಾಯಕಿ ಬಿ.ಆರ್. ಛಾಯ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕೋಶಾಧಿಕಾರಿ ಎಂ.ಪಿ. ರಮೇಶ್, ಎ.ಎನ್. ವಿಜಯೇಂದ್ರರಾವ್, ಡಾ. ಎಂ. ವಿಶ್ವರಾಧ್ಯ, ಉಪಪ್ರಾಂಶುಪಾಲ ರವಿಕುಮಾರ್, ಎಂ.ಎಸ್. ಸುಷ್ಮಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಎಂ. ಶಿವಶಂಕರಯ್ಯ, ಡಾ. ನಿರಂಜನ್ ಕುಮಾರ್, ಡಾ. ಕವಿತಾ ಎಸ್.ಡಿ. ಮತ್ತು ಡಾ. ಸಂಜಯ್ ಎಸ್. ಭಾರದ್ವಾಜ್ ಅವರನ್ನು ಗೌರವಿಸಲಾಯಿತು.

ಬಾಪೂಜಿ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

PES Shivamogga

Kalpa News Advertising Disclaimer

Tags: Graduation CeremonyShivamoggaಡಾ. ಧನಂಜಯ ಸರ್ಜಿಪದವಿ ಪ್ರದಾನ ಸಮಾರಂಭಬಾಪೂಜಿ ವಿದ್ಯಾಸಂಸ್ಥೆಶಿವಮೊಗ್ಗ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಕ್ಕಳೊಂದಿಗೆ ಬಿಸಿಯೂಟ ಸವಿದ ಸಚಿವ ಮಧು ಬಂಗಾರಪ್ಪ; ಶಾಲಾ ಸಮಸ್ಯೆಗಳಿಗೆ ಸ್ಪಂದನೆ

Next Post

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಗೊಂಡ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಬಿಗ್ ಸ್ಟೇಟ್ಮೆಂಟ್!

kalpa News

kalpa News

Next Post
Shivamogga Flight service suspended Madhu Bangarappa statement

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಗೊಂಡ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಬಿಗ್ ಸ್ಟೇಟ್ಮೆಂಟ್!

No Result
View All Result
Pneumonia or Common Cold The Differece Before Its Too Late!
English Articles

Why pneumonia should never be mistaken for a common cold

by kalpa News
November 16, 2026
0

Learn why pneumonia should never be mistaken for a common cold. Understand the key symptoms, warning signs, health risks and...

Read moreDetails
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL