No Result
View All Result
Pneumonia or Common Cold The Differece Before Its Too Late!
English Articles

Why pneumonia should never be mistaken for a common cold

by kalpa News
November 16, 2026
0

Learn why pneumonia should never be mistaken for a common cold. Understand the key symptoms, warning signs, health risks and...

Read moreDetails
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
  • Advertise With Us
  • Grievances
  • About Us
  • Contact Us
Thursday, November 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home News

‘ಬೊಗಳುವುದು ನಾಯಿ, ಒದರುವುದು ಕತ್ತೆ’ | ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದ ಹರತಾಳು ಹಾಲಪ್ಪ

kalpa News by kalpa News
November 19, 2026
in News, ಶಿವಮೊಗ್ಗ
0
Madhu bangarappa Statement Haratalu Halappa Sharp Counter
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 

ಸಚಿವ ಮಧು ಬಂಗಾರಪ್ಪ (Madhu Bangarappa) ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ (Haratalu Halappa) ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ತಮ್ಮ ವಿರುದ್ಧ ಸಚಿವ ಮಧು ಬಂಗಾರಪ್ಪ ನೀಡಿರುವ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಹರತಾಳು ಹಾಲಪ್ಪ, ‘ಬೊಗಳುವುದು ನಾಯಿ, ಒದರುವುದು ಕತ್ತೆ. ಈ ಎರಡರಲ್ಲಿ ಸಚಿವ ಮಧು ಬಂಗಾರಪ್ಪ ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಅವರೇ ತೀರ್ಮಾನಿಸಲಿ’ ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧು ಬಂಗಾರಪ್ಪ ತಮ್ಮ ವಿರುದ್ಧ ಮಾಡಿರುವ ವೈಯಕ್ತಿಕ ಟೀಕೆಗಳಿಗೆ ಒಂದೊಂದಾಗಿ ಉತ್ತರ ನೀಡಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರೊಂದಿಗಿನ ತಮ್ಮ ಒಡನಾಟ, ರಾಜಕೀಯ ಜೀವನ ಹಾಗೂ ಕುಟುಂಬದ ಸಂಬಂಧಗಳ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

Kalahamsa Infotech private limited

ಬಂಗಾರಪ್ಪನವರ ಮನೆಯಲ್ಲಿ ನಾನು ಕೆಲಸಗಾರನಾಗಿರಲಿಲ್ಲ

‘ಹಾಲಪ್ಪ ನಮ್ಮ ಮನೆಯಲ್ಲಿ ನೆಲೆ ಒರೆಸುತ್ತಿದ್ದ, ನಾನು ಚಡ್ಡಿ ಕೊಡಿಸಿದ್ದೇನೆ’ ಎಂಬ ಮಧು ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಾಲಪ್ಪ, ಇಂತಹ ಅವಿವೇಕದ ಮಾತುಗಳನ್ನು ಶಿಕ್ಷಣ ಸಚಿವರಾದವರು ಆಡಬಾರದು ಎಂದು ಆಕ್ಷೇಪಿಸಿದರು.

