ಶಿವಮೊಗ್ಗ: ಐಟಿ ಹಾಗೂ ಸಿಬಿಐ ದಾಳಿಗಳ ವಿಚಾರದಲ್ಲಿ ರಾಜಕೀಯ ವಾಗ್ವಾದಗಳು ನಡೆಯುತ್ತಿರುವಂತೆಯೇ, ಕೇಂದ್ರದಲ್ಲಿ ಈ ಹಿಂದೆ ಯುಪಿಯ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ನಡೆದ ಐಟಿ, ಸಿಬಿಐ ದಾಳಿಗಳು ಕೇಂದ್ರದ ಕಾಂಗ್ರೆಸ್ ಸರ್ಕಾರದ ದಾಳಿಗಳಾ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮರುಪ್ರಶ್ನೆ ಹಾಕಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಡಿಕೆ ಬ್ರದರ್ಸ್ ಗಳ ಮೇಲೆ ನಡೆದ ಐಟಿ ಹಾಗೂ ಸಿಬಿಐ ದಾಳಿಗಳು ಕೇಂದ್ರದ ನರೇಂದ್ರ ಮೋದಿಯ ಸರ್ಕಾರದ ಕುಮ್ಮಕ್ಕು ಎಂದು ಬೊಬ್ಬೆ ಹಾಕುತ್ತಿದ್ದಾರೆ. ಹಾಗಾದರೆ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ನಡೆದ ದಾಳಿಗಳು ಏನು ಎಂದು ಕೇಳಿದರು.
ಈ ರೀತಿಯ ದಾಳಿಗಳು ನಡೀತ ಇರುತ್ತದೆ. ಇದನ್ನು ಧೈರ್ಯದಿಂದ ಎದುರಿಸಬೇಕು. ಕಳಂಕಿತರ ವಿಚಲಿತರಾಗಬೇಕೆ ವಿನಾ ಪ್ರಾಮಾಣಿಕರು ಎದುರುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿರುವುದು ವಿಚಿತ್ರ ಮಗುವಿನ ಆಕಾರದ ಸರ್ಕಾರ. ಹತ್ತು ಕೈ, ಹೊಟ್ಟೆದಪ್ಪ ಕೈಕಾಲು ಸಣ್ಣ ಇಂತಹ ಮಗುವಿಗೆ ಆಯಸ್ಸು ಕಮ್ಮಿ, ಅಂತಹ ಸರ್ಕಾರವೂ ಸಹ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿರುವುದರಿಂದ ಇದಕ್ಕೂ ಆಯಸ್ಸು ಕಮ್ಮಿ ಯಾವಾಗ ಬೇಕಾದರೂ ಸರ್ಕಾರ ಬಿದ್ದುಹೋಗುವ ಸಾದ್ಯತೆ ಇದೆ ಎಂದರು.
