ನಾನು ಕಾಲೇಜು ದಿನಗಳಿಂದಲೇ ಎಸ್. ಬಂಗಾರಪ್ಪನವರ ಅಭಿಮಾನಿ ಮತ್ತು ಅನುಯಾಯಿಯಾಗಿದ್ದೆ. ಅವರ ಮೇಲಿನ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನದಿಂದ ಅವರೊಂದಿಗೆ ಇದ್ದೆನೇ ಹೊರತು ಅವರ ಮನೆಯ ಕೆಲಸಗಾರನಾಗಿ ಎಂದಿಗೂ ಇರಲಿಲ್ಲ. ಅವರಿಂದ ಯಾವುದೇ ಸಂಬಳ ಅಥವಾ ಕೂಲಿ ಪಡೆದಿಲ್ಲ. ಬಂಗಾರಪ್ಪನವರ ಅಭಿಮಾನಿಗಳು ಅವರೊಂದಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಇದ್ದರೇ ಹೊರತು ಸಂಬಳಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ಮುಳುಗಡೆ ಸಂತ್ರಸ್ತರಾಗಿದ್ದ ಸಂದರ್ಭದಲ್ಲಿ ಮಧು ಬಂಗಾರಪ್ಪನವರ ಮಾವ ಸಾವಯವ ಆನಂದ ಅವರ ಮನೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಅಲ್ಲಿ ದಿನಕ್ಕೆ 3 ರೂ. ಕೂಲಿ ನೀಡುತ್ತಿದ್ದರು. ಇದನ್ನು ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಆದರೆ ಬಂಗಾರಪ್ಪನವರ ಮನೆಯಲ್ಲಿ ನಾನು ಎಂದಿಗೂ ಕೆಲಸ ಮಾಡಿಲ್ಲ. ನಾನು ಬಂಗಾರಪ್ಪನವರ ನಿಷ್ಠಾವಂತ ಅಭಿಮಾನಿ ಹಾಗೂ ಸಾರ್ವಜನಿಕ ಸೇವಕನಾಗಿದ್ದೆ. ಈ ಎರಡರ ನಡುವಿನ ವ್ಯತ್ಯಾಸ ಮಧು ಬಂಗಾರಪ್ಪನವರಿಗೆ ತಿಳಿದಿಲ್ಲ ಎಂದು ಟೀಕಿಸಿದರು.

Madhu Bangarappa: ಬಂಗಾರಪ್ಪನವರಿಗೆ ನೋವು ಕೊಟ್ಟಿದ್ದೇ ಮಧು ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರಿಗೆ ರಾಜಕೀಯ ಜೀವನದ ಕೊನೆಯ ದಿನಗಳಲ್ಲಿ ಅತ್ಯಂತ ನೋವು ಕೊಟ್ಟಿದ್ದು ಅವರ ಪುತ್ರ ಮಧು ಬಂಗಾರಪ್ಪ ಎಂದು ಹಾಲಪ್ಪ ಆರೋಪಿಸಿದರು.

ರಾಜಕೀಯ ಜೀವನದ ಕೊನೆಯ ಗಳಿಗೆಯಲ್ಲಿ ಮಧು ಬಂಗಾರಪ್ಪನವರನ್ನು ಒಮ್ಮೆಯಾದರೂ ಶಾಸಕನನ್ನಾಗಿ ಮಾಡಬೇಕು ಎಂದು ಬಂಗಾರಪ್ಪನವರು ಸದಾ ಹೇಳುತ್ತಿದ್ದರು. ಆದರೆ ಬಂಗಾರಪ್ಪನವರೊಂದಿಗೆ ಆತ್ಮೀಯರಾಗಿದ್ದ ಅನೇಕ ಸ್ನೇಹಿತರು ಹಾಗೂ ಹೋರಾಟಗಾರರನ್ನು ಅವರಿಂದ ದೂರ ಮಾಡಿದ್ದೇ ಮಧು ಬಂಗಾರಪ್ಪ ಎಂದು ಕಿಡಿಕಾರಿದರು.

1987ರಲ್ಲಿ ಬಂಗಾರಪ್ಪನವರ ಬಳಿ ಕೆಂಪು ಬಣ್ಣದ ಮಾರುತಿ ಕಾರು ಹಾಗೂ ನನ್ನ ಬಳಿ ಬಿಳಿ ಬಣ್ಣದ ಮಾರುತಿ ಕಾರು ಇತ್ತು. ಈ ವಿಚಾರವೂ ಮಧು ಬಂಗಾರಪ್ಪನವರಿಗೆ ತಿಳಿದಿಲ್ಲ. ಏಕೆಂದರೆ ಅವರು ಮನೆಯಲ್ಲಿ ಇರುತ್ತಿದ್ದುದೇ ಅಪರೂಪ. ಯಾವಾಗ ಬರುತ್ತಿದ್ದರು, ಎಲ್ಲಿಗೆ ಹೋಗುತ್ತಿದ್ದರು ಎಂಬುದೂ ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.

ನಾನು ಮಧು ಬಂಗಾರಪ್ಪನವರ ಬಳಿ ಎಂದಿಗೂ ಹಣ ಪಡೆದಿಲ್ಲ. ರಾಜಕೀಯ ಸಂದರ್ಭದಲ್ಲಿ ಅವರೇ ನನ್ನ ಬಳಿ ಹಣ ಪಡೆದಿದ್ದರು. ಸಮಾಜವಾದಿ ಪಕ್ಷಕ್ಕೆ ಸೇರಿದ ನಂತರ ಆ ಹಣವನ್ನು ಹಿಂದಿರುಗಿಸಿದ್ದರು. ಆದರೆ ನಾನು ಎಂದಿಗೂ ಹಣ ಪಡೆದು ಕೆಲಸ ಮಾಡುವ ಪಾವತಿ ನೌಕರನಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Christ King

ಅಪ್ಪನ ಹೆಸರಿನಿಂದ ಮಂತ್ರಿಯಾಗಿದ್ದಾರೆ

ಮಧು ಬಂಗಾರಪ್ಪ ಅವರ ರಾಜಕೀಯ ಬೆಳವಣಿಗೆಯನ್ನು ಪ್ರಶ್ನಿಸಿದ ಹಾಲಪ್ಪ, ತಂದೆಯ ಹೆಸರಿನ ಬಲದಿಂದ ಅವರು ಸಚಿವರಾಗಿದ್ದಾರೆ ಹೊರತು ಯಾವುದೇ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿ ಅಥವಾ ಹೋರಾಟಗಳಲ್ಲಿ ಭಾಗವಹಿಸಿ ಈ ಸ್ಥಾನಕ್ಕೆ ಬಂದಿಲ್ಲ ಎಂದು ಟೀಕಿಸಿದರು.

ಎಸ್. ಬಂಗಾರಪ್ಪನವರು ನಿಜವಾದ ಹೋರಾಟಗಾರ ಹಾಗೂ ರಾಜಕಾರಣಿಯಾಗಿದ್ದರು. ಅವರು ಚುನಾವಣೆಯಲ್ಲಿ ಐದು ಬಾರಿ ಸೋತು ಎರಡು ಬಾರಿ ಗೆದ್ದಿದ್ದರು. ಆದರೆ ಅವರ ಪುತ್ರನಿಗೆ ತಂದೆಯ ರಾಜಕೀಯ ಹೋರಾಟದ ಅನುಭವದ ಅರಿವಿಲ್ಲ ಎಂದು ವ್ಯಂಗ್ಯವಾಡಿದರು.

ಶಿಕ್ಷಣ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಾರ್ವಜನಿಕವಾಗಿ ಮಾತನಾಡುವಾಗ ಪದಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ನನ್ನ ಬಗ್ಗೆ ಹಾಗೂ ಯಡಿಯೂರಪ್ಪನವರ ಮಕ್ಕಳ ಬಗ್ಗೆ ಮಾತನಾಡುವಾಗ ಏಕವಚನದ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಗಾರಪ್ಪನವರ ಫೋಟೋ ಮನೆಯಿಂದ ತೆಗೆದಿಲ್ಲ

ತಮ್ಮ ಮನೆಯಿಂದ ಬಂಗಾರಪ್ಪನವರ ಫೋಟೋವನ್ನು ಹೊರಹಾಕಿದ್ದಾರೆ ಎಂಬ ಆರೋಪಕ್ಕೂ ಹಾಲಪ್ಪ ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ಬಂಗಾರಪ್ಪನವರ ಜನ್ಮದಿನ ಆಚರಣೆಯ ಫೋಟೋಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, ಸೊರಬದಲ್ಲಿ ಪ್ರತಿವರ್ಷ ಬಂಗಾರಪ್ಪನವರ ಜನ್ಮದಿನವನ್ನು ಆಚರಿಸುತ್ತೇನೆ. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದರೂ ಮನೆಯಲ್ಲಿಯೇ ಆಚರಣೆ ಮಾಡುತ್ತೇನೆ. ಬಂಗಾರಪ್ಪನವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಅವರ ಅಭಿಮಾನಿಗಳೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದರು.

PES Shivamogga

ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಹರಿಸಿ

ಸಚಿವ ಮಧು ಬಂಗಾರಪ್ಪ ಅವರ ಏಕವಚನದ ಹೇಳಿಕೆಗಳಿಗೆ ತಿರುಗೇಟು ನೀಡಿದ ಹಾಲಪ್ಪ, ಬೊಗಳುವುದು ನಾಯಿ, ಒದರುವುದು ಕತ್ತೆ ಎಂಬ ಪದಗಳನ್ನು ಬಳಸುವವರು ಅವುಗಳ ಅರ್ಥ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಯಡಿಯೂರಪ್ಪನವರ ಮಕ್ಕಳಿಗೆ ಕುಟುಂಬದ ಸಂಸ್ಕಾರವಿದೆ. ಬಂಗಾರಪ್ಪನವರ ಕುಟುಂಬದಲ್ಲಿಯೂ ಎಲ್ಲ ಮಕ್ಕಳಿಗೆ ಉತ್ತಮ ಸಂಸ್ಕಾರವಿದೆ. ಆದರೆ ಒಬ್ಬರಿಗೆ ಮಾತ್ರ ಅದು ಇಲ್ಲ ಎಂದು ಮಧು ಬಂಗಾರಪ್ಪನವರ ಹೆಸರನ್ನು ಉಲ್ಲೇಖಿಸದೆ ಟೀಕಿಸಿದರು.

ಈಗಿರುವ ಸಚಿವರು ವೈಯಕ್ತಿಕ ಟೀಕೆ, ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುವ ಬದಲು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕು. ಸರ್ಕಾರ ಈಗಾಗಲೇ ಬಜೆಟ್ ಮಂಡಿಸಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದೀರಿ ಎಂಬುದನ್ನು ಸಚಿವರು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.

ಟೂರಿಂಗ್ ಟಾಕೀಸ್ ಹೇಳಿಕೆಗೂ ತಿರುಗೇಟು

ತಮ್ಮನ್ನು ಟೂರಿಂಗ್ ಟಾಕೀಸ್ ಎಂದು ಕರೆದಿರುವ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಾಲಪ್ಪ, ಚುನಾವಣೆಯ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ರಾಜಕೀಯದಲ್ಲಿ ಸಾಮಾನ್ಯ. ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ, ಸಿದ್ದರಾಮಯ್ಯ ಬಾದಾಮಿಯಲ್ಲಿ ಹಾಗೂ ರಾಹುಲ್ ಗಾಂಧಿ ವಯನಾಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾದರೆ ಅವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ತಮ್ಮ ಮೇಲಿರುವ ಪ್ರಕರಣದ ಕುರಿತು ಮಾತನಾಡಿದ ಹಾಲಪ್ಪ, ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿರುವುದು ನಿಜ. ಆದರೆ ಜನತಾ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಹೊರಬಂದಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಬಂಗಾರಪ್ಪನವರ ಮೇಲೂ ಇಂತಹ ಪ್ರಕರಣಗಳಿದ್ದವು. ನಾವು ಮೂವರೂ ನ್ಯಾಯಾಲಯದ ವಿಚಾರಣೆ ಎದುರಿಸಿ ಅದರಿಂದ ಮುಕ್ತರಾಗಿದ್ದೇವೆ ಎಂದರು.

Also Read>> ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಟೂರ್ನಿ | ಸತತ ಮೂರು ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿ ಗೆದ್ದು ಮಿಂಚಿದ ಆಕಾಶ್

ತಮ್ಮ ವಿರುದ್ಧ ದೂರು ನೀಡಿದವರಿಗೆ ಬಂಗಾರಪ್ಪನವರ ಮನೆಯಿಂದ 192 ಬಾರಿ ದೂರವಾಣಿ ಕರೆ ಹೋಗಿದೆ ಎಂದು ಆರೋಪಿಸಿದ ಅವರು, ಈ ವಿಚಾರಕ್ಕೆ ಮಧು ಬಂಗಾರಪ್ಪ ಉತ್ತರಿಸಬೇಕು ಎಂದು ಸವಾಲು ಹಾಕಿದರು.

ಬಂಗಾರಪ್ಪನವರೊಂದಿಗೆ ಸುಮಾರು 21 ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಿದ್ದೇನೆ. ಆ ಸಂದರ್ಭದಲ್ಲಿ ಮಧು ಬಂಗಾರಪ್ಪ ಎಲ್ಲಿದ್ದರು? ಬಂಗಾರಪ್ಪನವರ ವಿರುದ್ಧ ಆ ಪ್ರಕರಣ ದಾಖಲಿಸಲು ಕಾರಣವಾಗಿದ್ದೂ ಕಾಂಗ್ರೆಸ್ ಪಕ್ಷವೇ ಎಂದು ಆರೋಪಿಸಿದರು.

ನಾನು ಶಾಸಕ ಸ್ಥಾನಕ್ಕಾಗಿ ಬಂಗಾರಪ್ಪನವರಿಗೆ ಅರ್ಜಿ ಸಲ್ಲಿಸಿರಲಿಲ್ಲ. ನನ್ನ ಸಾರ್ವಜನಿಕ ಸೇವೆ ಹಾಗೂ ಕಾರ್ಯವೈಖರಿಯನ್ನು ಗಮನಿಸಿ ಅವರು ನನಗೆ ಅವಕಾಶ ನೀಡಿದ್ದರು. ಅದರ ಫಲವಾಗಿ ಶಾಸಕನಾದೆ ಎಂದು ತಮ್ಮ ರಾಜಕೀಯ ಹಿನ್ನೆಲೆಯನ್ನು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಟಿ.ಡಿ. ಮೇಘರಾಜ್, ಪೆರುಮಾಳ್, ರವಿಕುಮಾರ್, ಕೇಶವ್, ಪೂವಪ್ಪ, ಪ್ರಶಾಂತ್ ಕುಕ್ಕೆ, ಅರುಣ್ ಕುಗ್ವೆ, ದರ್ಶನ್, ರೋಹಿತ್, ಮೂರ್ತಿ, ಚಂದ್ರಶೇಖರ್.ಎಸ್. ಹಾಗೂ ಮಂಜುನಾಥ್.ಎನ್. ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Kalpa News Advertising Disclaimer

Tags: Haratalu HalappaMinister Madhu BangarappaShivamoggaಶಾಸಕ ಮಧು ಬಂಗಾರಪ್ಪಶಿವಮೊಗ್ಗಹರತಾಳು ಹಾಲಪ್ಪ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕರ್ನಾಟಕ ರಾಜ್ಯ ಟೆನ್‌ಪಿನ್ ಬೌಲಿಂಗ್ ಟೂರ್ನಿ | ಸತತ ಮೂರು ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿ ಗೆದ್ದು ಮಿಂಚಿದ ಆಕಾಶ್

Next Post

ಸ್ಪರ್ಧೆಯ ಜೊತೆ ಅಸೂಯೆ ಇರಬಾರದು: ಡಾ. ಗಿರಿಧರ ಕಜೆ

kalpa News

kalpa News

Next Post
Bengaluru Pratibimba Grand Finale 13 regions Winners

ಸ್ಪರ್ಧೆಯ ಜೊತೆ ಅಸೂಯೆ ಇರಬಾರದು: ಡಾ. ಗಿರಿಧರ ಕಜೆ

No Result
View All Result
Pneumonia or Common Cold The Differece Before Its Too Late!
English Articles

Why pneumonia should never be mistaken for a common cold

by kalpa News
November 16, 2026
0

Learn why pneumonia should never be mistaken for a common cold. Understand the key symptoms, warning signs, health risks and...

Read moreDetails
South Western Railway Jeevan Pramaan 5 Camps Mysuru Division Nov 2026

South Western Railway Announces Jeevan Pramaan 5.0 Camps; Check Dates & Venues

November 4, 2026
Dasara Celebrations at Prasanna Venkateswara Swamy Temple

Resplendent Dasara Celebrations at Prasanna Venkateswara Swamy Temple

November 2, 2026
Cyclone Arnab Effect Jharkhand Alert 15 Dist Heavy Rain

Cyclone Arnab Effect: Jharkhand Braces for Heavy Rain and Winds Up to 60 kmph

October 29, 2026
Bharatanatyam Of Sukti Performance Sampattu Grace Rhythm copy

Grace and Rhythm Mark Sukthi’s Bharatanatyam Performance at Sampattu

October 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL